ವಿಷ್ಣುವರ್ಧನ್ ಸಮಾಧಿ ನೆಲಸಮ; ಬೇಸರ ವ್ಯಕ್ತಪಡಿಸಿದ ರಾಘವೇಂದ್ರ ರಾಜ್‌ಕುಮಾರ್

ಅಭಿಮಾನ್‌ ಸ್ಟುಡಿಯೋದಲ್ಲಿ ಬಾಲಕೃಷ್ಣ ಮತ್ತು ವಿಷ್ಣುವರ್ಧನ್ ಅವರ ಸಮಾಧಿಗಳು ಹಾಗೂ ಅಲ್ಲಿನ ಗಣಪತಿ ದೇವಸ್ಥಾನ ನೆಲಸಮಗೊಳಿಸಲಾಗಿದೆ.;

Update: 2025-08-12 06:51 GMT

ರಾಘವೇಂದ್ರ ರಾಜ್‌ಕುಮಾರ್‌

ದಿವಂಗತ ನಟ ವಿಷ್ಣುವರ್ಧನ್ ಸಮಾಧಿ ಸ್ಥಳ ನೆಲಸಮಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಡಾ. ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಅವರೊಂದಿಗಿನ ಹಳೆಯ ಫೋಟೋ ಹಂಚಿಕೊಂಡು ಪೋಸ್ಟ್‌ ಹಾಕಿದ್ದಾರೆ. 

"ವಿಷ್ಣು ಅವರ ಸಮಾಧಿ ನೆಲಸಮ ಘಟನೆ ತಿಳಿದು ಮನಸ್ಸಿಗೆ ತುಂಬ ಬೇಸರವಾಗಿದೆ. ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರಿಗೆ ಸರಿಯಾದ ಗೌರವ ಸಿಗಲೇಬೇಕು" ಎಂದು ಬರೆದಿದ್ದಾರೆ.

ಅಭಿಮಾನ್‌ ಸ್ಟುಡಿಯೋದಲ್ಲಿ ಇದ್ದ ಬಾಲಕೃಷ್ಣ ಮತ್ತು ವಿಷ್ಣುವರ್ಧನ್ ಅವರ ಸಮಾಧಿಗಳು ಹಾಗೂ ಅಲ್ಲಿನ ಗಣಪತಿ ದೇವಸ್ಥಾನವನ್ನು ಸಹ ನೆಲಸಮಗೊಳಿಸಲಾಗಿದೆ. ಈ ಘಟನೆಯಿಂದಾಗಿ ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ತೀವ್ರ ನೋವಾಗಿದೆ ಎಂದಿದ್ದಾರೆ.

ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ, ಧ್ರುವ ಸರ್ಜಾ, ರಿಷಬ್ ಶೆಟ್ಟಿ, ಕಿಚ್ಚ ಸುದೀಪ್ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಡಾ. ರಾಜ್‌ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಕೂಡ ವಿಷ್ಣುವರ್ಧನ್ ಅವರ ಪುಣ್ಯಭೂಮಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Tags:    

Similar News