ಚುನಾವಣೆ ಬಾಂಡ್‌: ರಾಜಕೀಯ ದೇಣಿಗೆ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಬೇಕಿದೆ

Update: 2024-02-16 12:06 GMT

ಚುನಾವಣೆ ಬಾಂಡ್‌ಗಳನ್ನು ಅಮಾನ್ಯಗೊಳಿಸುವ ಸುಪ್ರೀಂ ಕೋರ್ಟ್ ತೀರ್ಪು ಮೂರು ಅಂಶಗಳಿಂದಾಗಿ ಸ್ವಾಗತಾರ್ಹ: ಒಂದು,ಮತದಾರನಿಗೆ ತಿಳಿದುಕೊಳ್ಳುವ ಹಕ್ಕು ಇದೆ ಎಂಬ ತತ್ವವನ್ನು ಎತ್ತಿಹಿಡಿಯುತ್ತದೆ; ಎರಡನೆಯದಾಗಿ, ರಾಜಕೀಯ ನಿಧಿಯು ಸುಧಾರಣೆ ಎನ್ನುವ ತಪ್ಪು ಕಲ್ಪನೆಯನ್ನು ತೆಗೆದುಹಾಕುತ್ತದೆ ಹಾಗೂ ಮೂರನೆಯದಾಗಿ, ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ವಿಶ್ವಾಸ ಮತ್ತು ನಂಬಿಕೆಯನ್ನು ಮರುಸ್ಥಾಪಿಸುತ್ತದೆ. ವಿವಾದಾತ್ಮಕ ವಿಷಯಗಳಲ್ಲಿ ಸರ್ಕಾರದ ನಿಲುವಿಗೆ ಸಮ್ಮತಿ ನೀಡುವ ಮೂಲಕ ಕಳೆದುಕೊಂಡಿದ್ದ ನಂಬಿಕೆಯನ್ನು ಮರುಸ್ಥಾಪಿಸಿದೆ. 

ಕಾರ್ಪೊರೇಟ್ ಹಣ ಬಹಿರಂಗಗೊಳ್ಳುವುದೇ?:

ಆದರೆ, ಸ್ವಾಗತಾರ್ಹವಲ್ಲದ ಎರಡು ಅಂಶಗಳಿವೆ. ಮೊದಲನೆಯದು- 2017 ರಿಂದ ಚುನಾವಣೆ ಬಾಂಡ್‌ಗಳ ಮೂಲಕ ಪಕ್ಷಗಳು ಸ್ವೀಕರಿಸಿದ ಹಣದ ವಿವರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಚುನಾವಣೆ ಆಯೋಗಕ್ಕೆ ನೀಡಬೇಕೆಂಬ ನಿರ್ದೇಶನ.ಈ ಮಾಹಿತಿಯನ್ನು ಆಯೋಗವು ತನ್ನ ಜಾಲತಾಣದಲ್ಲಿ ಪ್ರಕಟಿಸಬೇಕು ಮತ್ತು ಎರಡನೆಯದು, ಆಯೋಗವು ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆ ನೀಡುವಲ್ಲಿ ಪಕ್ಷಪಾತ ನಡೆಯುತ್ತಿದೆಯೇ ಎಂಬುದನ್ನು ಆಯೋಗ ಗಮನಿಸುತ್ತಿರಬೇಕು.

ಸಾರ್ವಜನಿಕ ಹಿತಾಸಕ್ತಿಗಳನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ರಾಜಕೀಯ ಪಕ್ಷಗಳಿಗೆ ಯಾವ ಕಂಪನಿ ಮತ್ತು ಎಷ್ಟು ದೇಣಿಗೆ ನೀಡಿದೆ ಎಂಬುದನ್ನು ತಿಳಿದುಕೊಳ್ಳಲು ಹಕ್ಕು ಸಾರ್ವಜನಿಕರಿಗೆ ಇದೆ. ಈ ಹಕ್ಕನ್ನು ಕಡೆಗಣಿಸಿ ಚುನಾವಣೆ ಬಾಂಡ್‌ಗಳ ಮೂಲಕ ಪಕ್ಷಗಳಿಗೆ ಧನಸಹಾಯ ಮಾಡಲು ಕಂಪನಿಗಳಿಗೆ ಸಂಸತ್ತು ಅವಕಾಶ ಕೊಟ್ಟಿತು ಮತ್ತು ಗೌಪ್ಯತೆಯ ಭರವಸೆ ನೀಡಿತು. ಸುಪ್ರೀಂ ಕೋರ್ಟ್ ಈ ಗೋಪ್ಯತೆಯ ಮುಸುಕನ್ನು ಕಿತ್ತುಹಾಕಿದೆ. ಕಂಪನಿಗಳು ಭವಿಷ್ಯದಲ್ಲಿ ಸರ್ಕಾರಿ ಯೋಜನೆಯನ್ನು ನಂಬುತ್ತವೆಯೇ?ಇಂಥ ಬಹಿರಂಗಪಡಿಸುವಿಕೆ ಹೆಚ್ಚೇನೂ ಪ್ರಯೋಜನಕಾರಿಯಲ್ಲ. ಏಕೆಂದರೆ, ಇದು ಪಕ್ಷಗಳಿಗೆ ಕಾರ್ಪೊರೇಟ್‌ ಕಂಪನಿಗಳು ನಿಡುವ ಹಣದ ಒಂದು ಸಣ್ಣ ಪಾಲು ಅಷ್ಟೇ.

