ಧರ್ಮಸ್ಥಳ ಪ್ರಕರಣದಲ್ಲಿ 'ನರಬಲಿ'ಯ ಶಂಕೆ: ಹಿರಿಯ ವಕೀಲ ಎಸ್. ಬಾಲನ್
ಪ್ರಕರಣದಲ್ಲಿ ಮೃತಪಟ್ಟ ಹೆಣ್ಣುಮಕ್ಕಳಲ್ಲಿ ಹೆಚ್ಚಿನವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದು, ಇದೇ 'ನರಬಲಿ'ಯ ಅನುಮಾನಕ್ಕೆ ಮುಖ್ಯ ಕಾರಣವಾಗಿದೆ ಎಂದು ಬಾಲನ್ ವಿವರಿಸಿದ್ದಾರೆ.;
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ಎಸ್. ಬಾಲನ್ ಅವರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದು, ಇದು 'ನರಬಲಿ'ಯಾಗಿರುವ ಸಾಧ್ಯತೆಯ ಬಗ್ಗೆ ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. 'ದ ಫೆಡರಲ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪ್ರಕರಣದ ತನಿಖೆಗೆ ಇತ್ತೀಚೆಗೆ ಪತ್ತೆಯಾಗಿರುವ ಅಸ್ಥಿಪಂಜರವೇ ಪ್ರಮುಖ ಸಾಕ್ಷಿಯಾಗಿದ್ದು, ಅದರ ಪರೀಕ್ಷೆ ಮೂಲಕ ಸತ್ಯಾಂಶ ಖಂಡಿತವಾಗಿಯೂ ಹೊರತರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
">ಪೂರ್ಣ ಸಂದರ್ಶನವನ್ನು ಇಲ್ಲಿ ವೀಕ್ಷಿಸಿ
ಪ್ರಕರಣದಲ್ಲಿ ಮೃತಪಟ್ಟ ಹೆಣ್ಣುಮಕ್ಕಳಲ್ಲಿ ಹೆಚ್ಚಿನವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದು, ಇದೇ 'ನರಬಲಿ'ಯ ಅನುಮಾನಕ್ಕೆ ಮುಖ್ಯ ಕಾರಣವಾಗಿದೆ ಎಂದು ಬಾಲನ್ ವಿವರಿಸಿದ್ದಾರೆ. ತನಿಖೆಯ ಮೂಲಕ ಕೊಲೆಯ ಹಿಂದಿರುವ ನಿಜವಾದ ಅಪರಾಧಿಗಳು ಯಾರೆಂಬುದು ಬಯಲಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದೇ ವೇಳೆ, ದೂರುದಾರನನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಬೇಕು ಮತ್ತು ಆತನ ಜೀವಕ್ಕೆ ಅಪಾಯವಿರುವುದರಿಂದ, ಸರ್ಕಾರವು ಅವನಿಗೆ ಆಜೀವಪರ್ಯಂತ ಭದ್ರತೆ ಒದಗಿಸಬೇಕು, ಇಲ್ಲದಿದ್ದರೆ ಆತನನ್ನು ಕೊಲೆ ಮಾಡುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ತಮ್ಮ ನಿಲುವು ಯಾವುದೇ ಧರ್ಮದ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದ ಬಾಲನ್, "ನನ್ನ ಹೆಸರೇ ಬಾಲಕೃಷ್ಣ. ಇಲ್ಲಿ ಸತ್ತವರು ಪಾಕಿಸ್ತಾನದವರೇ? ಅಥವಾ ಸುಮ್ಮನೆ ಸತ್ತಿದ್ದಾರೆಯೇ?" ಎಂದು ಭಾವನಾತ್ಮಕವಾಗಿ ಪ್ರಶ್ನಿಸಿದ್ದಾರೆ. ಕೊಲೆಯಾದ ಹೆಣ್ಣುಮಕ್ಕಳ ಕುಟುಂಬಗಳಿಗೆ ನ್ಯಾಯ ಸಿಗಲೇಬೇಕು ಮತ್ತು ಇದಕ್ಕಾಗಿ ಸಮಗ್ರವಾದ ತನಿಖೆ ನಡೆದು ಸತ್ಯ ಹೊರಬರಬೇಕು ಎನ್ನುವುದು ತಮ್ಮ ಪ್ರಮುಖ ಒತ್ತಾಯ ಎಂದು ಅವರು ತಿಳಿಸಿದ್ದಾರೆ.