IND vs NZ : ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡ
x

IND vs NZ : ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡ

ನಿಧಾನಗತಿಯ ಆಡದ ನಡುವೆಯೂ ಕೊನೇ ಹಂತದಲ್ಲಿ ಬಿಡುಬೀಸಾಗಿ ಆಡಿದ ನ್ಯೂಜಿಲೆಂಡ್ ತಂಡ ನಿಗದಿತ 50 ಓವರ್​ಗಲ್ಲಿ 7 ವಿಕೆಟ್​ಗೆ 251 ರನ್ ಬಾರಿಸಿತು.


ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಫೈನಲ್ ಪಂದ್ಯದಲ್ಲಿ, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಭಾನುವಾರ (ಮಾರ್ಚ್ 9) ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭಗೊಂಡಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತೆ ಟಾಸ್ ಸೋತಿದ್ದು ಎದುರಾಳಿ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಟಾಸ್ ಸೋತಿರುವ ಟೀಮ್ ಇಂಡಿಯಾ ಮೊದಲು ಫೀಲ್ಡಿಂಗ್ ಮಾಡಬೇಕಾಗಿದೆ. ಹಿಂದಿನ ಕೆಲವು ಪಂದ್ಯಗಳಲ್ಲಿ, ಭಾರತವು ಚೇಸಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ದುಬೈನ ಪಿಚ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಹೆಚ್ಚು ರನ್ ಮಾಡಿದರೆ ಒತ್ತಡ ಕಡಿಮೆಯಾಗಬಹುದು. ಇದೀಗ ಭಾರತದ ಬೌಲರ್‌ಗಳ ಮೇಲೆ ಪ್ರಾರಂಭಿಕ ಹೊಣೆ ಹೆಚ್ಚಾಗಲಿದ್ದು, ನಾಯಕ ರೋಹಿತ್ ಶರ್ಮಾ ಸೂಕ್ತ ಬೌಲಿಂಗ್ ಕ್ರಮಗಳನ್ನು ಅನುಸರಿಸಿ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಬಲ ಕುಗ್ಗಿಸಬೇಕಾಗುತ್ತದೆ.


ಚಾಂಪಿಯನ್ಸ್​ ಟ್ರೋಫಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಅಜೇಯವಾಗಿ ಫೈನಲ್ ತಲುಪಿದರೆ, ನ್ಯೂಜಿಲೆಂಡ್ ಭಾರತ ವಿರುದ್ಧ ಕೇವಲ ಒಂದೇ ಪಂದ್ಯದಲ್ಲಿ ಸೋತು ಬಂದಿದೆ. ಹೀಗಾಗಿ ಜಿದ್ದಾಜಿದ್ದಿನ ಸ್ಪರ್ಧೆ ನಿರೀಕ್ಷೆ ಮಾಡಲಾಗಿದ್ದು ಭಾರತ ಸತತವಾಗಿ ಎರಡನೇ ಐಸಿಸಿ ಟ್ರೋಫಿ ಗೆಲ್ಲುವುದೇ ಎಂಬ ಕೌತುಕ ಸೃಷ್ಟಿಯಾಗಿದೆ. 2024ರ ಸಾಲಿನ ಐಸಿಸಿ ಟಿ20 ವಿಶ್ವ ಕಪ್​ ಟ್ರೋಫಿ ಗೆದ್ದಿತ್ತು.

ಈಗಾಗಲೇ ಐಸಿಸಿ ಟೂರ್ನಿಗಳಲ್ಲಿ ತಮ್ಮ 9ನೇ ಫೈನಲ್ ಪಂದ್ಯ ಆಡುತ್ತಿರುವ ರೋಹಿತ್ ಮತ್ತು ವಿರಾಟ್ ಕೋಹ್ಲಿ, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಅಂದ ಹಾಗೆ ಐಸಿಸಿ ಫೈನಲ್‌ಗಳಲ್ಲಿ ವಿರಾಟ್ ಕೊಹ್ಲಿಯ ಸಾಧನೆ ರೋಹಿತ್ ಶರ್ಮಾ ಅವರಿಗಿಂತ ಉತ್ತಮವಾಗಿದೆ. ಕೊಹ್ಲಿ 10 ಇನ್ನಿಂಗ್ಸ್‌ಗಳಲ್ಲಿ 410 ರನ್ ಗಳಿಸಿದರೆ, ರೋಹಿತ್ 10 ಇನಿಂಗ್ಸ್​ಗಳಲ್ಲಿ 246 ರನ್ ಗಳಿಸಿದ್ದಾರೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜತೆಯಾಗಿ ಮೂರು ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2007 ಟಿ20 ವಿಶ್ವಕಪ್, 2013 ಚಾಂಪಿಯನ್ಸ್ ಟ್ರೋಫಿ, ಮತ್ತು 2024 ಟಿ20 ವಿಶ್ವಕಪ್ ಗೆದ್ದಿದ್ದಾರೆ. ಇದರೊಂದಿಗೆ ಕೊಹ್ಲಿ 2011 ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವೂ ಆಗಿದ್ದರು.

