ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರದಲ್ಲಿ ಬಿಜೆಪಿ ಹಾಗೂ ಚುನಾವಣಾ ಆಯೋಗ ಸೇರಿ 1,00,250 ಮತಕಳವು ಸೂರ್ಯ ಚಂದ್ರರಷ್ಟೇ ಸತ್ಯ. ಸಂವಿಧಾನದಡಿ ಕಾರ್ಯ ನಿರ್ವಹಿಸಬೇಕಾದ ಚುನಾವಣಾ ಆಯೋಗವು ಬಿಜೆಪಿ ಆಣತಿಯಂತೆ ವರ್ತಿಸುತ್ತಿದೆ. ಮಹದೇವಪುರ ಒಂದೇ ಅಲ್ಲ, ಇಡೀ ದೇಶಾದ್ಯಂತ ಬಿಜೆಪಿ ಹಾಗೂ ಆಯೋಗ ಸೇರಿಕೊಂಡು ಮತಕಳವು ಮಾಡಿವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದರು. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ನಡೆದ ಮತಗಳ್ಳತನ ಕುರಿತ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಆರು ತಿಂಗಳು ಶ್ರಮವಹಿಸಿ ಮತ ಕಳವು ವಿಶ್ಲೇಷಿಸಿದ್ದೇವೆ. ಇದರ ದಾಖಲೆ ಬಹಿರಂಗಪಡಿಸಿದ ನನಗೆ ಚುನಾವಣಾ ಆಯೋಗ ಈಗ ಪ್ರಮಾಣ ಪತ್ರ ಸಲ್ಲಿಸಲು ನೋಟಿಸ್ ನೀಡಿದೆ. ಮತ ಕಳವು ಸಾಬೀತುಪಡಿಸಲು ನಾನು ಸಿದ್ಧನಿದ್ದೇನೆ ಎಂದು ಚುನಾವಣಾ ಆಯೋಗಕ್ಕೆ ಟಾಂಗ್ ನೀಡಿದರು.ಚುನಾವಣೆಯಲ್ಲಿ ಆಗಿರುವ ಮತ ಪ್ರಮಾಣ, ಮತದಾನದ ದೃಶ್ಯಾವಳಿಗಳನ್ನು ಒದಗಿಸುವಂತೆ ಕೋರಿದರೆ ಚುನಾವಣಾ ಆಯೋಗ ನಿರಾಕರಿಸಿದೆ. ಮತದಾನ ನಡದ 45 ದಿನಗಳಲ್ಲೇ ಮತದಾನ ಚಿತ್ರೀಕರಣದ ದೃಶ್ಯಗಳನ್ನು ಡಿಲೀಟ್ ಮಾಡಿದೆ. ನಾವು ಕೇಳುವ ಪ್ರತಿ ಮಾಹಿತಿಯನ್ನೂ ಅಳಿಸಿ ಹಾಕುತ್ತಿದೆ ಎಂದು ಆರೋಪ ಮಾಡಿದರು.ಚುನಾವಣಾ ಆಯೋಗ ನಾವು ಕೇಳಿರುವ ಮಾಹಿತಿ ನೀಡಲಿ, ಆರೋಪ ಸಾಬೀತು ಮಾಡುತ್ತೇನೆ. ಆದರೆ, ನಮ್ಮ ಸವಾಲು ಒಪ್ಪದ ಚುನಾವಣಾ ಆಯೋಗ ತನ್ನ ವೆಬ್ಸೈಟನ್ನು ಬಂದ್ ಮಾಡಿದೆ. ಮತದಾರರ ಡಿಜಿಟಲ್ ಮತದಾರರ ಪಟ್ಟಿ ನೀಡಿದರೆ ಮತಕಳ್ಳತನ ಸಾಬೀತು ಮಾಡುತ್ತೇವೆ, ಇದು ಕೇವಲ ಕರ್ನಾಟಕ ಅಲ್ಲ, ದೇಶಾದ್ಯಂತ ಮತ ಕಳ್ಳತನ ಆಗಿದೆ ಹೇಳಿದರು.