ಮಹಿಳೆಯರಿಗೆ ರಾತ್ರಿ ಉಚಿತ ಪೊಲೀಸ್‌ ಎಸ್ಕಾರ್ಟ್‌ | ವೈರಲ್‌ ಪೋಸ್ಟ್‌ಗೆ ಪೊಲೀಸ್‌ ಸ್ಪಷ್ಟನೆ

ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಮೆಸೇಜ್ ಹರಿದಾಡುತ್ತಿದ್ದು, ಈ ಮಾಹಿತಿಯು ಸುಳ್ಳಾಗಿದೆ. ತುರ್ತು ಸಹಾಯಕ್ಕಾಗಿ 112 ಗೆ ಕರೆಮಾಡಿ ಎಂದು ಪೊಲೀಸ್‌ ಇಲಾಖೆ ಸ್ಪಷ್ಟನೆ ನೀಡಿದೆ.

Update: 2024-08-24 10:32 GMT
ಕರ್ನಾಟಕ ರಾಜ್ಯ ಪೊಲೀಸ್‌

"ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯೊಳಗೆ ಮನೆಗೆ ತೆರಳಲು ವಾಹನ ಸಿಗದೇ ಒಂಟಿಯಾಗಿರುವ ಯಾವುದೇ ಮಹಿಳೆ ಪೊಲೀಸ್ ಸಹಾಯವಾಣಿ ಸಂಖ್ಯೆಗಳನ್ನು (1091 ಮತ್ತು 7837018555) ಸಂಪರ್ಕಿಸಬಹುದಾದ ಉಚಿತ ಪ್ರಯಾಣ ಯೋಜನೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ. ವಾಹನವನ್ನು ಕೋರಬಹುದು ಮತ್ತು ವಿನಂತಿಸಬಹುದು" ಎಂಬ ಪೋಸ್ಟ್‌ ಕೆಲ ದಿನಗಳಿಂದ ವೈರಲ್‌ ಆಗುತ್ತಿದೆ.

ಈ ವೈರಲ್‌ ಮೆಸೇಜ್‌ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆಗಳಿಗೆ ಹಲವು ಕರೆಗಳು ಬರುತ್ತಿದ್ದು, ಬೆಂಗಳೂರು ನಗರ ಮತ್ತು ಇತರ ಜಿಲ್ಲೆಗಳ ಪೊಲೀಸರಿಗೆ ಕಳೆದ ಕೆಲವು ದಿನಗಳಿಂದ ನಿರಂತರ  ಕರೆಗಳು ಬರುತ್ತಿವೆ. ಇದೀಗ ವೈರಲ್‌ ಆದ ಪೋಸ್ಟ್‌ಗೆ ಪೊಲೀಸರು ಸ್ಪಷ್ಟನೆ ನೀಡಿದ್ದು, ʼಅದೊಂದು ನಕಲಿ ಸಂದೇಶʼ ಎಂದು ತಿಳಿಸಿದ್ದಾರೆ. 

ಪೊಲೀಸರ ಸ್ಪಷ್ಟನೆ 

ರಾಜ್ಯ ಪೊಲೀಸ್‌ ಇಲಾಖೆ ತನ್ನ ಎಕ್ಸ್‌ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, ʻʻರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನಿಯಂತ್ರಣ ಕೊಠಡಿಗೆ ಕರೆ ಮಾಡಿದಲ್ಲಿ, ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಮೆಸೇಜ್ ಹರಿದಾಡುತ್ತಿದ್ದು, ಈ ಮಾಹಿತಿಯು ಸುಳ್ಳಾಗಿದೆ. ತುರ್ತು ಸಹಾಯಕ್ಕಾಗಿ 112 ಗೆ ಕರೆಮಾಡಿ ಎಂದು ಸ್ಪಷ್ಟನೆ ನೀಡಿದ್ದಾರೆ. 

ವೈರಲ್‌ ಅದ ಪೋಸ್ಟ್‌ನಲ್ಲಿ ಏನಿತ್ತು?

ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯೊಳಗೆ ಮನೆಗೆ ತೆರಳಲು ವಾಹನ ಸಿಗದೇ ಒಂಟಿಯಾಗಿರುವ ಯಾವುದೇ ಮಹಿಳೆ ಪೊಲೀಸ್ ಸಹಾಯವಾಣಿ ಸಂಖ್ಯೆಗಳನ್ನು (1091 ಮತ್ತು 7837018555) ಸಂಪರ್ಕಿಸಬಹುದಾದ ಉಚಿತ ಪ್ರಯಾಣ ಯೋಜನೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ. ವಾಹನವನ್ನು ಕೋರಬಹುದು ಮತ್ತು ವಿನಂತಿಸಬಹುದು. ಅವರು 24x7 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ನಿಯಂತ್ರಣ ಕೊಠಡಿಯ ವಾಹನ ಅಥವಾ ಹತ್ತಿರದ ಪಿಸಿಆರ್ ವಾಹನ/ಎಸ್‌ಎಚ್‌ಒ ವಾಹನವು ಅವರನ್ನು ಸುರಕ್ಷಿತವಾಗಿ ಅವರ ಗಮ್ಯಸ್ಥಾನಕ್ಕೆ ಕೊಂಡೊಯ್ಯುತ್ತದೆ. ಇದನ್ನು ಉಚಿತವಾಗಿ ಮಾಡಲಾಗುವುದು. ನಿಮಗೆ ತಿಳಿದಿರುವ ಎಲ್ಲರಿಗೂ ಈ ಸಂದೇಶವನ್ನು ಹರಡಿ.

ನಿಮ್ಮ ಹೆಂಡತಿ, ಹೆಣ್ಣುಮಕ್ಕಳು, ಸಹೋದರಿಯರು, ತಾಯಂದಿರು, ಸ್ನೇಹಿತರು ಮತ್ತು ನಿಮಗೆ ತಿಳಿದಿರುವ ಎಲ್ಲಾ ಮಹಿಳೆಯರಿಗೆ ಸಂಖ್ಯೆಯನ್ನು ಕಳುಹಿಸಿ.. ಅದನ್ನು ಉಳಿಸಲು ಅವರನ್ನು ಕೇಳಿ.. ಎಲ್ಲಾ ಪುರುಷರು ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ಮಹಿಳೆಯರೊಂದಿಗೆ ಹಂಚಿಕೊಳ್ಳಿ. ತುರ್ತು ಸಂದರ್ಭಗಳಲ್ಲಿ ಮಹಿಳೆಯರು ಖಾಲಿ ಸಂದೇಶ ಅಥವಾ ಮಿಸ್ಡ್ ಕಾಲ್ ನೀಡಬಹುದು.. ಇದರಿಂದ ಪೊಲೀಸರು ನಿಮ್ಮ ಸ್ಥಳವನ್ನು ಪತ್ತೆ ಹಚ್ಚಬಹುದು ಮತ್ತು ನಿಮಗೆ ಸಹಾಯ ಮಾಡಬಹುದು. ಭಾರತದಾದ್ಯಂತ ಈ ಸೇವೆ ಜಾರಿಗೆ ಬಂದಿದೆ ಎಂದು ಪೋಸ್ಟ್‌ ವೈರಲ್‌ ಆಗಿತ್ತು. 

ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಸಂದೇಶವು ಎರಡು ಸಂಖ್ಯೆಗಳನ್ನು ಹೊಂದಿತ್ತು. ಆದರೆ, ಆ ಪೈಕಿ ಒಂದು ಹಿರಿಯರ ಸಹಾಯವಾಣಿ (1091) ಮತ್ತು ಮೊಬೈಲ್ ಫೋನ್ ಸಂಖ್ಯೆ ಸ್ವಿಚ್ ಆಫ್ ಆಗಿರುತ್ತದೆ. ಈ ಸಂಖ್ಯೆ ಉತ್ತರ ಭಾರತದಲ್ಲಿ ನೋಂದಣಿಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

Tags:    

Similar News