ದರ್ಶನ್‌ಗೆ ಜಾಮೀನು ಬೆನ್ನಲ್ಲೇ ವಿಜಯಲಕ್ಷ್ಮಿ ಪೋಸ್ಟ್ ವೈರಲ್!

ವಿಜಯಲಕ್ಷೀ ಪಾರ್ಥನೆಗೆ ದೇವರು ಒಲಿದಿದ್ದು, ದೇವಸ್ಥಾನದಲ್ಲಿ ಹೂವುನ್ನು ಕೈಯಲ್ಲಿ ಹಿಡಿದುಕೊಂಡಿರುವ ಫೋಟೋ ವಿಜಯಲಕ್ಷ್ಮೀ ಶೇರ್‌ ಮಾಡಿದ್ದಾರೆ.;

Update: 2024-12-13 11:49 GMT
ದರ್ಶನ್‌ ವಿಜಯಲಕ್ಷೀ
Click the Play button to listen to article

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ಗೆ ಜಾಮೀನು ಸಿಕ್ಕಿದ ಹಿನ್ನಲೆ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ದೇವರಿಗೆ  ಧನ್ಯವಾದ ಸೂಚಿಸಿದ್ದಾರೆ. ವಿಜಯಲಕ್ಷ್ಮೀ ಪೋಸ್ಟ್‌ ಮಾಡಿರುವ ಫೋಟೋ ವೈರಲ್‌ ಆಗಿದೆ.

ಶುಕ್ರವಾರ  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ,  ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಜನ ಆರೋಪಿಗಳಿಗೆ ಜಾಮೀನು ಸಿಕ್ಕಿದೆ.

ದರ್ಶನ್‌ ಜೈಲು ಸೇರಿದ್ದಾಗಿನಿಂದ ಪತಿಯನ್ನು ಹೊರಗೆ ತರಲು ವಿಜಯಲಕ್ಷ್ಮಿ ಹೋರಾಡುತ್ತಲೇ ಇದ್ದರು. ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಕೊನೆಗೂ ವಿಜಯಲಕ್ಷೀ ಪಾರ್ಥನೆಗೆ ದೇವರು ಒಲಿದಿದ್ದು, ದೇವಸ್ಥಾನದಲ್ಲಿ ಹೂವುನ್ನು ಕೈಯಲ್ಲಿ ಹಿಡಿದುಕೊಂಡಿರುವ ಫೋಟೋ ವಿಜಯಲಕ್ಷ್ಮೀ ಶೇರ್‌ ಮಾಡಿದ್ದಾರೆ. 

 ವಿಜಯಲಕ್ಷ್ಮಿ ರಾಜ್ಯ ಹಾಗೂ ಹೊರರಾಜ್ಯ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ದೇವಾಲಯಗಳಕ್ಕೆ ಹೋಗಿ ಪೂಜೆ ಸಲ್ಲಿಸಿ ಗಂಡನಿಗಾಗಿ ಹರಕೆ ಕಟ್ಟಿಕೊಂಡಿದ್ದಾರೆ ಎನ್ನಲಾಗಿದೆ.  ವ್ರತ, ಉಪವಾಸ ಮಾಡಿ ಹೋಮ-ಹವನ ಮಾಡಿಸಿ ದರ್ಶನ್ಗಾಗಿ ಪ್ರಾರ್ಥನೆ ಮಾಡಿದ್ರು. ಕೊಲ್ಲೂರು ಮುಕಾಂಬಿಕೆ, ಚಾಮುಂಡೇಶ್ವರಿ, ಬನಶಂಕರಿ, ಮಂತ್ರಾಲಯ, ಕಾಮಾಕ್ಯ ದೇವಾಲಯದ, ಬಂಡೆ ಮಹಾಕಾಳಿ ದೇವಾಲಯ ಸೇರಿದಂತೆ ಅನೇಕ ದೇಗುಲಕ್ಕೆ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. 

Tags:    

Similar News