ಭಾರತದ ಸ್ಪಿನ್ ಅಸ್ತ್ರ

ಈ ಫೈನಲ್ ಪಂದ್ಯದಲ್ಲಿ ಭಾರತೀಯ ಸ್ಪಿನ್ ದಾಳಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ. ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಮತ್ತು ವರುಣ್​ ಚಕ್ರವರ್ತಿ ಗೆಲುವು ತಂದುಕೊಡಬಹುದು ಎಂಬ ನಿರೀಕ್ಷೆಯಿದೆ.. ದುಬೈನಲ್ಲಿ ವರುಣ್ ಚಕ್ರವರ್ತಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ ಎಂಬುದು ಗಮನಾರ್ಹ.

ದಾಖಲೆ ವೀಕ್ಷಕರ ನಿರೀಕ್ಷೆ

ಈ ಫೈನಲ್ ಪಂದ್ಯಕ್ಕೆ ಅಭೂತಪೂರ್ವ ಸಂಖ್ಯೆಯ ಪ್ರೇಕ್ಷಕರ ನಿರೀಕ್ಷೆಯಿದೆ, ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಸ್ಟಾರ್ ಅಪ್ಲಿಕೇಶನ್​ನಲ್ಲಿ ಪಂದ್ಯ ವೀಕ್ಷಣೆಗೆ ಲಭ್ಯವಿದೆ.

ಭಾರತ-ಆಸ್ಟ್ರೇಲಿಯಾ ನಡುವಿನ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ 66.9 ಕೋಟಿ ಮಂದಿ ವೀಕ್ಷಿಸಿದ್ದು, ಭಾರತ-ಪಾಕಿಸ್ತಾನ ಲೀಗ್ ಹಂತದ 60.2 ಕೋಟಿ ವೀಕ್ಷಕರ ದಾಖಲೆಯನ್ನು ಮುರಿದಿದೆ.

ದುಬೈನಲ್ಲಿ ಅಜೇಯ ದಾಖಲೆ

ಭಾರತವು 2018 ರಿಂದ ದುಬೈ ಸ್ಟೇಡಿಯಂನಲ್ಲಿ **ಒಂದೇ ಒಂದು ಏಕದಿನ ಪಂದ್ಯವನ್ನೂ ಸೋತಿಲ್ಲ ಎಂಬುದು ಗಮನಾರ್ಹ. ಈ ಅವಧಿಯಲ್ಲಿ 9 ಗೆಲುವು ಹಾಗೂ 1 ಟೈ ಸಾಧನೆ ಮಾಡಿದೆ.

ನ್ಯೂಜಿಲೆಂಡ್ ಸ್ಪಿನ್ನರ್‌ಗಳ ಬಲವನು?

ನ್ಯೂಜಿಲೆಂಡ್ ತಂಡವು ಮಿಚೆಲ್ ಸ್ಯಾಂಟ್ನರ್, ಮೈಕಲ್ ಬ್ರೇಸ್‌ವೆಲ್ ಮತ್ತು ರಚಿನ್ ರವೀಂದ್ರ ಅವರ ಸ್ಪಿನ್ ಬಲದೊಂದಿಗೆ ಆಡಲಿದೆ ಸ್ಪಿನ್ ಅನುಕೂಲಕರ ಪಿಚ್‌ನಲ್ಲಿ ಅವರ ಪಾತ್ರ ಪ್ರಮುಖವಾಗಲಿದೆ.

ಬ್ಯಾಟಿಂಗ್ ಸಮರ

ಭಾರತದ ಬ್ಯಾಟಿಂಗ್ ವೈಭವವು ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ, ಶುಭಮನ್ ಗಿಲ್, ಮತ್ತು ಶ್ರೇಯಸ್ ಅಯ್ಯರ್​ ಅವರೊಂದಿಗೆ ಮುಂದುವರಿಯಲಿದೆ. ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್ ಮತ್ತು ಅನುಭವಿ ನಾಯಕ ಕೇನ್ ವಿಲಿಯಮ್ಸನ್ ಪ್ರಮುಖ ಆಟಗಾರರಾಗಿದ್ದಾರೆ.

ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್​ ಮುನ್ನಡೆ

ಐಸಿಸಿ ಟೂರ್ನಿಗಳಲ್ಲಿಯೇ ನೋಡಿದರೆ, ನ್ಯೂಜಿಲೆಂಡ್ ತಂಡ ಭಾರತಕ್ಕಿಂತ ಉತ್ತಮ ದಾಖಲೆ ಹೊಂದಿದೆ ಎಲ್ಲಾ ಐಸಿಸಿ ಟೂರ್ನಿಗಳ ಮುಖಾಮುಖಿ ಹೋಲಿಕೆಯಲ್ಲಿ ನ್ಯೂಜಿಲೆಂಡ್ 10-6 ಮುನ್ನಡೆ ಹೊಂದಿದೆ. ಅಲ್ಲದೇ, ನಾಕೌಟ್ ಹಂತದ ಪಂದ್ಯಗಳಲ್ಲಿ ನ್ಯೂಜಿಲೆಂಡ್ 3-1 ಮುನ್ನಡೆ ಸಾಧಿಸಿದೆ.

ಪಂದ್ಯದ ಆರಂಭ ಸಮಯ

ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2:30ಕ್ಕೆ** ಪ್ರಾರಂಭವಾಗಲಿದೆ.

ತಂಡಗಳ ವಿವರ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೋಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್, ರವೀಂದ್ರ ಜಡೇಜಾ, ವರೂಣ್ ಚಕ್ರವರ್ತಿ.

ನ್ಯೂಜಿಲೆಂಡ್: ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವಾನ್ ಕಾನ್ವೆ, ಕೈಲ್ ಜೇಮಿಸನ್, ಮ್ಯಾಟ್ ಹೆನ್ರಿ, ಟಾಮ್ ಲಾಥಮ್ (ವಿಕೆಟ್ ಕೀಪರ್), ಡ್ಯಾರಿಲ್ ಮಿಚೆಲ್, ವಿಲ್ ಓ'ರೂರ್ಕ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ನಾಥನ್ ಸ್ಮಿತ್, ಕೇನ್ ವಿಲಿಯಮ್ಸನ್, ವಿಲ್ ಯಂಗ್, ಜೇಕಬ್ ಡಫಿ.

Live Updates

  • 9 March 2025 8:16 PM IST

    ಭಾರತ ತಂಡ ಮಧ್ಯಮ ಕ್ರಮಾಂಕದಲ್ಲಿ ಒತ್ತಡಕ್ಕೆ ಬಿದ್ದಿದೆ. ೧೨೨ ರನ್​ಗಳಿಗೆ ೩ ವಿಕೆಟ್​ ಕಳೆದುಕೊಂಡಿತು. ರೋಹಿತ್ ಶರ್ಮಾ ೮೩ ಎಸೆತಕ್ಕೆ ೭೬ ರನ್ ಬಾರಿಸಿ ಔಟಾದರು.

  • 9 March 2025 7:56 PM IST

    ಬ್ರೇಸ್​ವೆಲ್​ ಸ್ಪಿನ್ ಬೌಲಿಂಗ್​ಗೆ ಎಲ್​ಬಿಡಬ್ಲ್ಯು ಆಗಿ ಔಟಾದ ವಿರಾಟ್ ಕೊಹ್ಲಿ

  • 9 March 2025 5:37 PM IST

    ಅರ್ಧ ಶತಕ ಬಾರಿಸಿದ್ದ ಡ್ಯಾರಿಲ್ ಮಿಚಲ್​ ಔಟ್​. ಶಮಿ ಎಸೆತಕ್ಕೆ ರೋಹಿತ್​ಗೆ ಕ್ಯಾಚ್ ನೀಡಿ ಔಟ್​.


  • 9 March 2025 5:21 PM IST

    91 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿ ನ್ಯೂಜಿಲೆಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್​

  • 9 March 2025 5:03 PM IST

    ನ್ಯೂಜಿಲೆಂಡ್ ತಂಡದ ಐದನೇ ವಿಕೆಟ್ ಪತನ, ವರುಣ್ ಚಕ್ರವರ್ತಿ ಎಸೆತಕ್ಕೆ ಗ್ಲೆನ್ ಫಿಲಿಪ್ಸ್​ ಬೌಲ್ಡ್ ಆದರು.ಅದಕ್ಕೆ ಮೊದಲು ಅವರು 52 ಎಸೆತಕ್ಕೆ 34 ರನ್ ಬಾರಿಸಿದರು. 

  • 9 March 2025 4:40 PM IST

    20 ರಿಂದ 30 ಓವರ್​ಗಳ ನಡುವಿನ ಹೈಲೈಟ್ ಇಲ್ಲಿದೆ

    - ಲೇಥಮ್​ ಅವರಿಗೆ ಎಲ್‌ಬಿಡಬ್ಲ್ಯೂ ಅಪೀಲ್ ಮಾಡಿದ ಭಾರತ ತಂಡ ರಿವ್ಯೂ ಕಳೆದುಕೊಂಡಿತು.

