ಪಶ್ಚಿಮ ರಾಷ್ಟ್ರಗಳಿಗಿಂತ ನೆರೆಯ ʼಚೀನಾʼವೇ ಮೋದಿಗೆ ಆಪ್ಯಾಯಮಾನ?

ಮೋದಿ ಸರ್ಕಾರವು, ತನ್ನೊಂದಿಗೆ ಮಿತ್ರ ರಾಷ್ಟ್ರದ ಸಂಬಂಧ ಹೊಂದಿರುವ ಮತ್ತು, ಸದ್ಯಕ್ಕೆ ಜಾಗತಿಕ ರಾಜಕಾರಣದ ಸಂದರ್ಭದಲ್ಲಿ ಅಡಕೊತ್ತಿನಲ್ಲಿ ಸಿಕ್ಕ ಅಡಿಕೆಯಂಥ ಸ್ಥಿತಿಯಲ್ಲಿ ತುಸು ಮೆತ್ತಗಾಗುತ್ತಿರುವ ಅಮೆರಿಕಾದಂತೆ ಭಾರತ ತನ್ನ ಜಾಣತನವನ್ನು ಪ್ರದರ್ಶಿಸಲು ಆರಂಭಿಸಿದೆ. ಪಶ್ಚಿಮ ರಾಷ್ಟ್ರಗಳೊಂದಿಗೆ ತನ್ನ ಬಾಂಧವ್ಯವನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಭಾರತ, ಅದರ ಮೊದಲ ಹಂತವಾಗಿ ನೆರೆಯ ಚೀನಾದೊಂದಿಗೆ ತನ್ನ ಸಂಬಂಧವನ್ನು ಸುಧಾರಿಸಿಕೊಳ್ಳುವ ಪ್ರಯತ್ನ ನಡೆಸಿದೆ.

Update: 2024-10-24 00:30 GMT
ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (ಎಡ) ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (ಮಧ್ಯ) ಅವರೊಂದಿಗೆ ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯು ಆರಂಭವಾಗುವ ಮೊದಲಿನ ನೌಪಚಾರಿಕ ಭೋಜನಕೂಟದಲ್ಲಿ ಭಾಗಿಯಾಗಿರುವುದು.

ಕಳೆದ ಕೆಲವು ದಿನಗಳಿಂದ ಭಾರತ ಮತ್ತು ಚೀನಾದ ಗಡಿಗಳಲ್ಲಿ ಗಸ್ತು ತಿರುಗಲು ಎರಡೂ ರಾಷ್ಟ್ರಗಳೂ ಅನುವುಮಾಡಿಕೊಟ್ಟಿರುವ ಬಗ್ಗೆ ವಿರಳವಾಗಿ ಎಂದುಕೊಂಡರೂ, ವಿಸ್ತೃತವಾಗಿ ಸಾಕಷ್ಟು ಬಾರಿ ವಿವರಣೆ ನೀಡಲಾಗಿದೆ. ಅಷ್ಟೇ ಅಲ್ಲ. ಭಾರತ ಮತ್ತು ಚೀನಾದ ನಡುವಿನ ʻಒಪ್ಪಂದʼದ ಬಗ್ಗೆ ಕೂಡ ಸಾಕಷ್ಟು ಬಾರಿ ತಿಳುವಳಿಕೆ ರೂಪಿಸಲಾಗಿದೆ.

