ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿವೆ. ಇವುಗಳಲ್ಲಿ ಜೈಶ್-ಎ-ಮೊಹಮ್ಮದ್ನ ಬಹವಲ್ಪುರ್ ಕೇಂದ್ರ ಮತ್ತು ಲಷ್ಕರ್-ಎ- ತೈಬಾದ ಮುರಿಡ್ಕೆ ಬೇಸ್ ಸೇರಿವೆ. ಈ ಕಾರ್ಯಾಚರಣೆಗೆ 'ಆಪರೇಷನ್ ಸಿಂಧೂರ' ಎಂದು ಹೆಸರಿಡಲಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ನಾಗರಿಕರ ಹತ್ಯಾಕಾಂಡಕ್ಕೆ ಎರಡು ವಾರಗಳ ನಂತರ ನಡೆಸಲಾಗಿದೆ. ರಕ್ಷಣಾ ಸಚಿವಾಲಯವು ಬೆಳಿಗ್ಗೆ 1.44ಕ್ಕೆ ಹೇಳಿಕೆ ಬಿಡುಗಡೆ ಮಾಡಿ, "ಕೆಲವೇ ಗಂಟೆಗಳ ಹಿಂದೆ, ಭಾರತೀಯ ಸಶಸ್ತ್ರ ಪಡೆಗಳು 'ಅಪರೇಷನ್ ಸಿಂಧೂರ' ಆರಂಭಿಸಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿತು,'' ಎಂದು ಹೇಳಿತು. ಈ ಕಾರ್ಯಾಚರಣೆಯಲ್ಲಿ ಯಾವುದೇ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಎಲ್ಲಾ ಒಂಬತ್ತು ಗುರಿಗಳ ಮೇಲಿನ ದಾಳಿಗಳು ಯಶಸ್ವಿಯಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ 'ಆಪರೇಷನ್ ಸಿಂಧೂರ'ವನ್ನು ನಿಕಟವಾಗಿ ಗಮನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುರಿಡ್ಕೆ, ಲಾಹೋರ್ಗೆ ಹತ್ತಿರದಲ್ಲಿರುವ ಲಶ್ಕರ್-ಎ-ತೈಯ್ಬಾದ ವಿಶಾಲ "ಮರ್ಕಾಜ್" ಅಥವಾ ಬೇಸ್ ಮೇಲೆ ದಾಳಿಯಾಗಿದೆ. ಬಹವಲ್ಪುರ್ ಜೈಶ್-ಎ-ಮೊಹಮ್ಮದ್ನ ಪ್ರಮುಖ ಕೇಂದ್ರವಾಗಿದೆ. ಇತರ ಗುರಿಗಳಾದ ಕೊಟ್ಲಿ ಮತ್ತು ಮುಜಾಫರಾಬಾದ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಪ್ರದೇಶಗಳಾಗಿದ್ದು, ಅಲ್ಲಿ ಲಶ್ಕರ್ ಮತ್ತು ಜೈಶ್ ಶಿಬಿರಗಳು ಮತ್ತು ತರಬೇತಿ ಸೌಲಭ್ಯಗಳಿವೆ. ರಕ್ಷಣಾ ಸಚಿವರು ಹೇಳಿದ್ದೇನು? ದಾಳಿಯ ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ 'X'ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿ, "ಭಾರತ ಮಾತೆ ಕೀ ಜೈ!" (ಭಾರತ ಮಾತೆಗೆ ಜಯವಾಗಲಿ) ಎಂದು ಬರೆದುಕೊಂಡಿದ್ದಾರೆ. ಪಾಕಿಸ್ತಾನ ಸೇನೆಯ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ, ಭಾರತವು ಕೊಟ್ಲಿ, ಮುಜಾಫರಾಬಾದ್ ಮತ್ತು ಬಹವಲ್ಪುರ್ನಲ್ಲಿ ಕ್ಷಿಪಣಿ ದಾಳಿಗಳನ್ನು ನಡೆಸಿದೆ ಎಂದು ದೃಢಪಡಿಸಿದ್ದಾರೆ. "ನಮ್ಮ ಎಲ್ಲಾ ವಾಯುಪಡೆ ಜೆಟ್ಗಳು ಚಲಿಸುತ್ತಿವೆ. ಈ ದಾಳಿಯನ್ನು ಭಾರತವು ತನ್ನ ವಾಯುಪ್ರದೇಶದಿಂದಲೇ ನಡೆಸಿದೆ," ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್, ಈ "ಯುದ್ಧದ ಕೃತ್ಯ"ಕ್ಕೆ "ಸೂಕ್ತ ಉತ್ತರ" ನೀಡುವ ಹಕ್ಕು ತಮ್ಮ ದೇಶಕ್ಕೆ ಇದೆ ಎಂದು ಹೇಳಿಕೊಂಡಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಭಾರತದ ಕ್ರಮವನ್ನು ಖಂಡಿಸಿದ್ದು, ಇದು "ಅಪ್ರಚೋದಿತ ಮತ್ತು ಸ್ಪಷ್ಟ ಯುದ್ಧ ಕೃತ್ಯ" ಎಂದು ಹೇಳಿಕೊಂಡಿದೆ. ದಾಳಿಗಳು ಭಾರತ-ಪಾಕಿಸ್ತಾನ ಸಂಬಂಧಗಳ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಪಾಕಿಸ್ತಾನದಿಂದ ಸಂಭಾವ್ಯ ಪ್ರತಿಕ್ರಿಯೆ ಮತ್ತು ಅಂತರರಾಷ್ಟ್ರೀಯ ಸಮುದಾಯದ ಪ್ರತಿಕ್ರಿಯೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.