Namma Metro | ಆತ್ಮಹತ್ಯೆ ಯತ್ನ: ಮೆಟ್ರೋ ಹಳಿಗೆ ಜಿಗಿದ ಯುವಕ, ಪ್ರಾಣಾಪಾಯದಿಂದ ಪಾರು
Namma Metro | ಮೆಟ್ರೋ ಬರುತ್ತಿದ್ದಂತೆ ಯುವಕ ಹಳಿಗೆ ಜಿಗಿದು ಹಳಿಯ ಮಧ್ಯೆ ಮಲಗಿದ್ದಾನೆ. ಕೂಡಲೇ ರೈಲು ನಿಲ್ಲಿಸಲಾಗಿದೆ.;
By : The Federal
Update: 2025-01-20 05:24 GMT
ಮಾದಾವರ ಕಡೆಯಿಂದ ರೇಷ್ಮೆ ಸಂಸ್ಥೆ ಕಡೆ ತೆರಳುತ್ತಿದ್ದ ಮೆಟ್ರೋ ಹಸಿರು ಮಾರ್ಗದ ರೈಲಿಗೆ ಯುವಕನೊಬ್ಬ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸೋಮವಾರ ಬೆಳಿಗ್ಗೆ ಜಾಲಹಳ್ಳಿ ನಿಲ್ದಾಣದಲ್ಲಿ ನಡೆದಿದೆ.
ಮಾದಾವರದಿಂದ ಮೆಜೆಸ್ಟಿಕ್ ಕಡೆಗೆ ಸಾಗುತ್ತಿದ್ದ ಬೆಳಿಗ್ಗೆ 10.20ರ ಮೆಟ್ರೋ ರೈಲು ಬರುತ್ತಿದ್ದಂತೆ ಯುವಕ ಏಕಾಏಕಿ ಹಳಿಗೆ ಜಿಗಿದು, ಹಳಿಯ ಮಧ್ಯೆ ಮಲಗಿದ್ದಾನೆ. ವೇಗವಾಗಿ ಬರುತ್ತಿದ್ದ ತುರ್ತು ಬ್ರೇಕ್ ಹಾಕಿ ನಿಲ್ಲಿಸಿತು. ಮೆಟ್ರೋ ಸಿಬ್ಬಂದಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದರು. ಇದರಿಂದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸ್ಥಳಕ್ಕೆ ಪೊಲೀಸರು, ಮೆಟ್ರೋ ಸಿಬ್ಬಂದಿಗಳು ದೌಡಾಯಿಸಿಯಿದ್ದು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಮಾದಾವರದಿಂದ ಮೆಜೆಸ್ಟಿಕ್ ವರೆಗಿನ ಮೆಟ್ರೋ ರೈಲು ಸಂಚಾರವನ್ನು ಅರ್ಧ ಗಂಟೆ ಕಾಲ ಸ್ಥಗಿತಗೊಂಡಿತ್ತು. ಈ ಮಾರ್ಗದ ಎಲ್ಲ ನಿಲ್ದಾಣಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಕಂಡು ಬಂದಿತು.