ಪುನಶ್ಚೇತನ ಯೋಜನೆ ಭೂಮಿಗೆ ಇಳಿಯುವ ಗಗನಯಾತ್ರಿಗಳು... ... Sunita Williams: ಬಾಹ್ಯಾಕಾಶ ಕೇಂದ್ರದಿಂದ ಭೂಮಿಯತ್ತ ಹೊರಟ ಸುನಿತಾ ವಿಲಿಯಮ್ಸ್​

 ಪುನಶ್ಚೇತನ ಯೋಜನೆ

ಭೂಮಿಗೆ ಇಳಿಯುವ ಗಗನಯಾತ್ರಿಗಳು ಆರಂಭದಲ್ಲಿ ನಾಸಾದ 45 ದಿನಗಳ ಪ್ರಯಾಣದ ನಂತರದ ಪುನಶ್ಚೇತನ ಕಾರ್ಯಕ್ರಮಕ್ಕೆ ಒಳಪಡಸಲಿದ್ದಾರೆ. ವಿಶೇಷವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ಅಥವಾ ಇತರ ಬಾಹ್ಯಾಕಾಶ ಪರಿಸರಗಳಲ್ಲಿ ದೀರ್ಘಾವಧಿಯ ಕಾರ್ಯಾಚರಣೆಗಳ ನಂತರ ಭೂಮಿಯ ಪರಿಸರಕ್ಕೆ ಹೊಂದಿಕೊಳ್ಳುವ ಪ್ರಯತ್ನ ಮಾಡಲಿದ್ದಾರೆ.

ಕಾರ್ಯಕ್ರಮವು 45 ದಿನಗಳವರೆಗೆ ಇರುತ್ತದೆಯಾದರೂ, ಪೂರ್ಣ ಚೇತರಿಕೆಗೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ವಿಸ್ತೃತ ಬಾಹ್ಯಾಕಾಶ ಕಾರ್ಯಾಚರಣೆಗಳ ನಂತರ ಕೆಲವು ಗಗನಯಾತ್ರಿಗಳು ತಿಂಗಳುಗಳು ಅಥವಾ ವರ್ಷಗಳ ನಂತರವೂ ದೀರ್ಘಕಾಲದ ಪರಿಣಾಮಗಳನ್ನು ಎದುರಿಸುವ ಸಾಧ್ಯತೆಗಳು ಇವೆ. 

Update: 2025-03-18 06:44 GMT

Linked news