ಸಂವಿಧಾನದ ಮೇಲೆ ಪ್ರಹಾರ ಒಬ್ಬರಿಗೆ ಒಂದು ಮತ ಎಂಬುದು ಸಂವಿಧಾನದ ಮೂಲಭೂತ ಅಡಿಪಾಯ. ಭಾರತದ ವಿವಿಧ ಸಂಸ್ಥೆಗಳ ಮೇಲೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ಪ್ರಹಾರ ಮಾಡುತ್ತಿವೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹೊಸದಾಗಿ 1 ಕೋಟಿ ಜನರು ಮತದಾನ ಮಾಡಿದರು. ಹೊಸದಾಗಿ ಮತಪಟ್ಟಿ ಸೇರಿದ ಮತಗಳೆಲ್ಲವೂ ಬಿಜೆಪಿಯ ಮತಗಳು. ಆಗ ನಾವು ಸಂದೇಹ ಪಟ್ಟು ಸಂಶೋಧನೆ ಮಾಡಲು ಶುರು ಮಾಡಿದೆವು. ಕರ್ನಾಟಕದಲ್ಲಿ 16 ಲೋಕಸಭೆ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಬೇಕಾಗಿತ್ತು. ಆದರೆ, ಒಂಬತ್ತು ಸ್ಥಾನಗಳಲ್ಲಿ ಮಾತ್ರ ಗೆದ್ದೆವು. ಅನುಮಾನ ಬಂದು ಪರಿಶೀಲಿಸಿದಾಗ ಕೆಲ ಮನೆಗಳಲ್ಲಿ ಮತದಾರರೇ ಇರಲಿಲ್ಲ ಎಂದು ಹೇಳಿದರು.ನಕಲಿ ಮತದಾರರ ಪಟ್ಟಿಯಲ್ಲಿದ್ದ ಒಬ್ಬನೇ ವ್ಯಕ್ತಿ ಕರ್ನಾಟಕ, ಲಕ್ನೋದಲ್ಲಿ ಮತ ಹಾಕಿದ್ದಾನೆ. ಯಾವುದೇ ವ್ಯಕ್ತಿ ದೇಶದ ಯಾವುದೇ ಮೂಲೆಯಲ್ಲಿ ಬೇಕಾದರೂ ಮತ ಹಾಕಬಹುದು ಎಂಬ ನಿಯಮವಿದೆಯೇ ಎಂದು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡರು. ಈಗ ಚುನಾವಣಾ ಆಯೋಗ ನನಗೆ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿದೆ. ಸಮಯ ಬಂದೇ ಬರುತ್ತದೆ, ಒಬ್ಬೊಬ್ಬರನ್ನು ಹುಡುಕಿ ಪಾಠ ಕಲಿಸುತ್ತೇವೆ, ನರೇಂದ್ರ ಮೋದಿ ಕೇವಲ 25 ಸೀಟುಗಳಲ್ಲಿ ಮಾತ್ರ ಪ್ರಧಾನಮಂತ್ರಿ ಆಗಿದ್ದಾರೆ. 25 ಕ್ಷೇತ್ರಗಳಲ್ಲಿ 34 ಸಾವಿರ ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಿದೆ ಎಂದು ಲೇವಡಿ ಮಾಡಿದರು.ಮತ ಕಳ್ಳತನ ಮಾಡಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆಗಿದ್ದಾರೆ. ಚುನಾವಣಾ ಆಯೋಗ ಎಲ್ಲಾ ದತ್ತಾಂಶಗಳನ್ನು ಬಹಿರಂಗಪಡಿಸಬೇಕು. ನಾವು ಯಾರನ್ನೇ ಪ್ರಶ್ನೆ ಮಾಡಿದರೂ ಸಾಕ್ಷಿನಾಶ ಮಾಡುತ್ತಾರೆ, ಚುನಾವಣಾ ಆಯೋಗ ನಮಗೆ ಮಾಹಿತಿ ನೀಡಲಿಲ್ಲ ಅಂದರೆ ಬೇರೆ ಕ್ಷೇತ್ರಗಳಲ್ಲಿ ನಾವು ಮತಗಳ್ಳತನ ಬಗ್ಗೆ ಬಹಿರಂಗಪಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಚುನಾವಣಾ ಆಯೋಗದ ಪ್ರತಿ ಅಧಿಕಾರಿಗೂ ಮನವರಿಕೆ ಆಗಬೇಕು.