ರಾಜಕೀಯ ದೇಣಿಗೆಯ ಚರಿತ್ರೆ:

ದೇಶದಲ್ಲಿ ಪಾರದರ್ಶಕ ರಾಜಕೀಯ ದೇಣಿಗೆ ವ್ಯವಸ್ಥೆ ಇಲ್ಲ. ವಸಾಹತುಶಾಹಿ ಕಾಲದಲ್ಲಿ ರಾಜಕೀಯ ಚಟುವಟಿಕೆ ಪ್ರಾರಂಭವಾಯಿತು ಮತ್ತು ಕಾಂಗ್ರೆಸ್‌ಗೆ ದೇಣಿಗೆ ನೀಡಲಾಯಿತು. ಈಂಥವರನ್ನು ರಾಷ್ಟ್ರೀಯ ದಂಗೆಗೆ ಹಣ ನೀಡಿದವರು ಎಂದು ಗುರುತಿಸಲಾಗುತ್ತಿತ್ತು. ಕಾಂಗ್ರೆಸ್‌ ರಾಜಕೀಯಕ್ಕಾಗು ಹಣ ಸಂಗ್ರಹಿಸುತ್ತಿತ್ತು ಮತ್ತು ಅದನ್ನು ರಾಜಕೀಯಕ್ಕಾಗಿಯೇ ಬಳಸುತ್ತಿತ್ತು. ಕಮ್ಯುನಿಸ್ಟರು ಜನರಿಂದ ನಿಧಿ ಸಂಗ್ರಹಿಸಿದರು, ಮತ್ತು ಆದರೆ, ಕಮ್ಯುನಿಸ್ಟರಿಗೆ ಧನಸಹಾಯ ಮಾಡಿದವರನ್ನು ಸೋವಿಯತ್ ಪರ ಸಹಾನುಭೂತಿಯುಳ್ಳವರು ಎಂದು ಯಾರೂ ಗುರುತಿಸಲಿಲ್ಲ. ಎಲ್ಲಾ ರಾಜಕೀಯ ಸಂಘಟನೆಗಳು ದೇಣಿಗೆಯನ್ನು ಅಪಾರದರ್ಶಕವಾಗಿ ಇರಿಸಿದವು. ಈ ಸಂಪ್ರದಾಯವು ಸ್ವತಂತ್ರ ಭಾರತದಲ್ಲೂ ಮುಂದುವರಿಯಿತು. 

ಆರಂಭಿಕ ದಿನಗಳಲ್ಲಿ ನಿಷ್ಠುರ  ಖಜಾಂಚಿಗಳು ದೇಣಿಗೆಯನ್ನು ರಾಜಕೀಯ ಚಟುವಟಿಕೆಗೆಗೆ ಮಾತ್ರ ಬಳಸುತ್ತಾರೆ ಎಂದು ಖಾತ್ರಿಪಡಿಸುತ್ತಿದ್ದರು. ಆದರೆ, ಕಾಲಾಂತರದಲ್ಲಿ ನೈತಿಕತೆ ಕುಸಿಯಿತು. ದೇಣಿಗೆಯನ್ನು ಕೆಲಸ ಮಾಡಿಕೊಡಲು ಕೊಡಲಾಗುತ್ತಿತ್ತು ಮತ್ತು ಉದ್ಯಮಗಳು ಯಾವುದೇ ತೊಂದರೆ ಇಲ್ಲದಂತೆ ವ್ಯವಹಾರ ನಡೆಸಲು ಸುಲಿಗೆ ಮಾಡಲಾಗುತ್ತಿತ್ತು. ಹಣ ರಾಜಕೀಯ ಹಣಾಹಣಿಗೆ ಬಳಕೆಯಾಯಿತಲ್ಲದೆ, ಕೆಲವರ ತಿಜೋರಿಯನ್ನು ತುಂಬಿತು. ಕಾರ್ಪೊರೇಟ್ ಕುಳಗಳಿಗೆ ಸರ್ಕಾರ ವಿಶೇಷ ಅನುಕೂಲ ಒದಗಿಸುವುದು ಅಥವಾ ನಾಗರಿಕ ಸೇವೆಯ ಅಧಿಕಾರಿಗಳ ನೆರವಿನಿಂದ ಸುಲಿಗೆ ಮಾಡುತ್ತಿತ್ತು. ಇದರಿಂದ ಆಡಳಿತ ಯಂತ್ರದ ಋಜುತ್ವಕ್ಕೆ ಧಕ್ಕೆಯುಂಟಾಯಿತು ಹಾಗೂ ಆ ಅಧಿಕಾರಿಗಳೂ ಸುಲಿಗೆ ಆರಂಭಿಸಿದರು. 