    - ಲೇಥಮ್​ ಎರಡನೇ ಬಾರಿಗೆ ತಪ್ಪಿಸಿಕೊಳ್ಳಲಾಗಿಲ್ಲ, ಜಡೇಜಾ ಬೌಲಿಂಗ್​ನಲ್ಲಿ ಎಲ್‌ಬಿಡಬ್ಲ್ಯೂ ಔಟ್ ಆದರು,

    - ನಂತರ ಬಂದ ಗ್ಲೆನ್ ಫಿಲಿಪ್ಸ್ ರನ್​ಗೆ ವೇಗ ಕೊಡಲು ಯತ್ನಿಸಿದರು. 81 ಎಸೆತಗಳ ಬಳಿಕ ಒಂದು ಎಸೆತ ಬೌಂಡರಿ ಗೆರೆ ದಾಟಿತು.

    - ಬ್ಯಾಟಿಂಗ್‌ಗೆ ಬಂದಾಗಿನಿಂದಲೇ ಚುರುಕು ಆಟವಾಡುತ್ತಿರುವ ಗ್ಲೆನ್ ಫಿಲಪ್ಸ್​ 25 ಎಸೆತಕ್ಕೆ 17 ರನ್ ಬಾರಿಸಿದರೆ, ಮಿಚೆಲ್ 59 ಎಸೆತಕ್ಕೆ 32 ರನ್ ಬಾರಿಸಿದ್ದಾರೆ.  

  • 9 March 2025 4:38 PM IST

    30 ಓವರ್​ಗಳ ಮುಕ್ತಾಯಕ್ಕೆ 4 ವಿಕೆಟ್ ನಷ್ಟ ಮಾಡಿಕೊಂಡು 134 ರನ್ ಬಾರಿಸಿದ ನ್ಯೂಜಿಲೆಂಡ್ ತಂಡ.

  • 9 March 2025 4:21 PM IST

    25 ಓವರ್​ಗಳು ಮುಕ್ತಾಯ 4 ವಿಕೆಟ್​ ಕಳೆದುಕೊಂಡು 114 ರನ್ ಬಾರಿಸಿದ ನ್ಯೂಜಿಲೆಂಡ್​. ನಿಯಂತ್ರಣ ತೆಗೆದುಕೊಂಡು ನ್ಯೂಜಿಲೆಂಡ್ ಬೌಲರ್​ಗಳು.

  • 9 March 2025 4:16 PM IST

    ಟಾಮ್ ಲೇಥಮ್ ವಿಕೆಟ್ ಪಡೆದ ಜಡೇಜಾ, ನ್ಯೂಜಿಲೆಂಡ್​ 23 ಓವರ್​ಗಳಲ್ಲಿ 108 ರನ್ ಬಾರಿಸಿದೆ. 34 ಎಸೆತಗಳಿಗೆ 14 ರನ್​ ಬಾರಿಸಿದ್ದ ಲೇಥಮ್ ಔಟ್​. 

  • 9 March 2025 4:06 PM IST

    10ರಿಂದ 20 ಓವರ್​ಗಳ ತನಕ ಏನಾಯಿತು?

    - ಕುಲ್ದೀಪ್ ಯಾದವ್ ತನ್ನ ಮೊದಲ ಎಸೆತದಲ್ಲೇ ರಚಿನ್ ರವೀಂದ್ರನನ್ನು ಕ್ಲೀನ್ ಬೌಲ್ಡ್ ಮಾಡಿದರು.

    - ಕುಲ್ದೀಪ್ ತನ್ನ ಎರಡನೇ ಓವರ್‌ನಲ್ಲೂ ವಿಕೆಟ್ ಪಡೆದು, ಕೇನ್ ವಿಲಿಯಮ್ಸನ್ ಅನ್ನು ಪೆವಿಲಿಯನ್‌ಗೆ ಹಡಿಸಿದರು.

    - ಭಾರತೀಯ ಸ್ಪಿನ್ನರ್‌ಗಳು ಒತ್ತಡ ಹೆಚ್ಚಿಸಿ, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ರನ್ ಮಾಡದಂತೆ ನೋಡಿಕೊಂಡರು.

    - 40 ಎಸೆತಗಳಿಂದ ಒಂದೇ ಒಂದು ಬೌಂಡರಿ ಸಹ ಬಾರಿಸಿಲ್ಲ. ಭಾರತದ ಬೌಲಿಂಗ್ ಪ್ರಭಾವ ಹೆಚ್ಚಾಗುತ್ತಿದೆ. 

Read More
Next Story