ಬೈಕ್​ ಮೇಲೆ ಶವ ಸಾಗಣೆ | ಆರೋಗ್ಯಾಧಿಕಾರಿಗೆ ಸಿಎಂ ಕಚೇರಿಯಿಂದ ನೋಟಿಸ್

ಮಕ್ಕಳು ತಮ್ಮ ತಂದೆಯ ಶವ ಸಾಗಿಸಲು ಆಸ್ಪತ್ರೆಯಲ್ಲಿ ವಾಹನ ಸಿಗದೆ ತಮ್ಮ ಬೈಕಿನಲ್ಲೇ ಸಾಗಿಸಿದ ಪ್ರಕರಣದ ಸಂಬಂಧ ಕಾರಣ ಕೇಳಿ ಮುಖ್ಯಮಂತ್ರಿಗಳ ಕಚೇರಿ ಅಧಿಕಾರಿಗಳು ಸಮುದಾಯ ಆರೋಗ್ಯಾಧಿಕಾರಿ ಲೋಕೇಶ್ ಅವರಿಗೆ ನೋಟಿಸ್​ ನೀಡಿದ್ದಾರೆ.;

Update: 2024-09-21 10:02 GMT
ಮಕ್ಕಳು ಬೈಕ್‌ನಲ್ಲಿ ಶವ ಹೊತ್ತೊಯ್ಯುತ್ತಿರುವುದು
Click the Play button to listen to article

ಸರ್ಕಾರಿ ಆಸ್ಪತ್ರೆಯಿಂದ ದೂರದ ತಮ್ಮ ಮನೆಗೆ ಸಾಗಿಸುವ ವಾಹನ ಸಿಗದೆ ಮಕ್ಕಳು ತಂದೆಯ ಶವವನ್ನು ಬೈಕ್​ನಲ್ಲಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ಮುಖ್ಯಮಂತ್ರಿಗಳ ಕಚೇರಿ ಅಧಿಕಾರಿಗಳು ತುಮಕೂರು ಜಿಲ್ಲೆ ವೈ.ಎನ್ ಹೊಸಕೋಟೆ ಸಮುದಾಯ ಆರೋಗ್ಯಾಧಿಕಾರಿ ಲೋಕೇಶ್ ಅವರಿಗೆ ನೋಟಿಸ್​ ನೀಡಿದ್ದಾರೆ.

ವಯೋಸಹಜ ಕಾಯಿಲೆಯಿಂದ ದಳವಾಯಿ ಹಳ್ಳಿ ಗ್ರಾಮದ ಗುಡುಗುಲ್ಲ ಹೊನ್ನೂರಪ್ಪ (80) ಎಂಬುವರು ಬುಧವಾರ ಅಸ್ವಸ್ಥಗೊಂಡಿದ್ದರು. ಕೂಡಲೇ ಮಕ್ಕಳು, ಹೊನ್ನೊರಪ್ಪನವರನ್ನು 108 ಆಂಬ್ಯುಲೆನ್ಸ್​ನಲ್ಲಿ ವೈ.ಎನ್ ಹೊಸಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದರು. ಆದರೆ, ಅಷ್ಟರಾಗಲೇ ಹೊನ್ನೂರಪ್ಪನ ನಿಧನ ಹೊಂದಿದ್ದರು. 

ಬಳಿಕ ಮೃತ ಶರೀರವನ್ನು ಮನೆಗೆ ಸಾಗಿಸಲು 108 ಆಂಬ್ಯುಲೆನ್ಸ್ ಸಿಬ್ಬಂದಿ ನಿರಾಕರಿಸಿದ್ದರು. ಮೃತದೇಹವನ್ನು ಆಂಬ್ಯುಲೆನ್ಸ್​​ನಲ್ಲಿ ಸಾಗಿಸುವಂತಿಲ್ಲ ಎಂದಿದ್ದರು. ಕೈಯಲ್ಲಿ ಹಣವಿಲ್ಲದೆ ಕೊನೆಗೆ ಹೊನ್ನೂರಪ್ಪ ಮಕ್ಕಳು ವಿಧಿಯಿಲ್ಲದೆ ತಂದೆಯ ಶವವನ್ನು ಬೈಕ್​ನಲ್ಲೇ ತೆಗೆದುಕೊಂಡು ಮನೆಗೆ ಹೋಗಿದ್ದರು. ಇದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ತುಮಕೂರು ಜಿಲ್ಲೆಯ  ವೈಎನ್ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

Tags:    

Similar News