Union Budget 2025 | ಆದಾಯ ತೆರಿಗೆದಾರರಿಗೆ ಬಿಗ್ ರಿಲೀಫ್: ವಿನಾಯ್ತಿ ಮಿತಿ 7 ಲಕ್ಷದಿಂದ 12 ಲಕ್ಷಕ್ಕೆ ಏರಿಕೆ
Income Tax Exemption ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊನೆಗೂ ವೇತನದಾರರಿಗೆ ಈ ಬಾರಿ, ಬಜೆಟ್‌ನಲ್ಲಿ ಬಿಗ್ ರಿಲೀಫ್ ಕೊಟ್ಟಿದ್ದು, ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಹಾಲಿ ಇರುವ 7 ಲಕ್ಷ ರೂ.ನಿಂದ 12 ಲಕ್ಷ ರೂ.ಗೆ ಹೆಚ್ಚಿಸಿದ್ದಾರೆ.;
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊನೆಗೂ ವೇತನದಾರರಿಗೆ ಈ ಬಾರಿ, ಬಜೆಟ್‌ನಲ್ಲಿ ಬಿಗ್ ರಿಲೀಫ್ ಕೊಟ್ಟಿದ್ದು, ಆದಾಯ ತೆರಿಗೆ ನಾಯ್ತಿ ಮಿತಿಯನ್ನು ಹಾಲಿ ಇರುವ 7 ಲಕ್ಷ ರೂ.ನಿಂದ 12 ಲಕ್ಷ ರೂ.ಗೆ ಹೆಚ್ಚಿಸಿದ್ದಾರೆ.
ಶನಿವಾರ ಲೋಕಸಭೆಯಲ್ಲಿ ತಮ್ಮ ಎಂಟನೇ ಆಯವ್ಯಯ ಪತ್ರ ಮಂಡಿಸಿದ ಹಣಕಾಸು ಸಚಿವೆ, ಆದಾಯ ತೆರಿಗೆ ವಿಷಯದಲ್ಲಿ ಮಹತ್ವದ ಕ್ರಮವನ್ನು ಘೋಷಿಸಿದ್ದಾರೆ. ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸಲಾಗುವುದು ಎಂದು ಹೇಳಿದ ಅವರು, ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ, ಶಿಕ್ಷಣ ಕುರಿತ ಪಾವತಿಗೆ ಟಿಡಿಎಸ್ ಕಡಿತವಿಲ್ಲ ಎಂಬುದೂ ಸೇರಿದಂತೆ ತೆರಿಗೆದಾರರಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ ಎಂದು ಸಚಿವೆ ಹೇಳಿದ್ದಾರೆ.
ಆದಾಯ ತೆರಿಗೆ ಮಿತಿ ಏರಿಕೆ
ಈ ಬಜೆಟ್ ಕುರಿತ ವೇತನದಾರರು ಮತ್ತು ಮಧ್ಯಮವರ್ಗದ ಬಹುದೊಡ್ಡ ನಿರೀಕ್ಷೆಯಾಗಿದ್ದ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಘೋಷಣೆ ಹೊರಬಿದ್ದಿದ್ದು, ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಏರಿಕೆ ಮಾಡಲಾಗಿದೆ.
ಭಾರತದ ಆದಾಯ ತೆರಿಗೆಯ ಹೊರೆಯ ಕುರಿತು ಐಎಂಎಫ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಮತ್ತು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಆದಾಯ ತೆರಿಗೆ ಹೇರಲಾಗುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂಬ ಮಾತುಗಳು ಚರ್ಚೆಗೊಳಗಾಗಿದ್ದವು.
ಆ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ನಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ಮೋದಿವರ ಆಡಳಿತ ರಿಲೀಫ್ ನೀಡುವ ನಿರೀಕ್ಷೆ ಇತ್ತು.
ಇದೀಗ ಬಜೆಟ್ನಲ್ಲಿ ಆ ನಿಟ್ಟಿನಲ್ಲಿ ಮಹತ್ವದ ಘೋಷಣೆ ಹೊರಬಿದ್ದಿದ್ದು, ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಈಗಿನ 7 ಲಕ್ಷದಿಂದ 12 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಆದಾಯ ತೆರಿಗೆ ವಿನಾಯ್ತಿಯನ್ನು ಘೋಷಿಸಿದ್ದು, 12 ಲಕ್ಷ ರೂಪಾಯಿವರೆಗೂ ಆದಾಯ ತೆರಿಗೆ ಇಲ್ಲ. ಆ ಬಳಿಕದ 4 ಲಕ್ಷದಿಂದ 8 ಲಕ್ಷದವರೆಗೆ ಶೇ.5ರಷ್ಟು ತೆರಿಗೆ, 8 ಲಕ್ಷದಿಂದ 11 ಲಕ್ಷದವರೆಗೆ ಶೇ.10ರಷ್ಟು ತೆರಿಗೆ, 12 ಲಕ್ಷದಿಂದ 15 ಲಕ್ಷದವರೆಗೆ ಶೇ.15ರಷ್ಟು ತೆರಿಗೆ, 15 ಲಕ್ಷದಿಂದ 20 ಲಕ್ಷದವರೆಗೆ ಶೇ.20ರಷ್ಟು ತೆರಿಗೆ, 20 ಲಕ್ಷದಿಂದ 24 ಲಕ್ಷದರೆಗೆ ಶೇ.25ರಷ್ಟು ತೆರಿಗೆ, 24 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಹೊಸ ತೆರಿಗೆ ಸ್ಲ್ಯಾಬ್ ಘೋಷಿಸಿದ್ದಾರೆ.
ಅಲ್ಲದೆ, ಹಿರಿಯ ನಾಗರಿಕರಿಗೆ ಟಿಡಿಎಸ್ ಮಿತಿಯನ್ನು ಹೆಚ್ಚಿಸಿದ್ದು, ಹಾಲಿ ಇರುವ 50 ಸಾವಿರದಿಂದ 1 ಲಕ್ಷದವರೆಗೆ ವಿಸ್ತರಿಸಲಾಗಿದ್ದು, 1 ಲಕ್ಷದವರೆಗೆ ಯಾವುದೇ ಟಿಡಿಎಸ್ ಇರುವುದಿಲ್ಲ. ಜೊತೆಗೆ ವಿದೇಶದಿಂದ ರವಾನಿಸುವ ಹಣದ ಮೇಲಿನ ಟಿಡಿಎಸ್ ಕಡಿತವನ್ನು ಕೈಬಿಡಲಾಗಿದೆ. ಹಾಗೆಯೇ ಆದಾಯ ಮೂಲದಲ್ಲೇ ಟಿಡಿಎಸ್ ಕಡಿತವನ್ನು ಈಗಿನ 7 ಲಕ್ಷ ರೂ.ಗಳಿಂದ 10 ಲಕ್ಷ ರೂಗಳಿಗೆ ಹೆಚ್ಚಿಸಲಾಗಿದೆ. ಅಲ್ಲದೆ, ಬಾಡಿಗೆಯ ಮೇಲಿನ ಟಿಡಿಎಸ್ನ ವಾರ್ಷಿಕ ಮಿತಿಯನ್ನು 2.40 ಲಕ್ಷ ರೂ.ನಿಂದ 6 ಲಕ್ಷ ರೂ.ಗೆ ಹೆಚ್ಚಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.