ಇಂದಿನಿಂದ ಮತ್ತೆ ಆರಂಭಗೊಂಡ ದ.ರಾಮೇಶ್ವರಂ ಕೆಫೆ
ಇಂದು ಬೆಳಗ್ಗೆ 6.30ಗೆ ಪೊಲೀಸ್ ಇಲಾಖೆಯ ಕೆಲವು ಮುಂಜಾಗೃತ ಕ್ರಮಗಳೊಂದಿಗೆ ಹಾಗೂ ಹೊಟೇಲ್‌ನ ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಿ ಕೆಫೆಯನ್ನು ಪುನರಾಂಭಗೊಳಿಸಲಾಗಿದೆ.;
By : The Federal
Update: 2024-03-08 12:04 GMT
ಒಂದು ವಾರದ ಹಿಂದೆ ಬಾಂಬ್ ಸ್ಪೋಟಗೊಂಡಿದ್ದ ʼದಿ ರಾಮೇಶ್ವರಂ ಕೆಫೆʼ ಇಂದು ಪುನರಾಂಭಗೊಂಡಿದೆ.
ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಕೆಫೆಯನ್ನು ಮತ್ತೆ ಆರಂಭಿಸುತ್ತೇವೆ ಎಂದು ಕೆಫೆಯ ಸಿಇಒ ರಾಘವೇಂದ್ರ ರಾವ್ ತಿಳಿಸಿದ್ದು, ಇಂದು ಬೆಳಗ್ಗೆ 6.30ಗೆ ಪೊಲೀಸ್ ಇಲಾಖೆಯ ಕೆಲವು ಮುಂಜಾಗೃತ ಕ್ರಮಗಳೊಂದಿಗೆ ಹಾಗೂ ಹೊಟೇಲ್‌ನ ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಿ ಕೆಫೆಯನ್ನು ಪುನರಾಂಭಗೊಳಿಸಲಾಗಿದೆ.
ಬೆಂಗಳೂರಿನ ಕುಂದಲಹಳ್ಳಿ ಬ್ರೂಕ್ ಫೀಲ್ಡ್ ರಸ್ತೆಯಲ್ಲಿರುವ ಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಬಾಂಬ್ ಸ್ಪೋಟಗೊಂಡು ಹಲವರಿಗೆ ಗಾಯಗಳಾಗಿತ್ತು. ಬಾಂಬ್ ಸ್ಪೋಟದ ಆರೋಪಿಯ ಪತ್ತೆಗಾಗಿ ಪೊಲೀಸರು ಇನ್ನು ಹುಡುಕಾಟ ನಡೆಸುತ್ತಿದ್ದಾರೆ.