Sunita Williams: ಬಾಹ್ಯಾಕಾಶ ಕೇಂದ್ರದಿಂದ ಭೂಮಿಯತ್ತ ಹೊರಟ ಸುನಿತಾ ವಿಲಿಯಮ್ಸ್
ನಾಸಾದ ಹೇಳಿಕೆ ಪ್ರಕಾರ, ವಿಲಿಯಮ್ಸ್ ಮತ್ತು ವಿಲ್ಮೋರ್ ಭಾರತೀಯ ಕಾಲಮಾನದಂತೆ ಬೆಳಿಗ್ಗೆ 1035ಕ್ಕೆ ಹೊರಟಿದ್ದಾರೆ. ಅವರು 17 ಗಂಟೆಗಳ ಪ್ರಯಾಣ ಮಾಡಿ ಭೂಮಿಗೆ ಬರಲಿದ್ದಾರೆ.;
ಬಾಹ್ಯಾಕಾಶ ಕೇಂದ್ರದಲ್ಲಿ ಹಲವು ತಿಂಗಳುಗಳ ಕಾಲ ಉಳಿಯುವಂತಾಗಿದ್ದ ನಾಸಾದ ಇಬ್ಬರು ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಂಗಳವಾರ (ಮಾರ್ಚ್ 18) ಸ್ಪೇಸ್ಎಕ್ಸ್ ಬಾಹ್ಯಾಕಾಶ ನೌಕೆಯ ಮೂಲಕ ಭೂಮಿಯ ಕಡೆಗೆ ಪ್ರಯಾಣ ಆರಂಭಿಸಿದ್ದಾರೆ.
ನಾಸಾದ ಹೇಳಿಕೆ ಪ್ರಕಾರ, ವಿಲಿಯಮ್ಸ್ ಮತ್ತು ವಿಲ್ಮೋರ್ ಭಾರತೀಯ ಕಾಲಮಾನದಂತೆ ಬೆಳಗ್ಗೆ 1035ಕ್ಕೆ ಹೊರಟಿದ್ದಾರೆ. ಅವರು 17 ಗಂಟೆಗಳ ಪ್ರಯಾಣ ಮಾಡಿ ಭೂಮಿಗೆ ಬರಲಿದ್ದಾರೆ. ಪೂರ್ವ ಯೋಜನೆಯಂತೆ ಅವರ ಪ್ರಯಾಣ ಬುಧವಾರ ನಿಗದಿಯಾಗಿತ್ತು. ಆದರೆ ವಾರದ ಕೊನೆಯಲ್ಲಿ ಪ್ರತಿಕೂಲ ಹವಾಮಾನ ಸೃಷ್ಟಿಯಾಗಬಹುದು ಎಂಬ ಕಾರಣಕ್ಕೆ ಪ್ರಯಾಣವನ್ನು ನಿಗದಿಗಿಂತ ಮೊದಲೇ ಆರಂಭಿಸಲಾಗಿದೆ.
ನಾಲ್ವರು ಸದಸ್ಯರಿರುವ ನೌಕೆಯು ಮಂಗಳವಾರ ಸಂಜೆ 5:57ಕ್ಕೆ (ಭಾರತೀಯ ಕಾಲಮಾನ ಬುಧವಾರ ಮುಂಜಾನೆ 3:27) ಗಲ್ಫ್ ಆಫ್ ಮೆಕ್ಸಿಕೊದಲ್ಲಿ ಇಳಿಯುವ ನಿರೀಕ್ಷೆಯಿದೆ. ಲ್ಯಾಂಡಿಂಗ್ ನ ನಿಖರವಾದ ಸ್ಥಳವು ಸ್ಥಳೀಯ ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ.