ಆದರೆ, ಈಗಿನ ರಾಜತಾಂತ್ರಿಕ ಬೆಳವಣಿಗೆ ಈ ಒಪ್ಪಂದವನ್ನೂ ಮೀರ ಮಹತ್ವವವನ್ನು ಪಡೆದುಕೊಂಡಿದೆ. ಎರಡೂ ನೆರೆಹೊರೆಯ ರಾಷ್ಟ್ರಗಳು ಸಕಾರಾತ್ಮಕವಾಗಿ ಮಿಡಿಯಲು ಆರಂಭವಾಗಿ ಸ್ವಲ್ಪ ಕಾಲವೇ ಆಗಿದೆ. ಎರಡು ವರ್ಷಗಳ ಹಿಂದೆ ಹಾಟ್‌ ಸ್ಪ್ರಿಂಗ್‌ನ ಗಸ್ತು ಪಹರೆಯ ಅಂಚಿನ ಕಾರಣಕ್ಕಾಗಿ ಭಾರತ ಮತ್ತು ಚೀನಾದ ನಡುವ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸದ್ಯಕ್ಕೆ ನಡೆಯುತ್ತಿರುವ ಕಜಾಜ್‌ ಬ್ರಿಂಕ್ಸ್‌ ಶೃಂಗಸಭೆಯ ಮುನ್ನಾದಿನ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಈ ಜಾಗತಿಕ ನಾಯಕರ ಬೃಹತ್ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದಾಗ, ಹೆಚ್ಚು ಸ್ನೇಹಪರ ವಿನಿಮಯಕ್ಕಾಗಿ ಈ ಒಪ್ಪಂದವನ್ನು ಮಾಡಲಾಗಿದೆ ಎಂದು ಊಹಿಸಲು ಅಡ್ಡಿಯೇನಿಲ್ಲ. ಆದರೂ, ಈ ಒಪ್ಪಂದದ ಒಳಾರ್ಥ ಮತ್ತು ವಿಸ್ತಾರವನ್ನು ವಿಶಾಲವಾದ ಜಾಗತಿಕ ರಾಜಕಾರಣದ ತಳಹದಿಯಲ್ಲಿ ನೋಡುವುದು ಇಂದಿನ ತುರ್ತು ಅಗತ್ಯವಾಗಿದೆ.

ಖಲಿಸ್ತಾನಿ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾದೊಂದಿಗಿನ ಸಂಬಂಧ ಹಳಸಿರುವುದರಿಂದ ಭಾರತ ಸರ್ಕಾರವು ತೀವ್ರವಾಗಿ ಘಾಸಿಗೊಂಡಿದೆ ಎಂದೇ ಹೇಳಬೇಕು. ಹತ್ಯೆಯ ಹಿಂದೆ ಭಾರತೀಯ ಏಜೆಂಟ್‌ಗಳ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದು ಇದಕ್ಕೆ ಕಾರಣ

ಕೆನಡಾದ ದುಸ್ಸಾಹಸ

ಒಂದು ಸಂದರ್ಭದಲ್ಲಿ ಮೋದಿ ಸರ್ಕಾರ ಎಲ್ಲವೂ ತನ್ನ ನಿಯಂತ್ರಣದಲ್ಲಿದೆ ಎಂದು ಭಾವಿಸಿತ್ತು. ಆದರೆ, ವಾಸ್ತವವಾಗಿ ಹಾಗೇನೂ ಇರಲಿಲ್ಲ. ಅದು ಕೇವಲ ಭಾರತದ ಕಲ್ಪನೆಯಾಗಿತ್ತು ಎನ್ನಬಹುದು. ಭಾರತದ ನಿರೀಕ್ಷೆಯನ್ನು ಸುಳ್ಳುಮಾಡಿ ಅಮೆರಿಕಾ ತನ್ನ ನಿಲುವು ಬದಲಿಸಿ, ಕೆನಡಾವನ್ನು ಬೆಂಬಲಿಸಲು ಮುಂದಾಯಿತು. US, ಕೆನಡಾ, UK, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳನ್ನು ಒಳಗೊಂಡಿರುವ ಒಕ್ಕೂಟವು ಅನಿರೀಕ್ಷತ ರೀತಿಯಲ್ಲಿ ಪ್ರತಿಕ್ರಿಯಿಸಿತು, ತಮ್ಮದೇ ಗುಂಪಿನ ಸದಸ್ಯ ರಾಷ್ಟ್ರವಾದ ಕೆನಡಾವನ್ನು ಬೆಂಬಲಿಸಿ, ಭಾರತವನ್ನು ಬೆಚ್ಚಿ ಬೀಳಿಸಿತು. 