ಅಗತ್ಯ ಮಾಹಿತಿ ನೀಡದೇ ಹೋದರೆ ಒಂದಲ್ಲ, ಎರಡಲ್ಲ. ಸುಮಾರು 25 ಕ್ಷೇತ್ರದ ಮತಕಳವು ಬಹಿರಂಗಪಡಿಸುತ್ತೇವೆ ಎಂದರು. ಮತಗಳ್ಳತನ ಕ್ರಿಮಿನಲ್ ಅಪರಾಧ ಮಹದೇವಪುರದಲ್ಲಿ ನಡೆದಿರುವ ಮತಕಳ್ಳತನದ ಕರ್ನಾಟಕ ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದು ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೂಚಿಸಿದರು. ಮತದಾರರಿಗೆ ಮತ ಕಳುವಿನ ಸತ್ಯ ತಿಳಿಸಬೇಕಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಕೂಡ ಶಾಸಕರ ಖರೀದಿ ಮೂಲಕ ಸರ್ಕಾರ ರಚಿಸಿತ್ತು. ಚುನಾವಣಾ ಆಯೋಗ ಕಳೆದ 10 ವರ್ಷಗಳ ಮತಪಟ್ಟಿ ಹಾಗೂ ಮತಗಟ್ಟೆಗಳ ವಿಡಿಯೋ ಬಹಿರಂಗ ಪಡಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.ಆಯೋಗಕ್ಕೆ ರಾಹುಲ್ ಪಂಚ ಪ್ರಶ್ನೆ1. ಡಿಜಿಟಲ್ ಯಂತ್ರದ ಮರುಪರಿಶೀಲನೆಯಲ್ಲಿ ಮತದಾರರ ಪಟ್ಟಿಯನ್ನು ಜನರಿಗೆ ಏಕೆ ನೀಡುತ್ತಿಲ್ಲ?2. ನೀವು ವಿಡಿಯೋ ಸಾಕ್ಷಿಯನ್ನು ಏಕೆ ನಾಶಪಡಿಸಿದ್ದೀರಾ ?3. ಚುನಾವಣಾ ಆಯೋಗ ಏಕೆ ಬೃಹತ್ ವಂಚನೆ ಮಾಡಿದೆ?4. ಚುನಾವಣಾ ಆಯೋಗ ವಿರೋಧ ಪಕ್ಷಗಳನ್ನು ಬೆದರಿಸುವ ಕೆಲಸ ಮಾಡುತ್ತಿದೆ?5. ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ರೀತಿ ಏಕೆ ಕಾರ್ಯ ನಿರ್ವಹಿಸುತ್ತಿದೆ?ಜನ ಬೆಂಬಲ ಇಲ್ಲದ ಪ್ರಧಾನಿಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಯೋಜನೆ ಮಾಡಿ ಮತ ಕದ್ದಿದ್ದಾರೆ, ಈಗಿರುವ ಕೇಂದ್ರ ಸರ್ಕಾರ ಕಳ್ಳತನದ ಸರ್ಕಾರ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.ಮತಕಳವಿನ ಮೂಲಕ ಅಧಿಕಾರ ಹಿಡಿದಿರುವ ಮೋದಿ ಅವರು ಪ್ರಧಾನಿ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಹೊಂದಿಲ್ಲ. ಎಲ್ಲಾ ರಾಜ್ಯಗಳಲ್ಲಿ ಮತಗಳ್ಳತನ ತಪ್ಪುಗಳನ್ನು ಹುಡುಕಿ ತೆಗೆಯುತ್ತಿದ್ದೇವೆ, ಬೋಗಸ್ ವೋಟಿಂಗ್ ಮಾಡಿ ಮೋದಿಯವರು ದೇಶ ಆಳುತ್ತಿದ್ದಾರೆ ಎಂದು ಟೀಕಿಸಿದರು.2019 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋಲಿನ ವಿಶ್ಲೇಷಣೆ ಮಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ನಾನು ಬೋಗಸ್ ಮತದಾನದಿಂದ ಸೋತೆ. ಚುನಾವಣಾ ರಕ್ಷಣೆ ಜನರ ಜವಾಬ್ದಾರಿ, ಮೋದಿ ಈಗಾಗಲೇ ಬೇರೆ ಪಕ್ಷದ ಮುಖಂಡರಿಗೆ ಇ ಡಿ, ಸಿಬಿಐ ಮೂಲಕ ಹೆಸರಿಸುತ್ತಿದ್ದಾರೆ. ಪಕ್ಷಗಳನ್ನು ಒಡೆದು ಮೋದಿ ಬೇರೆ ರಾಜ್ಯಗಳಲ್ಲಿ ಸರ್ಕಾರ ರಚಿಸಿದ್ದಾರೆ ಎಂದು ಆರೋಪಿಸಿದರು.