ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದ ಸ್ಥಳಗಳಲ್ಲಿ ಎರಡನೇ ದಿನವೂ ಕಣ್ಮರೆಯಾದ ಜನರ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾಗಿದ್ದು, ಬದುಕುಳಿದವರನ್ನು ಹೊರತೆಗೆಯಲು ರಕ್ಷಣಾ ತಂಡಗಳು ಮುಂದಾಗಿವೆ. ಮಂಗಳವಾರ (ಜುಲೈ 30) ಮುಂಜಾವ ಭಾರೀ ಮಳೆಯ ನಡುವೆ ಕೇರಳದ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶವಾದ ವಯನಾಡ್ ಜಿಲ್ಲೆಯ ಮೆಪ್ಪಾಡಿಯಲ್ಲಿ ಬಳಿ ಭಾರೀ ಭೂ ಕುಸಿತದಿಂದ ಈವರೆಗೆ, 243 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ನೂರಾರು ಮಂದಿ ಇನ್ನೂ ಅವಶೇಷಗಳಡಿ ಸಿಲುಕಿದ್ದು, ಸಾವು-ನೋವು ಸಂಭವಿಸುವ ಭೀತಿ ಎದುರಾಗಿದೆ.ಸೇನೆ, ನೌಕಾಪಡೆ ಮತ್ತು NDRF ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಬದುಕುಳಿದವರನ್ನು ಹೊರತೆಗೆಯಲು ಪ್ರಯತ್ನ ನಡೆಸಿವೆ. ಸಂತ್ರಸ್ತರಿಗೆ ನೆರವು ನೀಡಲು ಅನೇಕರು ಮುಂದಾಗಿದ್ದಾರೆ.ಸರ್ಕಾರದ ಮೂಲಗಳ ಪ್ರಕಾರ, ವಯನಾಡ್ ಜಿಲ್ಲೆಯ ಮೆಪ್ಪಾಡಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಭಾರೀ ಭೂಕುಸಿತಗಳು ಸಂಭವಿಸಿವೆ. ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹಾಳಾಗಿವೆ ಹಾಗಾಗಿ ಸಂಪರ್ಕವೂ ಕಡಿದುಕೊಂಡಿವೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಮೃತರ ದೇಹಗಳನ್ನು ಗುರುತಿಸಲು ಮತ್ತು ಮರಣೋತ್ತರ ಪರೀಕ್ಷೆಗಾಗಿ ವಿವಿಧ ಆಸ್ಪತ್ರೆಗಳ ಶವಾಗಾರಗಳಿಗೆ ಕೊಂಡೊಯ್ಯಲಾಗುತ್ತಿದೆ. ಬದುಕುಳಿದವರನ್ನು ತ್ವರಿತವಾಗಿ ಸ್ಥಳಾಂತರಿಸಲು, ಸೂಲೂರಿನಿಂದ ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್ಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ ಹೆಚ್ಚಿನ ಲೈವ್ ಅಪ್ಡೇಟ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: https://thefederal.com/category/live/wayanad-landslides-live-rescue-ops-continue-on-second-day-toll-143-136259?infinitescroll=1