ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ಮೆಟ್ರೋ ರೈಲಿಗೆ ಮಹಿಳಾ ಲೋಕೋ ಪೈಲೆಟ್‌

ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿರುವ ನರೇಂದ್ರ ಮೋದಿ ಎಲೆಕ್ಟ್ರಾನಿಕ್‌ ಸಿಟಿ ಮೆಟ್ರೋ ಸ್ಟೇಷನ್‌ವರೆಗೆ ಸಂಚಾರ ಮಾಡಲಿದ್ದಾರೆ. ಅವರಿಗೆ ಮಹಿಳಾ ಲೋಕೋ ಪೈಲಟ್‌ ವಿನುತಾ ಸಾರಥಿಯಾಗಲಿದ್ದಾರೆ.;

Update: 2025-08-10 06:29 GMT

ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕರ್ಪಣೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿರುವ ನರೇಂದ್ರ ಮೋದಿ ಎಲೆಕ್ಟ್ರಾನಿಕ್‌ ಸಿಟಿ ಮೆಟ್ರೋ ಸ್ಟೇಷನ್‌ವರೆಗೆ ಸಂಚಾರ ಮಾಡಲಿದ್ದಾರೆ. 

ಮೆಟ್ರೋದಲ್ಲಿ ಸಂಚಾರ ಮಾಡುವ ನರೇಂದ್ರ ಮೋದಿ ಅವರಿಗೆ ಮೆಟ್ರೋ ಮಹಿಳಾ ಲೋಕೋ ಪೈಲಟ್‌ ವಿನುತಾ ಸಾರಥಿಯಾಗಲಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ 117 ಜನರು ಪ್ರಯಾಣ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ. 

ಪ್ರಧಾನಿ ನರೇಂದ್ರ ಮೋದಿ ಜತೆಗೆ ಎಂಟು ಜನ ಮಕ್ಕಳು, ಎಂಟು ಮೆಟ್ರೋ ಉದ್ಯೋಗಿಗಳು, ಸರ್ಕಾರಿ ಹೈಸ್ಕೂಲ್​ನಿಂದ 16 ವಿದ್ಯಾರ್ಥಿಗಳು, ಆರ್.ವಿ ರೋಡ್ ನಿಂದ ಬೊಮ್ಮಸಂದ್ರ ಹಳದಿ ಮಾರ್ಗ ಮಾರ್ಗದಲ್ಲಿ ಕೆಲಸ ಮಾಡಿದ ಎಂಟು ಕಾರ್ಮಿಕರು ಮತ್ತು 8 ಜನಸಾಮಾನ್ಯರಿಗೆ ಅವಕಾಶ ನೀಡಲಾಗಿದೆ. ಇವರೆಲ್ಲಾ ಮೋದಿ ಜತೆಗೆ ಮೊದಲ  ಕೋಚ್​ನಲ್ಲಿ ಪ್ರಯಾಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. 

ಹಳದಿ ಮಾರ್ಗ ಸಂಚಾರ ರಹಿತ ರೈಲು ಆಗಿದ್ದರೂ, ಇಂದಿನಿಂದ ಚಾಲಕ ರಹಿತ ರೈಲು ಸಂಚಾರ ಮಾಡುತ್ತಿಲ್ಲ. ಸದ್ಯಕ್ಕೆ ಚಾಲಕರಿಂದಲೇ ಮೆಟ್ರೋ ರೈಲು ಸಂಚರಿಸಲಿದೆ. ಆರು ತಿಂಗಳಗಳ ಬಳಿಕ ಚಾಲಕ ರಹಿತ ರೈಲು ಸಂಚಾರ ಮಾಡಲಾಗುವುದು.  ಹಾಗಾಗಿ ಪ್ರಧಾನಿ ಮೋದಿ ಸಂಚಾರ ಮಾಡುವ ರೈಲಿಗೆ ಲೋಕೋ ಪೈಲಟ್ ಇರಲಿದ್ದಾರೆ. ಇಂದು ಹಳದಿ ಮಾರ್ಗಕ್ಕೆ ಚಾಲನೆ ಸಿಕ್ಕರೂ ಪ್ರಯಾಣಿಕರಿಗೆ ಸಂಚಾರ ಮಾಡಲು ಅವಕಾಶವಿಲ್ಲ. ನಾಳೆ ಬೆಳಿಗ್ಗೆ ಐದು ಗಂಟೆಯಿಂದ ಹಳದಿ ಲೈನ್​​ನಲ್ಲಿ ಪ್ರಯಾಣಿಕರು ಸಂಚಾರ ಮಾಡಬಹುದಾಗಿದೆ.

ಆರು ಮೆಟ್ರೋ ಸ್ಟೇಷನ್​ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿ ಕಾರ್ಯಕ್ರಮಕ್ಕೆ ಐದು ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ರಾಗಿಗುಡ್ಡದಿಂದ ಮೆಟ್ರೋ ರೈಲು ಸಂಚಾರ ಆರಂಭಗೊಂಡು ಜಯದೇವ ಮೆಟ್ರೋ ಸ್ಟೇಷನ್​ನಲ್ಲಿ ಐದು ನಿಮಿಷ ನಿಲ್ಲಲ್ಲಿದೆ. ನಂತರ ಸಿಲ್ಕ್ ಬೋರ್ಡ್, ಹೊಂಗಸಂದ್ರ, ಸಿಂಗಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಕೊನಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್​ನಲ್ಲಿ ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ಗಣ್ಯರು ರೈಲಿನಿಂದ ಇಳಿಯಲಿದ್ದಾರೆ. 


Tags:    

Similar News