Honeytrap| ರಾಜಣ್ಣನ ಪುತ್ರ ರಾಜೇಂದ್ರ ಕೊಲೆಗೆ ಸುಪಾರಿ: ಆಡಿಯೋದಲ್ಲಿ ಮಾತಾಡಿದ್ದ ಮಹಿಳೆ ಪೊಲೀಸರ ವಶಕ್ಕೆ
ಈ ಆಡಿಯೋದಿಂದಲೇ ಕೊಲೆ ಸುಪಾರಿ ಸಂಚು ಬಯಲಿಗೆ ಬಂದಿದೆ. ಆಡಿಯೋದಲ್ಲಿ ಮಾತಾಡಿದ್ದ ಮಹಿಳೆಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುಷ್ಪ ಎಂಬ ಮಹಿಳೆ ಜೊತೆ ಮಾತಾಡಿದ್ದ ಮತ್ತಿಬ್ಬರು ಯುವಕರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.;
ಸಚಿವ ಕೆ.ಎನ್ ರಾಜಣ್ಣ ಪುತ್ರ ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೆ ಸಂಚು ರೂಪಿಸಿದ್ದ ಸ್ಫೋಟಕ ಆಡಿಯೋ ರಿಲೀಸ್ ಆಗಿತ್ತು. ಆಡಿಯೋದಲ್ಲಿ ಮಾತಾಡಿದ್ದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಚಿವ ರಾಜಣ್ಣ ಪುತ್ರ ರಾಜೇಂದ್ರ ಹತ್ಯೆಗೆ ಯತ್ನ ಪ್ರಕರಣ ತನಿಖೆಯನ್ನು ಕ್ಯಾತಸಂದ್ರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಂಎಲ್‌ಸಿ ರಾಜೇಂದ್ರ ಅವರು ಆರೋಪ ಮಾಡಿದ ಹಾಗೆ 18 ನಿಮಿಷಗಳ ಆಡಿಯೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಡಿಯೋದಲ್ಲಿ ಪುಷ್ಪಾ ಹಾಗೂ ರಾಕಿ ಎಂಬಿಬ್ಬರು ಮಾತುಕತೆ ನಡೆಸಿದ್ದಾರೆ ಎನ್ನಲಾಗುವ ಸಂಭಾಷಣೆ ಇದೆ. ಈ ಆಡಿಯೋದಿಂದಲೇ ಕೊಲೆ ಸುಪಾರಿ ಸಂಚು ಬಯಲಿಗೆ ಬಂದಿದೆ. ಆಡಿಯೋದಲ್ಲಿ ಮಾತಾಡಿದ್ದ ಮಹಿಳೆಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುಷ್ಪಾ ಎಂಬ ಮಹಿಳೆ ಜೊತೆ ಮಾತಾಡಿದ್ದ ಮತ್ತಿಬ್ಬರು ಯುವಕರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣವೇನು?
ಸಚಿವ ಕೆಎನ್ ರಾಜಣ್ಣ ಹಾಗೂ ಅವರ ಪುತ್ರ ಎಂಎಲ್‌ಸಿ ರಾಜೇಂದ್ರ ಅವರ ಕೊಲೆಗೆ ಸುಪಾರಿ ಕೊಟ್ಟಿರುವ ವಿಚಾರಕ್ಕೆ ಪೂರಕವಾಗಿ ರಾಕಿ ಹಾಗೂ ಮಹಿಳೆಯೊಬ್ಬಳು ಮಾತನಾಡಿರುವ ಆಡಿಯೊವೊಂದು ವೈರಲ್ ಆಗಿತ್ತು. ಪುಷ್ಪಾ ಎಂಬ ಹೆಸರಿನ ಮಹಿಳೆ ಮಾತನಾಡಿರುವ ಧ್ವನಿ ಸಂಭಾಷಣೆಯನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದರು. ಈ ಪ್ರಕರಣದ ಒಂದನೇ ಆರೋಪಿ ಜೈಪುರ ಸೋಮನ ಜತೆ ಸಂಪರ್ಕದಲ್ಲಿದ್ದ ಪುಷ್ಪಾ, ಡಿಸೆಂಬರ್‌ನಲ್ಲಿ ರಾಕಿ ಜತೆ ಮಾತನಾಡಿದ್ದಳು. ಈ ಸಂಭಾಷಣೆಯಲ್ಲಿ, ಸೋಮನು ರಾಜೇಂದ್ರನ ಹತ್ಯೆಗೆ ಸುಪಾರಿ ಪಡೆದಿದ್ದ ಬಗ್ಗೆ ಪುಷ್ಪಾಳಿಗೆ ವಿವರಿಸಿದ್ದ. ಸೋಮನ ಜೊತೆಗಿದ್ದುಕೊಂಡೇ ಪುಷ್ಪಾ, ಕೊಲೆ ಸಂಚಿನ ಮಾಹಿತಿ ಕಲೆಹಾಕಿದ್ದರಂತೆ. ಬಳಿಕ ಕೊಲೆ ಸಂಚಿನ ವಿಚಾರವನ್ನು ರಾಜೇಂದ್ರರಿಗೆ ತಿಳಿಸಲು ಪುಷ್ಪಾ ಯೋಜನೆ ರೂಪಿಸಿದ್ದಾರೆ. ರಾಜೇಂದ್ರಗೆ ವಿಚಾರ ಮುಟ್ಟಿಸಲು ರಾಕಿ ಎನ ಬಳಸಿಕೊಂಡಿದ್ದಾರೆ. ಕೊಲೆ ಸಂಚಿನ ಬಗ್ಗೆ ಪುಷ್ಪ ಹೇಳಿದ್ದನ್ನ ರಾಕಿ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಆ ಬಳಿಕ ರಾಜೇಂದ್ರಗೆ ಈ ಆಡಿಯೋ ತಲುಪಿಸಲಾಗಿದ್ದರು. ಈ ಆಡಿಯೋವನ್ನು ಪೊಲೀಸರು ಪಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.