'ಅಕ್ರಮ' ರಾಜಕೀಯಕ್ಕೆ ಹಣ ಹೂಡಿಕೆ: ರಾಜಕೀಯ ಎನ್ನುವುದು ವೆಚ್ಚದ ವ್ಯವಹಾರ. ನಾಗರಿಕರು ತಮ್ಮ ಪಕ್ಷಕ್ಕೆ ಸಕ್ರಿಯವಾಗಿ ಕೊಡುಗೆ ನೀಡುವುದು ಅಪರೂಪ. ಪಕ್ಷಗಳು ತಮ್ಮ ವೆಚ್ಚವನ್ನು ತಾವೇ ಸಂಗ್ರಹಿಸಿಕೊಳ್ಳಬೇಕು ಎಂದು ಜನರು ನಿರೀಕ್ಷಿಸುತ್ತಾರೆ. ರಾಜಕೀಯ ಪಕ್ಷಗಳು ಖಂಡಿತವಾಗಿಯೂ ಅದನ್ನು ಮಾಡುತ್ತವೆ; ಕಂಪನಿಗಳಿಂದ ದೇಣಿಗೆ ಸಂಗ್ರಹಿಸುತ್ತವೆ. 

ದೇಶದಲ್ಲಿನ ರಾಜಕೀಯ ಚಟುವಟಿಕೆಗಳಲ್ಲಿ ಹೆಚ್ಚಿನದು ಕಾನೂನುಬಾಹಿರ. ಅದನ್ನು ಯಾವುದೇ ಲೆಕ್ಕದ ಪುಸ್ತಕದಲ್ಲಿ ತೋರಿಸುವುದಿಲ್ಲ. ಶಾಸಕರ ಪಕ್ಷಾಂತರಕ್ಕೆ ಅಥವಾ ಪಕ್ಷಗಳನ್ನು ಒಡೆದು ಸರ್ಕಾರಗಳನ್ನು ಉರುಳಿಸಲು ಖರ್ಚು ಮಾಡುವ ನೂರಾರು ಕೋಟಿಗಳನ್ನು ಯಾವ ಲೆಕ್ಕಕ್ಕೆ ಸೇರಿಸುತ್ತೀರಿ? ಪ್ರತಿಯೊಬ್ಬರೂ 1500 ರೂ ದೇಣೀಗೆ ನೀಡುವ ಮೂಲಕ ಹಣ ಸಂಗ್ರಹಿಸಿ ಕೊಡಬೇಕೆಂದು ಯಾವ ಮುಖಂಡ ಹೇಳು ತ್ತಾನೆ? ಮತದಾನದ ದಿನದ ಮುನ್ನಾದಿನ ಮದ್ಯ ಮತ್ತು ನಗದು ನೀಡಲು ಖರ್ಚು ಮಾಡಿದ ಹಣವನ್ನು ಹೇಗೆ ಘೋಷಿಸುತ್ತೀರಿ? ಅಕ್ರಮ ರಾಜಕೀಯವನ್ನು ಸಾರ್ವಜನಿಕವಾಗಿ ಘೋಷಿಸಿದ ಹಣದಿಂದ ನಡೆಸಲು ಸಾಧ್ಯವಿಲ್ಲ. ಒಂದು ವೇಳೆ ಈ ಮೊತ್ತು ಚುನಾವಣೆ ಆಯೋಗ ನಿಗದಿಪಡಿಸಿದ ಮೊತ್ತವನ್ನು ಮೀರಿದರೆ, ಖರ್ಚು ಮಾಡುವ ಹಣ ಸಕ್ರಮದ್ದಾಗಿರುವುದು ಸಾಧ್ಯವಿಲ್ಲ. 

