ಕೋಮುವಾದಿ ಶಕ್ತಿಗಳ ವಿರುದ್ಧ ಮತ ಚಲಾಯಿಸಿ: ಪ್ರೊ. ಎಸ್.ಜಿ ಸಿದ್ದರಾಮಯ್ಯ

ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಹಿತಿಗಳು ಬೀದಿಗೂ ಇಳಿಯಬೇಕು. ದೇಶ ಸಂಕಷ್ಟದಲ್ಲಿರುವಾಗ ಆತ್ಮದ್ರೋಹ ಮತ್ತು ಅವಕಾಶವಾದಿಗಳಾಗಬಾರದು ಎಂದು ಪ್ರೊ.ಎಸ್.ಜಿ ಸಿದ್ದರಾಮಯ್ಯ ಹೇಳಿದ್ದಾರೆ.;

Update: 2024-04-07 12:19 GMT
ಪ್ರೊ. ಎಸ್.ಜಿ ಸಿದ್ದರಾಮಯ್ಯ

ಪ್ರಜಾಪ್ರಭುತ್ವ ಸಂಕಷ್ಟದಲ್ಲಿದ್ದಾಗ ಸಾಹಿತಿಗಳು ಬೀದಿಗೆ ಬಂದು ಹೋರಾಟ ಮಾಡಬೇಕು ಎಂದು ಸಾಹಿತಿ ಪ್ರೊ. ಎಸ್.ಜಿ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿ, ಸಂವಿಧಾನಕ್ಕೆ ಹೊಡೆತ ಬೀಳುವ ಸಂದರ್ಭದಲ್ಲಿ ಸಾಹಿತಿಗಳು ಸಾಮಾಜಿಕ ಪ್ರಜ್ಞೆ ಪ್ರದರ್ಶಿಸಬೇಕು, ರಸ್ತೆಗಿಳಿದು ಹೋರಾಟ ಮಾಡಬೇಕು. 2024ರ ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವದ ಅಳಿವು - ಉಳಿವಿನ ನಿರ್ಣಾಯಕ ಘಟ್ಟವಾಗಿದೆ. ಕೋಮುವಾದಿ ಶಕ್ತಿಗಳಿಗೆ ಕಡಿವಾಣ ಹಾಕಬೇಕು. ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸುವ ಜವಾಬ್ದಾರಿ ಸಾಹಿತಿಗಳು ಸೇರಿದಂತೆ ಎಲ್ಲಾ ಕ್ಷೇತ್ರದವರ ಮೇಲೆ ಇದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಹಿತಿಗಳು ಬೀದಿಗೂ ಇಳಿಯಬೇಕು. ಅನೀತಿಯ ವಿರುದ್ಧ ಪ್ರತಿಭಟಿಸಬೇಕು. ದೇಶ ಸಂಕಷ್ಟದಲ್ಲಿರುವಾಗ ಆತ್ಮದ್ರೋಹ ಮತ್ತು ಅವಕಾಶವಾದಿಗಳಾಗಬಾರದು ಎಂದರು.

ಈ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದಾಗಲೂ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿಲ್ಲ. ಆದರೆ, ಇದೀಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸುಳ್ಳಿನ ಬಿಜೆಪಿ ಸರ್ಕಾರದಿಂದ ಪರೋಕ್ಷ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ. ದೇಶದ ಪ್ರಜಾತಂತ್ರದ ಸೂಕ್ಷ್ಮತೆಗೇ ಧಕ್ಕೆಯಾಗಿದೆ. ಇಡೀ ವಿಶ್ವವೇ ಭಾರತದತ್ತ ಇಲ್ಲಿ ಏನಾಗುತ್ತಿದೆ ಎನ್ನುವುದನ್ನು ನೋಡುತ್ತಿದೆ. ಕರ್ನಾಟಕದ ಜನರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಗಳ ವಿರುದ್ಧ ಮತಚಲಾಯಿಸಿ, ಪ್ರಜಾಪ್ರಭುತ್ವವನ್ನು ಗೆಲ್ಲಿಸುವ ಮೂಲಕ ಸಂವಿಧಾನವನ್ನು ಉಳಿಸಬೇಕು ಎಂದು ಹೇಳಿದರು.

Tags:    

Similar News