ಬೆಂಗಳೂರು ಪಶ್ಚಿಮ ಭಾಗದ ನಿವಾಸಿಗಳೇ ಗಮನಿಸಿ: ಇಂದು ನೀರು ಪೂರೈಕೆಯಲ್ಲಿ ವ್ಯತ್ಯಯ
ದೊಡ್ಡ ಗಾತ್ರದ ವಾಲ್ ಕೆಟ್ಟು ಹೋಗಿರುವುದರಿಂದ ಸದರಿ ಪ್ರದೇಶಕ್ಕೆ ನೀರು ಸರಬರಾಜನ್ನು ಸ್ಥಗಿತಗೊಳಿಸಿ ತುರ್ತಾಗಿ ಆ.1ರಂದು ಬೆಳಗ್ಗೆ 6ಗಂಟೆಯಿಂದ ಸದರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.;
ಕಾವೇರಿ ನೀರು
ನಗರದ ಪಶ್ಚಿಮ ಭಾಗಕ್ಕೆ ನೀರು ಸರಬರಾಜು ಮಾಡುವ ಪ್ರಮುಖ ವಾಲ್ವೊಂದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಆಗಸ್ಟ್ 1ರಂದು (ಶುಕ್ರವಾರ) ಹಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಜಲಮಂಡಳಿ ಅಧ್ಯಕ್ಷರಾದ ಡಾ. ವಿ. ರಾಮಪ್ರಸಾತ್ ಮನೋಹರ್ ಅವರು, "ಪಶ್ಚಿಮ ಪ್ರದೇಶಕ್ಕೆ ನೀರು ಪೂರೈಸುವ ದೊಡ್ಡ ಗಾತ್ರದ ವಾಲ್ವ್ ಕೆಟ್ಟುಹೋಗಿದೆ. ಇದರ ತುರ್ತು ದುರಸ್ತಿ ಕಾಮಗಾರಿಯನ್ನು ಆಗಸ್ಟ್ 1ರಂದು ಬೆಳಗ್ಗೆ 6 ಗಂಟೆಯಿಂದ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಕಾರಣದಿಂದ ನೀರು ಸರಬರಾಜನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ. ಸಾರ್ವಜನಿಕರಿಗಾಗುವ ಅನಾನುಕೂಲಕ್ಕೆ ಮಂಡಳಿಯು ವಿಷಾದ ವ್ಯಕ್ತಪಡಿಸುತ್ತದೆ" ಎಂದು ಹೇಳಿದ್ದಾರೆ.
ನೀರು ವ್ಯತ್ಯಯವಾಗಲಿರುವ ಪ್ರದೇಶಗಳು
ಚಂದ್ರ ಲೇಔಟ್ (ಹಂತ 1 ಮತ್ತು 2), ಬಿಸಿಸಿ ಲೇಔಟ್, ಅತ್ತಿಗುಪ್ಪೆ, ಮಾರುತಿ ನಗರ, ಜ್ಯೋತಿನಗರ, ವಿದ್ಯಾಗಿರಿ ಲೇಔಟ್, ಗಂಗೋಂಡನಹಳ್ಳಿ, ನಾಯಂಡಹಳ್ಳಿ, ಮೆಟ್ರೋ ಲೇಔಟ್, ವಿಡಿಯೋ ಲೇಔಟ್, ಕೆಪಿಎ ಬ್ಲಾಕ್, ಬಸವೇಶ್ವರ ಲೇಔಟ್, ವಿನಾಯಕ ಲೇಔಟ್, ಐಟಿಐ ಲೇಔಟ್ (ನಾಯಂಡಹಳ್ಳಿ), ಪಂತರಪಾಳ್ಯ, ಮೈಸೂರು ರಸ್ತೆ ಐಟಿಐ ಲೇಔಟ್, ಎಫ್ಸಿಐ ಲೇಔಟ್, ರೋಷನ್ ನಗರ, ಅರುಂಧತಿ ನಗರ.
ಮಾಗಡಿ ರಸ್ತೆಯ 16 ರಿಂದ 20ನೇ ಅಡ್ಡರಸ್ತೆ, ಎರಡನೇ ಅಡ್ಡರಸ್ತೆಯಿಂದ 12ನೇ ಅಡ್ಡರಸ್ತೆ, ಕೆಂಪಾಪುರ ಅಗ್ರಹಾರ, ಅವಲಮ್ಮ ಛತ್ರ, ಬಂಡೆ ಕೊಳಚೆ ಪ್ರದೇಶ, ವಿಎಸ್ಟಿ ಕಾಲೋನಿ, ಅಶ್ವತ್ ನಗರ, ಭುವನೇಶ್ವರಿ ನಗರ, ಕೇಶವ ನಗರ, ಕಸ್ತೂರಿಬಾ ನಗರ, ಆರ್ಪಿಸಿ ಬಡಾವಣೆ, ಹಂಪಿನಗರ, ನ್ಯೂ ಕಾಲೋನಿ, ಕವಿಕಾ ಬಡಾವಣೆ, ದೀಪಾಂಜಲಿ ನಗರ, ವೆಂಕಟೇಶ್ವರ ನಗರ ಕೊಳಚೆ ಪ್ರದೇಶ, ಪ್ರಕಾಶ್ ನಗರ, ಮಹಾಲಕ್ಷ್ಮೀ ಲೇಔಟ್, ರಾಜಾಜಿನಗರ 1ನೇ ಬ್ಲಾಕ್, ಸುಬ್ರಮಣ್ಯ ನಗರ, ಗಾಯತ್ರಿ ನಗರ, ನಂದಿನಿ ಲೇಔಟ್, ಮತ್ತು ದಾಸರಹಳ್ಳಿ.