ಆಫಘಾನಿಸ್ತಾನದ ಪಾಕಿಸ್ತಾನ ಗಡಿಯಲ್ಲಿ 6.0 ತೀವ್ರತೆಯ ಭೂಕಂಪ; 20 ಮಂದಿ ಸಾವು

ಇದಕ್ಕಿಂತ ಮೊದಲು, 2023ರ ಅಕ್ಟೋಬರ್ 7ರಂದು ಆಪಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ತಾಲಿಬಾನ್ ಸರ್ಕಾರದ ಪ್ರಕಾರ 4,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು.;

Update: 2025-09-01 04:50 GMT

ಅಪಘಾನಿಸ್ತಾನದ ಪೂರ್ವ ಭಾಗದಲ್ಲಿ ಪಾಕಿಸ್ತಾನ ಗಡಿಯ ಬಳಿ ಭಾನುವಾರ ರಾತ್ರಿ 11.47ಕ್ಕೆ 6.0 ತೀವ್ರತೆಯ ಭೂಕಂಪ ಸಂಭವಿಸಿದೆ. ಅಮೆರಿಕದ ಭೌಗೋಳಿಕ ಸಮೀಕ್ಷಾ ಸಂಸ್ಥೆಯ (USGS) ಮಾಹಿತಿ ಪ್ರಕಾರ, ಭೂಕಂಪನದ ಕೇಂದ್ರಬಿಂದು ಜಲಾಲಾಬಾದ್ ಸಮೀಪ, ನಂಗರ್ಹಾರ್ ಪ್ರಾಂತ್ಯದಲ್ಲಿತ್ತು. ಭೂಕಂಪನದ ಆಳ 8 ಕಿಲೋಮೀಟರ್.

ನಂಗರ್ಹಾರ್ ಸಾರ್ವಜನಿಕ ಆರೋಗ್ಯ ಇಲಾಖೆ ವಕ್ತಾರ ನಕ್ಬುಲ್ಲಾ ರಹೀಮಿ ಅವರ ಪ್ರಕಾರ, ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. ಅದೇ ರೀತಿ 15 ಮಂದಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಸುಮಾರು 20 ನಿಮಿಷಗಳ ನಂತರ ಇದೇ ಪ್ರಾಂತ್ಯದಲ್ಲಿ ಮತ್ತೊಮ್ಮೆ 4.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಆಳ 10 ಕಿಲೋಮೀಟರ್.

ಈ ಭೂಕಂಪನದ ಕಂಪನಗಳು ಭಾರತದ ಹಲವಾರು ಭಾಗಗಳಲ್ಲಿಯೂ ಕಂಡು ಬಂದಿದೆ. ಇದಕ್ಕಿಂತ ಮೊದಲು, 2023ರ ಅಕ್ಟೋಬರ್ 7ರಂದು ಆಪಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ತಾಲಿಬಾನ್ ಸರ್ಕಾರದ ಪ್ರಕಾರ 4,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು, ಆದರೆ ವಿಶ್ವಸಂಸ್ಥೆ ಅಂದಾಜು ಪ್ರಕಾರ ಸಾವಿನ ಸಂಖ್ಯೆ 1,500.

ಭೂಕಂಪ ಮತ್ತು ಪ್ರಕೃತಿ ವಿಕೋಪಗಳಿಗೆ ಹೆಚ್ಚು ತುತ್ತಾಗುವ ಪ್ರದೇಶಗಳಲ್ಲಿ ಅಘಘಾನಿಸ್ತಾನವೂ ಒಂದು. 

Tags:    

Similar News