ತಾನೂ ಕೂಡ ಅಮೇರಿಕಾ ನೇತೃತ್ವದ ಪಾಶ್ಚಿಮಾತ್ಯ ರಾಷ್ಟ್ರಗಳ ಒಕ್ಕೂಟದ ಭಾಗವೆಂದು ಪರಿಗಣಿಸಿದ್ದ ಭಾರತವು ಇದರಿಂದ ಚಿಂತಿತವಾಯಿತು. ಸ್ಪಷ್ಟವಾಗಿ, ಪಾಶ್ಚಿಮಾತ್ಯರೊಂದಿಗಿನ ನವದೆಹಲಿಯ ಸಂಬಂಧಕ್ಕೆ ನಿರ್ದಿಷ್ಟ ಮಿತಿಗಳಿದ್ದವು ಎಂಬುದನ್ನು ತಡವಾಗಿ ಅರ್ಥಮಾಡಿಕೊಂಡಿತು. ಕಳೆದ ಎರಡು ದಶಕಗಳಲ್ಲಿ, ಭಾರತವು ರಾಜತಾಂತ್ರಿಕವಾಗಿ ಅಮೆರಿಕಾ ಮತ್ತು ಮತ್ತು ಪಶ್ಚಿಮದ ಕಡೆಗೆ ವೇಗವಾಗಿ ಚಲಿಸಿತು. ಅಮೆರಿಕಾ ಭಾರತದ ಮಿತ್ರ ರಾಷ್ಟ್ರವಾಯಿತು. ಹಾಗೆಯೇ ಅಮೆರಿಕಾ ಬೆಂಬಲಿತ ಇಸ್ರೇಲ್ ಕೂಡ ಭಾರತ ಬೆಂಬಲಿತವೆಂಬ ಹಣೆಪಟ್ಟಿ ಹಚ್ಚಿಕೊಂಡಿತು.

ಅಮೆರಿಕಾ ಮತ್ತು ಸಂಬಂಧವು ಸೌಹಾರ್ದವಾಗಿರುವವರೆಗೆ, ಪರಂಪರಾಗತ ಬಿಕ್ಕಟ್ಟಿನ ಹೊರತಾಗಿಯೂ, ಭಾರತವು ಆರಂಭದಲ್ಲಿ ಮಾಸ್ಕೋವನ್ನು, ಹೊರತುಪಡಿಸಿ ತನ್ನ ಸಮತೋಲನ ಜಾಗತಿಕ ರಾಜಕಾರಣದ ಕಾರ್ಯತಂತ್ರದಲ್ಲಿ ಯಾವುದೇ ಪ್ರಮುಖ ಸವಾಲುಗಳನ್ನು ಎದುರಿಸಲಿಲ್ಲ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 2014 ರಲ್ಲಿ ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತುಕೊಂಡಾಗ ಮತ್ತು ಇಸ್ಲಾಮಾಬಾದ್‌ನೊಂದಿಗೆ ಮಿಲಿಟರಿ ವ್ಯವಸ್ಥೆಯ ಸಂಬಂಧವನ್ನು ಮನವರಿಕೆ ಮಾಡಿಕೊಟ್ಟಾಗ ಭಾರತದ ಇರಸು-ಮುರುಸು ಅರಂಭವಾಯಿತು.

ದಶಕಗಳ ಕಾಲ ಸೋವಿಯತ್ ಒಕ್ಕೂಟ ಮತ್ತು ನಂತರ ರಷ್ಯಾದೊಂದಿಗೆ ಸ್ನೇಹ ಹೊಂದಿದ್ದ ಭಾರತ, ತನ್ನ ಸಂಬಂಧವನ್ನು ಮತ್ತೆ ಗಟ್ಟಿಯಾಗಿಸಿಕೊಳ್ಳುವತ್ತ ಎಲ್ಲ ಪ್ರಯತ್ನಗಳನ್ನೂ ಮಾಡತೊಡಗಿತು.