ಕೇಂದ್ರ ಚುನಾವಣಾ ಆಯೋಗಕ್ಕೆ ದೂರುಮತಕಳ್ಳತನದ ಬಗ್ಗೆ ಸೋಮವಾರ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಇಂಡಿ ಒಕ್ಕೂಟ ಈ ವಿಚಾರದಲ್ಲಿ ಒಗ್ಗಟ್ಟಾಗಿದೆ. ಸಂವಿಧಾನದ ರಕ್ಷಣೆ ಮಾಡಲು ಕ್ವಿಟ್ ಇಂಡಿಯಾ ಚಳವಳಿ ರೀತಿ ನಾವು ಹೋರಾಟ ಮಾಡಬೇಕಿದೆ. ಮಾಡು ಇಲ್ಲವೇ ಮಡಿ ಎಂದ ಸ್ಲೋಗನ್ ಜತೆ ಹೋರಾಟ ಮಾಡಬೇಕು ಎಂದು ಹೇಳಿದರು. ಚುನಾವಣಾ ಆಯೋಗ ತಿರುಗೇಟುಮಹದೇವಪುರದಲ್ಲಿ ಮತಕಳವು ಆರೋಪಕ್ಕೆ ತಿರುಗೇಟು ನೀಡಿರುವ ಚುನಾವಣಾ ಆಯೋಗ, ಮತದಾರರ ಪಟ್ಟಿ ಪಾರದರ್ಶಕವಾಗಿ ತಯಾರಿಸಲಾಗುತ್ತದೆ ಎಂಬುದು ನಿಮಗೂ ಗೊತ್ತಿದೆ. ಆದರೂ, ಮತಕಳವು ಬಗ್ಗೆ ಆರೋಪ ಮಾಡಿದ್ದೀರಿ, ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕರಿಗೂ ಮತದಾರರ ಪಟ್ಟಿ ನೀಡಲಾಗಿರುತ್ತದೆ. 2024 ರ ಕರಡು ಪ್ರತಿ ಮತ್ತು 2025 ರ ಅಂತಿಮಪಟ್ಟಿ ನೀಡಿದಾಗ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. ಈಗ ಮಾಧ್ಯಮಗೋಷ್ಠಿಯಲ್ಲಿ ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರು ಇದ್ದಾರೆ ಎಂದು ತೋರಿಸಿದ್ದೇಕೆ ಎಂದು ಪ್ರಶ್ನಿಸಿದೆ. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 1,14,046 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದರಲ್ಲಿ 1,00,250 ಮತಗಳು ನಕಲಿಯಾಗಿವೆ. ಈ ಪೈಕಿ 11,965 ಮತದಾರರು ನಕಲಿಯಾಗಿದ್ದರೆ, 40,009 ಖೊಟ್ಟಿ ವಿಳಾಸ ಹೊಂದಿದ್ದಾರೆ. 10,452 ಮತದಾರರು ಒಂದೇ ವಿಳಾಸ ಹೊಂದಿದ್ದಾರೆ. 4132 ನಕಲಿ ಫೋಟೋಗಳಿವೆ. 33,692 ಮಂದಿ ಫಾರಂ-6 ಅನ್ನು ದುರುಪಯೋಗಪಡಿಸಿಕೊಂಡು ಹೊಸ ಮತದಾರರಾಗಿ ಸೇರ್ಪಡೆಯಾಗಿದ್ದಾರೆ ಎಂದು ರಾಹುಕ್ ಗಾಂಧಿ ಅವರು ದಾಖಲೆ ಸಮೇತ ಆರೋಪ ಮಾಡಿದ್ದರು.