Elephant Death | ಗ್ರಾಮಸ್ಥರು ನಿರ್ಮಿಸಿದ ಕಂದಕ| ಆಹಾರ ಹುಡುಕಿ ಬಂದ ಎರಡು ಆನೆಗಳ ಸಾವು
ಮೈಸೂರು ಹಾಗೂ ಹಾಸನ ಭಾಗದಲ್ಲಿ ಕಾಡಾನೆಗಳ ಹಾವಳಿ ತಪ್ಪಿಸಲು ಗ್ರಾಮಸ್ಥರೇ ಕಂದಕ ನಿರ್ಮಿಸಿದ್ದಾರೆ. ಆಹಾರ ಅರಸಿ ಗ್ರಾಮಗಳ ಬರುವ ಕಾಡಾನೆಗಳು ಕಂದಕಕ್ಕೆ ಬಿದ್ದು ಮೃತಪಡುತ್ತಿರುವ ಘಟನೆಗಳು ಮರು ಕಳುಹಿಸುತ್ತಿವೆ;
ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ದೊರೆತ ದಿನವೇ ಎರಡು ಪ್ರತ್ಯೇಕ ಘಟನೆಗಳಲ್ಲಿ ಎರಡು ಕಾಡಾನೆಗಳು ಮೃತಪಟ್ಟಿವೆ.
ನಂಜನಗೂಡು ತಾಲೂಕಿನ ಮಲ್ಲಹಳ್ಳಿ ಗ್ರಾಮದ ಬಳಿ ಕಂದಕಕ್ಕೆ ಬಿದ್ದು 45 ವರ್ಷದ ಗಂಡಾನೆ ಮೃತಪಟ್ಟಿದೆ. ಇನ್ನೊಂದೆಡೆ ಹಾಸನ ಜಿಲ್ಲೆಯ ಹೆತ್ತೂರು ಹೋಬಳಿಯ ವನಗೂರು ಗ್ರಾಮ ಪಂಚಾಯಿತಿಯ ಕಡ್ರಳ್ಳಿಯಲ್ಲಿ 22 ವರ್ಷದ ಹೆಣ್ಣಾನೆ ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ವರದಿಯಾಗಿದೆ.
ಮೈಸೂರು ಹಾಗೂ ಹಾಸನ ಭಾಗದಲ್ಲಿ ಕಾಡಾನೆಗಳ ಹಾವಳಿ ತಪ್ಪಿಸಲು ಗ್ರಾಮಸ್ಥರೇ ಕಂದಕ ನಿರ್ಮಿಸಿದ್ದಾರೆ. ಆಹಾರ ಅರಸಿ ಗ್ರಾಮಗಳ ಬರುವ ಕಾಡಾನೆಗಳು ಕಂದಕಕ್ಕೆ ಬಿದ್ದು ಮೃತಪಡುತ್ತಿರುವ ಘಟನೆಗಳು ಮರು ಕಳುಹಿಸುತ್ತಿವೆ. ಮಲ್ಲಹಳ್ಳಿ ಅರಣ್ಯದ ಕಂದಕದಲ್ಲಿ ಸಾವು-ಬದುಕಿನ ನಡುವೆ ನರಳಾಡುತ್ತಿದ್ದ ಕಾಡಾನೆಯನ್ನು ಕಂಡ ಜನ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಕಾಡಾನೆ ಕೊನೆ ಉಸಿರೆಳೆಯಿತು. ಜೆಸಿಬಿ ಮೂಲಕ ಮೃತ ಕಾಡಾನೆಯನ್ನು ಅರಣ್ಯ ಸಿಬ್ಬಂದಿ ಹೊರತೆಗೆದರು ಎಂದು ಪತ್ರಕ್ಷದರ್ಶಿಗಳು ತಿಳಿಸಿದ್ದಾರೆ.
ಕಂದಕದಲ್ಲಿ ಬಿದ್ದ ರಭಸಕ್ಕೆ ಆನೆಯ ಒಂದು ಕಣ್ಣು ಸಂಪೂರ್ಣ ದೃಷ್ಟಿ ಕಳೆದುಕೊಂಡಿತ್ತು. ಮತ್ತೊಂದು ಕಣ್ಣಿಗೂ ಪೊರೆ ಬಂದಿತ್ತು. ಕರುಳಿನ ಕಾಯಿಲೆಯಿಂದ ಆನೆ ಬಳಲುತ್ತಿತ್ತು. ಈ ಎಲ್ಲದರ ಪರಿಣಾಮ ಹೃದಯಾಘಾತಗೊಂಡು ಮೃತಪಟ್ಟಿದೆ ಎಂದು ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.
ಇನ್ನು ಹಾಸನ ಜಿಲ್ಲೆಯ ಹೆತ್ತೂರು ಹೋಬಳಿಯ ಕಡ್ರಳ್ಳಿಯಲ್ಲಿ ಅನಾರೋಗ್ಯದಿಂದ 22 ವರ್ಷದ ಹೆಣ್ಣಾನೆ ಮೃತಪಟ್ಟಿದೆ. ಮೃತ ಆನೆ ಕಾಡಾನೆಯು ಹಿಂಡಿದ್ದ ಬೇರ್ಪಟ್ಟಿತ್ತು. ಮೂರು ತಿಂಗಳಿನಿಂದ ಆನೆಗುಂಡಿ ಪಟ್ಲ, ಬೆಟ್ಟದ ಮನೆ, ವನಗೂರು, ಕಡ್ರಳ್ಳಿ ಸುತ್ತಮುತ್ತ ಓಡಾಡಿಕೊಂಡಿತ್ತು. ಆಹಾರವಿಲ್ಲದೆ ಪರದಾಡಿತ್ತು ಎಂದು ತಿಳಿದುಬಂದಿದೆ.