ಉಕ್ರೇನ್ ಟರ್ನಿಂಗ್ ಪಾಯಿಂಟ್

ಫೆಬ್ರವರಿ 2022 ರಲ್ಲಿ ರಷ್ಯಾದ ಉಕ್ರೇನ್ ಆಕ್ರಮಣವು ಮಾಸ್ಕೋ ಮತ್ತು ಪಶ್ಚಿಮದ ನಡುವಿನ ರಾಜತಾಂತ್ರಿಕ ಸಮೀಕರಣಗಳನ್ನು ಬುಡಮೇಲು ಮಾಡಿತು. ಇದು ಭಾರತದ ಮೇಲೆ ನೇರ ಪರಿಣಾಮ ಬೀರಿತು. ಮೋದಿ ಸರ್ಕಾರವು ಮಾಸ್ಕೋದೊಂದಿಗೆ ವ್ಯಾಪಾರ ಮಾಡಲು "ಅನುಮತಿ" ಹೊಂದಿದ್ದರೂ, ಮಾಸ್ಕೋ ವಿರುದ್ಧದ US ನೇತೃತ್ವದ ನಿರ್ಬಂಧಗಳ ಹೊರತಾಗಿಯೂ, ಪಶ್ಚಿಮ ರಾಷ್ಟ್ರಗಳ ಧೃವೀಕರಣವು ಹೊಸ ದೆಹಲಿಯ "ಧಿಕ್ಕಾರ" ದಿಂದ ಹೆಚ್ಚು ತೊಂದರೆಗೊಳಗಾಯಿತೆಂದೇ ಹೇಳಬೇಕುಮೋದಿಯವರ ಇತ್ತೀಚಿನ ಯೋ-ಯೋ ಮಾದರಿಯ ರಷ್ಯಾ ಭೇಟಿಗಳು (ಪುಟಿನ್ ಅವರನ್ನು ಭೇಟಿಯಾಗಲು), ನಂತರ ಉಕ್ರೇನ್‌ಗೆ (ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಲು), ಮತ್ತು ಯುಎಸ್‌ನಲ್ಲಿ ಝೆಲೆನ್ಸ್‌ಕಿಯೊಂದಿಗಿನ ಮತ್ತೊಂದು ಭೇಟಿಯು ಭಾರತದ ಒತ್ತಡದ ರೀತಿಯನ್ನು ಅತ್ಯಂತ ಸ್ಪಷ್ಟವಾದ ರೀತಿಯಲ್ಲಿ ತೋರಿಸಿಕೊಟ್ಟಿತು. ಪೂರ್ವ ಮತ್ತ್ ಪಶ್ಚಿಮದ ಎರಡು ಬ್ಲಾಕ್‌ಗಳ ನಡುವಿನ ಸಂಬಂಧಗಳಿಗೆ ಸಂಬಂಧಿಸಿದಂತೆ ಈ ಬೆಳವಣಿಗೆಯನ್ನು ನೋಡಿದರೆ ಕಾಣುವ ಚಿತ್ರವಿದು. ಆದರೆ ಮೋದಿ ಅವರೇ ಸ್ವತಃ ಈ ನಿಲುವನ್ನು ತೆಗೆದುಕೊಂಡರೋ ಅಥವಾ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಅವರು ಪ್ರತಿಸ್ಪರ್ಧಿ ರಾಷ್ಟ್ರಗಳಿಗೆ ತಮ್ಮ ಇತ್ತೀಚಿನ ಭೇಟಿಗಳ ಬಗ್ಗೆ ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ಪುಟಿನ್ ಅವರಿಗೆ ವಿವರಿಸಿದ್ದಾರೆ ಎಂಬುದು ವರದಿಯಾಗಿರುವ ಸತ್ಯ.

