ಬುಕಿಂಗ್ ಅಕ್ರಮ | ಚಾರಣಕ್ಕೆ ತಾತ್ಕಾಲಿಕ ನಿರ್ಬಂಧ ಹೇರಿದ ಅರಣ್ಯ ಇಲಾಖೆ
ಚಾರಣಕ್ಕೆ ಖ್ಯಾತಿಯಾಗಿರುವ ರಾಜ್ಯದ ಎತ್ತಿನಭುಜ, ರಾಣಿಝರಿ, ಬಲ್ಲಾಳರಾಯನ ದುರ್ಗ, ಸ್ಕಂದಗಿರಿ, ಮಾಕಳಿದುರ್ಗ ಸೇರಿದಂತೆ ರಾಜ್ಯದ 23 ಚಾರಣ ಸ್ಥಳಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
ಚಿಕ್ಕಮಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೊಪ್ಪ ಅರಣ್ಯ ವಿಭಾಗದ 23ಕ್ಕೂ ಹೆಚ್ಚು ಚಾರಣ ಸ್ಥಳಗಳಿಗೆ ಆನ್‌ಲೈನ್ ಟಿಕೆಟ್ ಬುಕ್ ಮಾಡಿಕೊಂಡು, ಚಾರಣಕ್ಕೆ ಅಧಿಕೃತವಾಗಿ ಅವಕಾಶ ಕಲ್ಪಿಸಲು ಕರ್ನಾಟಕ ಅರಣ್ಯ ಪ್ರವಾಸೋದ್ಯಮ ಮಂಡಳಿ (ಇಕೋ ಟೂರಿಸಂ)ಗೆ ಅಧಿಕಾರ ನೀಡಲಾಗಿತ್ತು. ಆದರೆ, ಇಕೋ ಟೂರಿಸಂ ಮಂಡಳಿಯ ಕೆಲವು ಸಿಬ್ಬಂದಿ ಆನ್‌ಲೈನ್‌ನಲ್ಲಿ ನಕಲಿ ಟಿಕೆಟ್ ಬುಕ್ಕಿಂಗ್ ಮಾಡಿ ಲಕ್ಷ-ಲಕ್ಷ ಹಣ ದುರುಪಯೋಗ ಮಾಡಿಕೊಂಡಿರುವುದು ಇತ್ತೀಚೆಗೆ ಬಯಲಾಗಿತ್ತು. ಹಾಗಾಗಿ ಇಕೋ ಟೂರಿಸಂ ಬದಲು ಅರಣ್ಯ ಇಲಾಖೆಯೇ ನೇರವಾಗಿ ಚಾರಣ ನಿರ್ವಹಣೆ ಮಾಡಲು ಮುಂದಾಗಿದೆ. ಆ ಹಿನ್ನೆಲೆಯಲ್ಲಿ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಗಸ್ಟ್1, 2024ರಿಂದ ತಾತ್ಕಾಲಿಕವಾಗಿ ಚಾರಣ ತಡೆಹಿಡಿಯಲಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಆಯ್ದ ಪ್ರಕೃತಿ ಸೊಬಗಿನ ತಾಣಗಳನ್ನು ಗುರುತಿಸಿ, ಪ್ರಕೃತಿ ಪ್ರಿಯರು ಹಾಗೂ ಸಾಹಸ ಚಾರಣಿಗರ ಅನುಕೂಲಕ್ಕೆಂದು ರಾಜ್ಯ ಸರ್ಕಾರ ಪರಿಸರ ಪ್ರವಾಸೋದ್ಯಮ ಮಂಡಳಿಯನ್ನು ನಿರ್ಮಿಸಿ, ಅದರಡಿ 20ಕ್ಕೂ ಹೆಚ್ಚು ಅಚ್ಚುಮೆಚ್ಚಿನ ಚಾರಣ ಸ್ಥಳಗಳನ್ನು ಮಂಡಳಿಯ ನಿರ್ವಹಣೆಗೆ ಸೂಚಿಸಿತ್ತು.
ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಕಂದಗಿರಿ, ಕೈವಾರಬೆಟ್ಟ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಕಳಿದುರ್ಗ ಕೋಲಾರದ ಅಂತರಗಂಗೆ ತುಮಕೂರಿನ ಸಾವನದುರ್ಗ, ರಾಮನಗರದ ರಾಮದೇವರಬೆಟ್ಟ ಸೇರಿದಂತೆ ಚಿನಾಗ್‌ಬೆಟ್ಟ, ಸಿದ್ದರಬೆಟ್ಟಗಳು ಪ್ರಸಿದ್ದ ಚಾರಣಧಾಮಗಳಲ್ಲಿ ಅರಣ್ಯ ಇಲಾಖೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.
ಸದ್ಯಕ್ಕೆ ನಿರ್ಬಂಧ ಹೇರಿರುವ ರಾಜ್ಯದ ಪ್ರಮುಖ ಚಾರಣ ಸ್ಥಳಗಳು