ಅಂತರಿಕ್ಷದಲ್ಲೇ 286 ದಿನಗಳನ್ನು ಕಳೆದ ಸಂಶೋಧಕರು
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕಳೆದ ವರ್ಷ ಜೂನ್ನಲ್ಲಿ ಎಂಟು ದಿನಗಳ ಕಾರ್ಯಾಚರಣೆಗಾಗಿ ಅಂತಿರಿಕ್ಷ ನಿಲ್ದಾಣಕ್ಕೆ ಪ್ರಯಾಣಿಸಿದ್ದರು. ಬೋಯಿಂಗ್ ಸ್ಟಾರ್ಲೈನರ್ ಕ್ಯಾಪ್ಸೂಲ್ ಮೂಲಕ ಹೋಗಿ ಅದರಲ್ಲೇ ವಾಪಸಾಗಬೇಕಾಗಿತ್ತು. ಆದರೆ, ಆ ನೌಕೆಯ ಪ್ರೊಪಲ್ಷನ್ ವ್ಯವಸ್ಥೆಯಲ್ಲಿ ಸಮಸ್ಯೆಗಳು ಕಂಡು ಬಂದಿದ್ದಲ್ಲದೆ, ದುರಸ್ತಿ ಅಸಾಧ್ಯವಾದ ಕಾರಣ ದೀರ್ಘ ಕಾಲ ಅಲ್ಲಿಯೇ ಉಳಿಯಬೇಕಾಯಿತು.
ನಿರ್ಗಮನ ತಡವಾದ ಕಾರಣ ಸಂಶೋಧಕರು, ಅಂತಾರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 286 ದಿನಗಳನ್ನು ಕಳೆದಿದ್ದಾರೆ., ಅಲ್ಲಿ ಅವರು 4500 ಕ್ಕೂ ಹೆಚ್ಚು. ಕಕ್ಷೆಗಳನ್ನು ಸುತ್ತಿದ್ದಾರೆ 12.1 ಸ್ಟಾಚ್ಯುಟ್ ಮೈಲಿಗಳಿಗಿಂತ ಹೆಚ್ಚು ಪ್ರಯಾಣಿಸಿದರು (ಒಂದು ಸ್ಟ್ಯಾಚುಟ್ ಮೈಲಿ ಎಂದರೆ 1.64 ಕಿಲೋಮೀಟರ್) ಎಂದು ನಾಸಾ ತನ್ನ ವಿವರಣೆಯಲ್ಲಿ ತಿಳಿಸಿದೆ.
ಭಾನುವಾರ ಅವರ ಬದಲಿ ಸಿಬ್ಬಂದಿಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋದ ಬಳಿಕ ವಿಲ್ಮೋರ್ ಮತ್ತು ವಿಲಿಯಮ್ಸ್ ಅವರ ಪಯಣ ನಿಗದಿಯಾಯಿತು.
ಬುಚ್ ಹಾಗೂ ಸುನಿತಾ ದೀರ್ಘ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಯಿತು. ಗಗನಯಾತ್ರಿಗಳು ದಶಕಗಳಿಂದ ದೀರ್ಘ ಬಾಹ್ಯಾಕಾಶ ಯಾನಗಳನ್ನು ಮಾಡಿದ್ದರೂ ಈ ರೀತಿಯ ಅನಿಶ್ಚಿತತೆ ಸೃಷ್ಟಿಯಾಗಿರಲಿಲ್ಲ ಎಂಬುದೇ ಚರ್ಚಗೆ ಪ್ರಧಾನ ಕಾರಣವಾಯಿತು.
ವಿಲ್ಮೋರ್ ಮತ್ತು ವಿಲಿಯಮ್ಸ್ ಆರಂಭದಲ್ಲಿ ಅತಿಥಿ ಪಾತ್ರವನ್ನು ವಹಿಸಲು ಹೋಗಿದ್ದರೂ ನಂತರದಲ್ಲಿ ಪೂರ್ಣ ಪ್ರಮಾಣದ ನಿಲ್ದಾಣದ ಸಿಬ್ಬಂದಿಯಾಗಿ ಪರಿವರ್ತನೆಗೊಂಡಿದ್ದರು ಪ್ರಯೋಗಗಳನ್ನು ನಡೆಸಿದರು, ಉಪಕರಣಗಳನ್ನು ಸರಿಪಡಿಸಿದರು ಮತ್ತು ಜತೆಯಾಗಿ ಬಾಹ್ಯಾಕಾಶ ನಡಿಗೆಯನ್ನೂ ಮಾಡಿದ್ದರು.
ಸುದೀರ್ಘ 62 ಗಂಟೆಗಳ ಕಾಲ ಬಾಹ್ಯಾಕಾಶ ನಡೆಗೆ ಮಾಡಿದ ವಿಲಿಯಮ್ಸ್ ಹೊಸ ದಾಖಲೆ ನಿರ್ಮಿಸಿದರು: ಮಹಿಳಾ ಗಗನಯಾತ್ರಿಗಳಲ್ಲಿ ಪೈಕಿ ಈ ಸಾಧನೆ ಮಾಡಿದ ಅಗ್ರಗಣ್ಯರೆನಿಸಿಕೊಂಡರು.