ಈ ಮಧ್ಯೆ ನಿಜ್ಜರ್‌ ಹತ್ಯೆಯಿಂದಾಗಿ ಕೆನಡಾದೊಂದಿಗಿನ ಭಾರತದ ಸಂಬಂಧದಲ್ಲಿ ಆಳವಾದ ಬಿರುಕು ಮೂಡಿದೆ. ಸದ್ಯದ ರಾಜತಾಂತ್ರಿಕ ಸಂಬಂಧದ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಲು US ನ FBI ಭಾರತೀಯ ಏಜೆಂಟ್ ಅನ್ನು ಬಲೆಗೆ ಬೀಳಿಸಿತು, ಅವರು US ನಲ್ಲಿ ಇನ್ನೊಬ್ಬ ಖಲಿಸ್ತಾನಿ ಕಾರ್ಯಕರ್ತ-ವಕೀಲರಾದ ಗುರ್ಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆ ಯತ್ನದಲ್ಲಿಯೂ ಅವರ ಪಾಲಿರುವುದೆಂದು ವರದಿಯಾಗಿದೆ. ಕೆನಡಾದ ವಿಷಯದಲ್ಲಿ ಭಿನ್ನವಾಗಿ, ಮೋದಿ ಸರ್ಕಾರವು ಪನ್ನುನ್ ಹತ್ಯೆಯ ಯತ್ನದ ಬಗ್ಗೆ ಯುಎಸ್ ತನಿಖೆಯೊಂದಿಗೆ ಸಹಕರಿಸಲು ಒಲ್ಲದ ಮನಸ್ಸಿನಿಂದಲೇ ಒಪ್ಪಿದಂತಾಗಿದೆ.

ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಪಶ್ಚಿಮದಲ್ಲಿ ತನ್ನ ಇತರ ಮಿತ್ರರಾಷ್ಟ್ರಗಳನ್ನು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದ ಭಾರತಕ್ಕೆ ಯಾವುದೇ ಸಹಾಯ ಸಿಗಲಿಲ್ಲ ಎನ್ನುವುದು ಇಲ್ಲಿ ಮಹತ್ವದ ಸಂಗತಿ. ಭಾರತವು ಯುಎಸ್ ಮಿತ್ರರಾಷ್ಟ್ರವಾಗಿರಬಹುದು, ಆದರೆ ಕೆನಡಾ, ಯುಕೆ, ಆಸ್ಟ್ರೇಲಿಯಾ ಅಥವಾ ನ್ಯೂಜಿಲೆಂಡ್‌ನಂತೆಯೇ ಆ ಗುಂಪಿಗೆ ಸೇರುವ ರಾಷ್ಟ್ರವಲ್ಲ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.

ಚೀನಾದೊಂದಿಗೆ ಸಂಬಂಧವನ್ನು ಸರಿಪಡಿಸಿ

ಮೋದಿ ಸರ್ಕಾರವು, ತನ್ನೊಂದಿಗೆ ಮಿತ್ರ ರಾಷ್ಟ್ರದ ಸಂಬಂಧ ಹೊಂದಿರುವ ಮತ್ತು, ಸದ್ಯಕ್ಕೆ ಜಾಗತಿಕ ರಾಜಕಾರಣದ ಸಂದರ್ಭದಲ್ಲಿ ಅಡಕೊತ್ತಿನಲ್ಲಿ ಸಿಕ್ಕ ಅಡಿಕೆಯಂಥ ಸ್ಥಿತಿಯಲ್ಲಿ ತುಸು ಮೆತ್ತಗಾಗುತ್ತಿರುವ ಅಮೆರಿಕಾದಂತೆ ಭಾರತ ತನ್ನ ಜಾಣತನವನ್ನು ಪ್ರದರ್ಶಿಸಲು ಆರಂಭಿಸಿದೆ. ಪಶ್ಚಿಮ ರಾಷ್ಟ್ರಗಳೊಂದಿಗೆ ತನ್ನ ಬಾಂಧವ್ಯವನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಭಾರತ, ಅದರ ಮೊದಲ ಹಂತವಾಗಿ ನೆರೆಯ ಚೀನಾದೊಂದಿಗೆ ತನ್ನ ಸಂಬಂಧವನ್ನು ಸುಧಾರಿಸಿಕೊಳ್ಳುವ ಪ್ರಯತ್ನ ನಡೆಸಿದೆ.

