IND vs NZ : ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡ

Update: 2025-03-09 07:34 GMT
Live Updates - Page 2
2025-03-09 10:00 GMT

ರಚಿನ್ ರವೀಂದ್ರ ಔಟ್​​. 27 ಎಸೆತಕ್ಕೆ 34 ರನ್​ ಬಾರಿಸಿದ್ದ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಕುಲ್ದೀಪ್​ ಯಾದವ್​

2025-03-09 09:46 GMT

ನ್ಯೂಜಿಲ್ಯಾಂಡ್​ ತಂಡದ ಮೊದಲ ವಿಕೆಟ್ ಪತನ. ವಿಲ್ ಯಂಗ್​ 15 ರನ್​ಗಳಿಗೆ ಔಟ್​. ವಿಕೆಟ್ ಪಡೆದ ವರುಣ್ ಚಕ್ರವರ್ತಿ, ನ್ಯೂಜಿಲ್ಯಾಂಡ್​ 8.2 ಓವರ್​ಗಳಲ್ಲಿ 61ಕ್ಕೆ 1

2025-03-09 09:27 GMT

ಐದು ಓವರ್​ಗಳ ಮುಕ್ತಾಯ

ಮೊದಲ ಐದು ಓವರ್​ಗಳ ಮುಕ್ತಾಯ. ವಿಕೆಟ್ ನಷ್ಟವಿಲ್ಲದೇ 37 ರನ್ ಬಾರಿಸಿದ ನ್ಯೂಜಿಲೆಂಡ್​. ರಚಿನ್ ರವೀಂದ್ರ 14 ಎಸೆತಕ್ಕೆ 25, ವಿಲ್ ಯಂಗ್ 10 ರನ್​. 

2025-03-09 09:12 GMT

ಎರಡು ಓವರ್​ಗಳ ಮುಕ್ತಾಯಕ್ಕೆ ಆರು ರನ್ ಬಾರಿಸಿದ ನ್ಯೂಜಿಲ್ಯಾಂಡ್ ತಂಡ,

2025-03-09 08:45 GMT

ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ

 ಅಂತಿಮ ತಂಡಗಳು  

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ವರೂಣ್ ಚಕ್ರವರ್ತಿ.

ನ್ಯೂಜಿಲೆಂಡ್: ವಿಲ್ ಯಂಗ್, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೈಲ್ ಜೇಮಿಸನ್, ನಾಥನ್ ಸ್ಮಿತ್, ವಿಲ್ ಓ'ರೂರ್ಕ್.

2025-03-09 08:43 GMT

ಏಳನೇ ಟ್ರೋಫಿ ಸಿಗುವುದೇ?

ಭಾರತ ಗೆದ್ದರೆ 7ನೇ ಬಾರಿ ಐಸಿಸಿ ಟ್ರೋಫಿ ಗೆದ್ದಂತಾಗುತ್ತದೆ. ಭಾರತ ಇದುವರೆಗೆ ತಲಾ 2 ಬಾರಿ ಏಕದಿನ ವಿಶ್ವಕಪ್​ (1983, 2011), ಟಿ20 ವಿಶ್ವಕಪ್​ (2007, 2024) ಮತ್ತು ಚಾಂಪಿಯನ್ಸ್​ ಟ್ರೋಫಿ (2002, 2013) ಜಯಿಸಿದೆ. ಭಾರತ ಗೆದ್ದರೆ 7ನೇ ಬಾರಿ ಐಸಿಸಿ ಟ್ರೋಫಿ ಗೆದ್ದಂತಾಗುತ್ತದೆ. ಭಾರತ ಇದುವರೆಗೆ ತಲಾ 2 ಬಾರಿ ಏಕದಿನ ವಿಶ್ವಕಪ್​ (1983, 2011), ಟಿ20 ವಿಶ್ವಕಪ್​ (2007, 2024) ಮತ್ತು ಚಾಂಪಿಯನ್ಸ್​ ಟ್ರೋಫಿ (2002, 2013) ಜಯಿಸಿದೆ.

2025-03-09 08:42 GMT

ದಾಖಲೆ ಬರೆದ ರೋಹಿತ್‌

ಟಾಸ್‌ ಪ್ರಕ್ರಿಯೆಗೆ ಮೈದಾನಕ್ಕಿಳಿಯುತ್ತಿದ್ದಂತೆ ನಾಯಕ ರೋಹಿತ್‌ ಶರ್ಮ ದಾಖಲೆಯೊಂದನ್ನು ತಮ್ಮ ಹೆಸೆರಿಗೆ ಬರೆದರು. ಎಲ್ಲ ನಾಲ್ಕು ಐಸಿಸಿ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿದ ವಿಶ್ವದ ಮೊದಲ ನಾಯಕ ಎನಿಸಿಕೊಂಡರು. ರೋಹಿತ್‌ ನಾಯಕತ್ವದಲ್ಲಿ ಭಾರತ 2023ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌, 2023ರ ಏಕದಿನ ವಿಶ್ವಕಪ್‌, 2024ರ ಟಿ20 ವಿಶ್ವಕಪ್‌ನಲ್ಲಿ ಆಡಿತ್ತು. ರೋಹಿತ್‌ ಹೊರತುಪಡಿಸಿ ಮಹೇಂದ್ರ ಸಿಂಗ್‌ ಧೋನಿ ಮತ್ತು ನ್ಯೂಜಿಲ್ಯಾಂಡ್‌ನ ಕೇನ್‌ ವಿಲಿಯಮ್ಸನ್‌ ಮೂರು ಮಾದರಿಯ ಐಸಿಸಿ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದ್ದರು.

2025-03-09 08:36 GMT

ಟಾಸ್ ಸೋತ ಭಾರತ


ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಟಾಸ್ ಸೋತಿದ್ದು ಮೊದಲು ಬೌಲಿಂಗ್ ಮಾಡಬೇಕಾಗಿದೆ. 

2025-03-09 08:07 GMT

ರೋಹಿತ್​ಗೆ ಗುರಿವಿನ ನೆನಪು

ರೋಹಿತ್ ಶರ್ಮಾ ಮತ್ತು ಟೀಮ್ ಇಂಡಿಯಾ ಗೆಲುವಿಗಾಗಿ ಪ್ರಾರ್ಥಿಸುತ್ತಿರುವವರಲ್ಲಿ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಕೂಡ ಒಬ್ಬರು. ತಮ್ಮ ಶಿಷ್ಯನಾದ ರೋಹಿತ್ ಮತ್ತು ಸಂಪೂರ್ಣ ತಂಡಕ್ಕೆ ಅವರು ವಿಶೇಷ ಸಂದೇಶವನ್ನು ಕಳುಹಿಸಿದ್ದಾರೆ. ದ ಫೆಡರಲ್​ ಜತೆ ಮಾತನಾಡಿದ ಲಾಡ್, ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 2024ರ ಟಿ20 ವಿಶ್ವಕಪ್ ಜಯಕ್ಕೆ ಉಲ್ಲೇಖ ಮಾಡುತ್ತಾ, ರೋಹಿತ್ ತಂಡವನ್ನು ಮುನ್ನಡೆಸಿ ಟ್ರೋಫಿ ತರುವುದಾಗಿ ಮಾಡಿದ ವಾಗ್ದಾನವನ್ನು ಈ ಬಾರಿ ಕೂಡ ಪಾಲಿಸುತ್ತಾರೆ ಎಂದು ಹೇಳಿದರು. 

2025-03-09 07:36 GMT



Tags:    

Similar News