ರಾಜಕೀಯ ದೇಣಿಗೆ, ಭ್ರಷ್ಟಾಚಾರದ ಜೋಡಿ: ಕಂಪನಿಗಳು ರಾಜಕೀಯ ಪಕ್ಷಗಳಿಗೆ ಔಪಚಾರಿಕ ದೇಣಿಗೆ ಮೂಲಕ ಹಣವನ್ನು ನೀಡಬಹುದು. ಇಂಥ ಭಾರಿ ಮೊತ್ತವನ್ನು ನಗದು ಇಲ್ಲವೇ ಬೇರೆ ರೂಪದಲ್ಲಿ ನೀಡಲಾಗುತ್ತದೆ. ಕಂಪನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬೇರೆಯದೇ ಮಾರ್ಗ ಕಂಡುಕೊಳ್ಳಬೇಕಿದೆ. ಇಂಥ ಚಟುವಟಿಕೆಯಲ್ಲಿ ಸಹಕರಿಸುವ ಎಲ್ಲ ಕಂಪನಿ ಅಧಿಕಾರಿಗಳು ವೃತ್ತಿಪರ ನೈತಿಕತೆಯನ್ನು ಕಳೆದುಕೊಳ್ಳುತ್ತಾರೆ. ರಾಜಕೀಯ ದೇಣಿಗೆ ವ್ಯವಸ್ಥೆ ಭ್ರಷ್ಟಾಚಾರವನ್ನು ಹರಡುತ್ತದೆ. ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್‌ನ ಭ್ರಷ್ಟಾಚಾರ ಸೂಚ್ಯಂಕದಲ್ಲಿ 2023ರಲ್ಲಿ ಭಾರತವು 85 ರಿಂದ 93 ನೇ ಸ್ಥಾನಕ್ಕೆ ಇಳಿಯಿತು.

ಸುಧಾರಣೆಯ ಹಾದಿ: ದೇಶದಲ್ಲಿ ರಾಜಕೀಯ ದೇಣಿಗೆ ವ್ಯವಸ್ಥೆಯನ್ನು ಸುಧಾರಿಸಬೇಕಿದ್ದರೆ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಥಿಕ ಸುಧಾರಣೆ ಮಾಡಬೇಕಿದೆ. ನಾವು ಅದನ್ನು ಹೇಗೆ ಮಾಡುತ್ತೇವೆ? ಅಮೆರಿಕದಲ್ಲಿ ರಿಪಬ್ಲಿಕನ್ ಪಕ್ಷದ ಮೇಲೆ ಡೊನಾಲ್ಡ್ ಟ್ರಂಪ್ ಅವರ ಅನಿಯಂತ್ರಿತ ನಿಯಂತ್ರಣ ಇರುವುದರಿಂದ, ದೇಶ ಸಕ್ರಿಯ ಪ್ರಜಾಪ್ರಭುತ್ವದ ಉದಾಹರಣೆಯಾಗಿ ಕಾರ್ಯನಿರ್ವಹಿಸುವುದಿಲ್ಲ. ಆದರೆ, ಅಮೆರಿಕದಿಂದ ಕಲಿಯಲು ಏನೂ ಇಲ್ಲ ಎಂದು ಇದರ ಅರ್ಥವಲ್ಲ. ಅಲ್ಲಿನ ಅನೇಕ ರಾಜ್ಯಗಳು ಕಾರ್ಪೊರೇಟ್ ದೇಣಿಗೆಗಳನ್ನು ನಿಯಂತ್ರಿಸುತ್ತವೆ. ಇತರ ರಾಜ್ಯಗಳು ಕಾರ್ಪೊರೇಟ್ ದೇಣಿಗೆ ಹಾಗೂ ವೈಯಕ್ತಿಕ ದೇಣಿಗೆಗಳ ಮೇಲೆ ಮಿತಿಗಳನ್ನು ವಿಧಿಸುತ್ತವೆ. ಅಭ್ಯರ್ಥಿಗಳಿಗೆ ಮತ್ತು ಅವರ ಪಕ್ಷಕ್ಕೆ ನೀಡುವ ದೇಣಿಗೆಗೆ ಮಿತಿ ಹೇರಲಾಗಿದೆ. ಆದರೆ, ರಾಜಕೀಯ ಕ್ರಿಯಾ ಸಮಿತಿ(ಪಿಎಸಿ) ಮತ್ತು ಸೂಪರ್ ಪಿಎಸಿಗಳು ಸ್ವೀಕರಿಸುವ ಕೊಡುಗೆಗಳ ಮೇಲೆ ಯಾವುದೇ ಮಿತಿ ಇರುವುದಿಲ್ಲ. ಆದರೆ, ಅಂತಹ ಕೊಡುಗೆ ನೀಡುವವರ ಗುರುತು ಪಾರದರ್ಶಕವಾಗಿರಬೇಕು.