ಅಷ್ಟಕ್ಕೂ, ಯುಎಸ್ ನೇತೃತ್ವದ ಪಶ್ಚಿಮದೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಈಗ ಅತ್ಯವಶ್ಯ ಎಂದು ನವದೆಹಲಿ ಏಕೆ ಭಾವಿಸುತ್ತದೆ? US, ಜಪಾನ್, ಆಸ್ಟ್ರೇಲಿಯಾ ಮತ್ತು ಸ್ವತಃ ಒಳಗೊಂಡಿರುವ ಕ್ವಾಡ್‌ನ ಭಾಗವಾಗಲು ಭಾರತ ಉತ್ಸುಕವಾಗಿದೆ. ಏಕೆಂದರೆ ಇದು ಸಂದರ್ಭ ಅವಶ್ಯಕವಾಗಿ ಎದುರಾದರೆ, ಚೀನಾದ ಯುದ್ಧದ ಮಟ್ಟಕ್ಕೆ ಮುಂದುವರಿದರೆ, ಪಶ್ಚಿಮ ರಾಷ್ಟ್ರಗಳು ಭಾರತದ ಪರವಾಗಿ ನಿಲ್ಲುತ್ತವೆ ಎಂದು ದೆಹಲಿ ನಂಬಿದೆ. ಅಂಥಾ ತುರ್ತು ಸಂದರ್ಭದಲ್ಲಿ ಪಶ್ಚಿಮವು ಹೊಸ ದೆಹಲಿಯ ಬೆಂಬಲಕ್ಕೆ ಬರುತ್ತದೆ ಎಂಬ ಭರವಸೆ ಭಾರತದ್ದು.

ಕ್ವಾಡ್ ಚೀನಾಕ್ಕೆ ಒಂದು ರೀತಿಯಲ್ಲಿ ಮಗ್ಗಲ ಮುಳ್ಳು. ಅದನ್ನು ಬೀಜಿಂಗ್ ಸ್ವತಃ ಮುಕ್ತವಾಗಿ ವ್ಯಕ್ತಪಡಿಸಿದೆ ಮತ್ತು ಕ್ವಾಡ್ ಅನ್ನು, ಚೀನಾ ತನ್ನ ವಿರೋಧಿ ಎಂದು ಪರಿಗಣಿಸುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಪಾಶ್ಚಿಮಾತ್ಯ ದೇಶಗಳ ಜೊತೆ ಹೋಗದೆ ಚೀನಾಗೂ ಬೇರೆ ದಾರಿಯಿಲ್ಲ ಎಂಬ ಲೆಕ್ಕಾಚಾರದಲ್ಲಿ ಭಾರತ ಚೀನಾದ ಅಭಿಪ್ರಾಯಗಳನ್ನು ಕಡೆಗಣಿಸಲು ಸಾಧ್ಯವಾಗಿತ್ತು.