ಪಯಣದ ಅವಧಿಯಲ್ಲಿ ಏನು ಮಾಡುತ್ತಾರೆ?
ಭೂಮಿಗೆ ಬರುತ್ತಿರುವ ಗಗನಯಾತ್ರಿಗಳು ಅನ್ಡಾಕಿಂಗ್ ಮತ್ತು ಸ್ಪ್ಲಾಶ್ ಡೌನ್ ನಡುವಿನ ಸಮಯದಲ್ಲಿ ನಿದ್ರೆ ಮಾಡುತ್ತಾರೆ. ವಿಶ್ರಾಂತಿ ಪಡೆಯುತ್ತಾರೆ ಮತ್ತು ಸ್ವಲ್ಪ ಆಹಾರ ತೆಗೆದುಕೊಳ್ಳುತ್ತಾರೆ ಎಂದು ನಾಸಾ ಹೇಳಿದೆ.
ಪುನಶ್ಚೇತನ ಯೋಜನೆ
ಭೂಮಿಗೆ ಇಳಿಯುವ ಗಗನಯಾತ್ರಿಗಳು ಆರಂಭದಲ್ಲಿ ನಾಸಾದ 45 ದಿನಗಳ ಪ್ರಯಾಣದ ನಂತರದ ಪುನಶ್ಚೇತನ ಕಾರ್ಯಕ್ರಮಕ್ಕೆ ಒಳಪಡಸಲಿದ್ದಾರೆ. ವಿಶೇಷವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ಅಥವಾ ಇತರ ಬಾಹ್ಯಾಕಾಶ ಪರಿಸರಗಳಲ್ಲಿ ದೀರ್ಘಾವಧಿಯ ಕಾರ್ಯಾಚರಣೆಗಳ ನಂತರ ಭೂಮಿಯ ಪರಿಸರಕ್ಕೆ ಹೊಂದಿಕೊಳ್ಳುವ ಪ್ರಯತ್ನ ಮಾಡಲಿದ್ದಾರೆ.
ಕಾರ್ಯಕ್ರಮವು 45 ದಿನಗಳವರೆಗೆ ಇರುತ್ತದೆಯಾದರೂ, ಪೂರ್ಣ ಚೇತರಿಕೆಗೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ವಿಸ್ತೃತ ಬಾಹ್ಯಾಕಾಶ ಕಾರ್ಯಾಚರಣೆಗಳ ನಂತರ ಕೆಲವು ಗಗನಯಾತ್ರಿಗಳು ತಿಂಗಳುಗಳು ಅಥವಾ ವರ್ಷಗಳ ನಂತರವೂ ದೀರ್ಘಕಾಲದ ಪರಿಣಾಮಗಳನ್ನು ಎದುರಿಸುವ ಸಾಧ್ಯತೆಗಳು ಇವೆ.
ಯಶಸ್ವಿ ನಿರ್ಗಮನ
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಂದಿಗಿನ ಸಂಭಾವ್ಯ ಘರ್ಷಣೆಗಳನ್ನು ತಡೆಗಟ್ಟುವ, ಬಾಹ್ಯಾಕಾಶ ನೌಕೆಯ ನಷ್ಟ, ಬಾಹ್ಯಾಕಾಶ ನಿಲ್ದಾಣದ ಕಾರ್ಯಾಚರಣೆಗಳಿಗೆ ಅಡ್ಡಿಯಂತಹ ಅಪಾಯಗಳನ್ನು ತಗ್ಗಿಸುವ ನಿರ್ಣಾಯಕ ಗಡಿಯಾದ "ಅಪ್ರೋಚ್ ಎಲಿಪ್ಸಾಯ್ಡ್" ನಿಂದ ಕ್ರೂ ಡ್ರ್ಯಾಗನ್ ಯಶಸ್ವಿಯಾಗಿ ನಿರ್ಗಮಿಸಿದೆ.
ಮನೆಗೆ ಮರಳುವ ಮೊದಲು ವಿರಾಮ