ಬ್ರಿಟನ್ ನಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆಯ ಜಾಡು ಹಿಡಿಯಲಾಗುತ್ತದೆ. ನಮ್ಮ ದೇಶದಲ್ಲಿ ಪಂಚಾಯಿತಿಯಿಂದ ಹಿಡಿದು ಸಂಸತ್ತಿನವರೆಗೆ ಎಲ್ಲ ಹಂತದ ರಾಜಕೀಯ ಚಟುವಟಿಕೆಗಳ ಜಾಡು ಹಿಡಿಯಬೇಕಾಗುತ್ತದೆ. ಚುನಾವಣೆ ಆಯೋಗ ಮತ್ತು ನಾಗರಿಕ ಸಮಾಜದ ಸಂಸ್ಥೆಗಳು ಇಂಥ ರಾಜಕೀಯ ಚಟುವಟಿಕೆಯ ದಾಖಲೀಕರಣಕ್ಕೆ ನೆರವಾಗಬಹುದು. ಪ್ರತಿ ಹಂತದಲ್ಲಿ ಆದ ವೆಚ್ಚವನ್ನು ಲೆಕ್ಕ ಹಾಕಿ,ರಾಷ್ಟ್ರೀಯ ಮಟ್ಟದಲ್ಲಿ ಒಟ್ಟು ಮೊತ್ತವೆಷ್ಟು ಎಂಬುದನ್ನು ನಿರ್ಣಯಿಸಬಹುದು. ಈ ಅಂಕಿಅಂಶಗಳನ್ನು ಆನಂತರ ಸಾರ್ವಜನಿಕ ಗೊಳಿಸಬೇಕು. ಚುನಾವಣೆ ಆಯೋಗದ ಒಂದು ಅಂಗಸಂಸ್ಥೆ ಮಧ್ಯಸ್ಥಿಕೆ ವಹಿಸಿ, ಪ್ರತಿ ಹಂತದಲ್ಲಿ ಆದ ವೆಚ್ಚವನ್ನು ಅಂತಿಮಗೊಳಿಸ ಬಹುದು. ಈ ವೆಚ್ಚವನ್ನು ಭರಿಸಲು ಹಣ ಹೇಗೆ ಸಂಗ್ರಹಿಸಿದರು ಎಂಬುದನ್ನು ಪಕ್ಷಗಳು ಆನಂತರ ತೋರಿಸಬೇಕು. ರಾಜಕೀಯ ಕೊಡುಗೆಗಳನ್ನು ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಮಾಡುವುದನ್ನು ಉತ್ತೇಜಿಸಬೇಕು. ಸಣ್ಣ ಮೊತ್ತವನ್ನು ಯುಪಿಐ ಮೇಲು ಹಾಗೂ ದೊಡ್ಡ ಮೊತ್ತವಾದಲ್ಲಿ ಎಲೆಕ್ಟ್ರಾನಿಕ್ ಅಥವಾ, ಬ್ಯಾಂಕ್‌ನಿಂದ ಬ್ಯಾಂಕ್‌ಗೆ ವರ್ಗಾವಣೆ ಮಾಡುವುದನ್ನು ಕಡ್ಡಾಯಗೊಳಿಸಬೇಕು.

ಪಾರದರ್ಶಕ ದೇಣಿಗೆ ವ್ಯವಸ್ಥೆ ರಾಜಕೀಯವನ್ನು ಸ್ವಚ್ಛಗೊಳಿಸುವ ಆರಂಭಿಕ ಹೆಜ್ಜೆ. ಇದು ಸುಪ್ರೀಂ ಕೋರ್ಟ್ ತೀರ್ಪಿನಾಚೆ ಇರುವಂಥ ದ್ದು. ಪ್ರಸ್ತುತ ತೀರ್ಪು ರಾಜಕೀಯವನ್ನು ಮತ್ತು ದೇಣಿಗೆ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಬಗ್ಗೆ ಚರ್ಚೆಗೆ ಅವಕಾಶ ನೀಡಿದೆ.

(ಲೇಖನದಲ್ಲಿನ ಮಾಹಿತಿ, ಆಲೋಚನೆ ಅಥವಾ ಅಭಿಪ್ರಾಯಗಳು ಲೇಖಕರವು; ಅವು ಫೆಡರಲ್‌ನ ದೃಷ್ಟಿಕೋನವ ಪ್ರತಿಬಿಂಬಿಸುವುದಿಲ್ಲ)

Tags:    

Similar News