ಕಳೆದ ಎರಡು ದಿನಗಳ ಬೆಳವಣಿಗೆಗಳು, ಚೀನಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ನವದೆಹಲಿಯ ಸೌತ್ ಬ್ಲಾಕ್‌ನ ಹೃದಯ ಬದಲಾವಣೆ ಆಗಿದೆ ಎಂಬುದನ್ನು ಸೂಚಿಸುತ್ತದೆ. ಈ ವಾರದ ಆರಂಭದಲ್ಲಿ ಸಾರ್ವಜನಿಕ ವೇದಿಕೆಯೊಂದರಲ್ಲಿ ಮಾತನಾಡಿದ ಮೋದಿ ಅವರು ಭಾರತವನ್ನು ಅಂತರರಾಷ್ಟ್ರೀಯ ಸಂಬಂಧಗಳ ವಿಷಯಕ್ಕೆ ಸಂಬಂಧಿಸಿದಂತೆ ತಮಗೆ ಅನುಕೂಲವಾಗುವ ಸಮಯ ಸಾಧಕ ಸಾಧನವಾಗಿ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂಬುದು ಸ್ಪಷ್ಟಪಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹೀಗೆ ಹೇಳುವಾಗ ಸಮಯಕ್ಕನುಸಾರವಾಗಿ ಭಾರತ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಜಾಗತಿಕವಾಗಿ ಮನವರಿಕೆ ಮಾಡಿಕೊಡಲು ಮೋದಿ ಅವರು ಪ್ರಯತ್ನಿಸಿದರು.

ಈ ಹಿನ್ನೆಲೆಯಲ್ಲಿ ಗಮನಿಸಿದರೆ, ಅಮೆರಿಕಾದೊಂದಿಗಿನ ಭಾರತದ ಸಂಬಂಧ ಅಷ್ಟೇನೂ ಮಧುರವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅವಕಾಶ ಸಿಕ್ಕಿದರೆ, ಭಾರತವನ್ನು ಕೈ ಬಿಡಲು ಅಮೆರಿಕಾ ಹಿಂಜರಿಯುವುದಿಲ್ಲ ಎಂಬುದೂ ಅರ್ಥವಾಗುತ್ತದೆ. ಈ ಹಿನ್ನೆಲೆಯಲ್ಲಿ ಬೀಜಿಂಗ್ನೊಂದಿಗಿನ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳುವುದು ಭಾರತಕ್ಕೆ ಅನಿವಾರ್ಯವಾಗುತ್ತದೆ.

ಹೀಗೆ ನಡೆದುಕೊಂಡಲ್ಲಿ ಭಾರತ ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯಬಹುದು-ಒಂದು, ನಿಸ್ಸಂಶಯವಾಗಿ, ಚೀನಾದೊಂದಿಗಿನ ಬಿಕ್ಕಟ್ಟನ್ನು ತಗ್ಗಿಸಬಹುದು, ಎರಡನೆಯದಾಗಿ, ಇದು ವಾಷಿಂಗ್ಟನ್ ಅನ್ನು ಗೊಂದಲಕ್ಕೆ ಸಿಲುಕಿಸಬಹುದು. ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ಭಾರತವು ತನ್ನ ನೆರೆಹೊರೆಯೊಂದಿಗೆ ಸಂಬಂಧವನ್ನು ಸುಧಾರಿಸಿಕೊಳ್ಳುವುದನ್ನು ಅಷ್ಟಾಗಿ ಇಷ್ಟಪಡುವುದಿಲ್ಲ ಎಂಬುದನ್ನು ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಅದು ವಾಷಿಂಗ್ಟನ್ ಮತ್ತು ಇತರರ ಮೇಲೆ ನವದೆಹಲಿಯ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಆದಾಗ್ಯೂ, ಅಂತರರಾಷ್ಟ್ರೀಯ ನೈಜ ರಾಜಕೀಯದಲ್ಲಿ, ಭಾರತವು ಚೀನಾದೊಂದಿಗಿನ ಬಾಂಧವ್ಯವನ್ನು ಸರಾಗಗೊಳಿಸಬೇಕಾದರೆ, ಅದು ಕನಿಷ್ಠ ಪಕ್ಷವನ್ನು ರಾಜಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಪ್ರಾಯಶಃ ಈ ಕಾರಣಕ್ಕಾಗಿಯೇ ಒಪ್ಪಂದಕ್ಕೆ ಸಹಿ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರ ಎಲ್ಲ ವಿವರಗಳೂ ಸಾರ್ವಜನಿಕವಾಗಿದ್ದರೂ, ಕೊನೆಯದಾಗಿ ಯೋಚಿಸಿದಾಗ, ಚೀನಾವು ಭಾರತದ ಗಸ್ತು ಕೇಂದ್ರಗಳನ್ನು ದಕ್ಷಿಣಕ್ಕೆ ಹಲವಾರು ಕಿಲೋಮೀಟರ್‌ಗಳಷ್ಟು ತಳ್ಳುತ್ತಾ ಮುಂದಕ್ಕೆ ಸಾಗಿದ್ದು ಸ್ಪಷ್ಟವಾಗುತ್ತದೆ. ಭಾರತೀಯ ವಿದೇಶಾಂಗ ವ್ಯವಹಾರಗಳ ವಕ್ತಾರರು ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಎಲ್ಲರೂ ಮೇ 2020 ರ ಹಿಂದಿನ ಯಥಾಸ್ಥಿತಿಯನ್ನು ಮರುಸ್ಥಾಪಿಸಲು ಸಿದ್ಧರಿಲ್ಲದ ಕಾರಣ, ಪರಿಸ್ಥಿತಿಯು ಇಂದಿನಂತೆಯೇ ಇರುತ್ತದೆ ಎಂದು ತೋರುತ್ತದೆ.

ವಿವಾದಿತವಾದ ಹಾಗೂ ಗುರುತು ಮಾಡದ ಗಡಿಯಲ್ಲಿ ಅವರು ಮುಂದಕ್ಕೆ ತಳ್ಳುವ ಸ್ಥಳದಿಂದ ಸಂಪೂರ್ಣವಾಗಿ ಹಿಂದೆ ಸರಿಯುವಂತೆ ಭಾರತವು ಚೀನಾದ ಪಡೆಗಳನ್ನು ಒತ್ತಾಯಿಸುವುದು ಕಷ್ಟಕರವಾಗಿರುತ್ತದೆ ಮತ್ತು ಅದು ಯಾವಾಗಲೂ ಹಾಗೆ ಇತ್ತು ಕೂಡ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದು "ಎರಡು ಹೆಜ್ಜೆ ಮುಂದಕ್ಕೆ ಮತ್ತು ಒಂದು ಹೆಜ್ಜೆ ಹಿಂದೆ" ಎಂಬ ಚೀನೀ ನೀತಿ ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತದೆ.

ಹೀಗಿರುವಾಗ, ಪಶ್ಚಿಮದಿಂದ ಬೀಸುತ್ತಿರುವ ತಣ್ಣನೆಯ ಗಾಳಿಯನ್ನು ಗಮನದಲ್ಲಿಟ್ಟುಕೊಂಡು ಬೀಜಿಂಗ್‌ನೊಂದಿಗೆ ಹೆಚ್ಚು ಸೌಹಾರ್ದಯುತ ಸಂಬಂಧಕ್ಕೆ ಪ್ರತಿಯಾಗಿ ಸ್ವಲ್ಪ ಭೂಮಿಯನ್ನು ಬಿಡಲು ಮೋದಿ ಸರ್ಕಾರ ನಿರ್ಧರಿಸಿರಬಹುದು. ಈ ತಂತ್ರದಲ್ಲಿ ಅಪಾಯವೂ ಅಡಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮುಂದೇನು? ಎಂಬುದು ಮುಂದಿನ ದಿನಗಳ ವಿದ್ಯಮಾನಗಳನ್ನು ಅವಲಂಬಿಸಿರುವುದಂತೂ ಖಚಿತ.

Tags:    

Similar News