ವನ್ಯ ಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆ; ನಟ ದರ್ಶನ್-ಪತ್ನಿ ವಿಜಯಲಕ್ಷ್ಮಿಗೆ ಸಮನ್ಸ್ ಜಾರಿ

ನಟ ದರ್ಶನ್‌ ಅವರ ಮೈಸೂರಿನ ಕೆಂಪಯ್ಯನ ಹುಂಡಿಯಲ್ಲಿರುವ ತೋಟದ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ವಿದೇಶಿ ಪ್ರಭೇದದ ಬಾತು ಕೋಳಿ ವಶಕ್ಕೆ ಪಡೆದಿದ್ದರು. ವನ್ಯ ಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.;

Update: 2025-05-23 08:10 GMT

ನಟ ದರ್ಶನ್-ಪತ್ನಿ ವಿಜಯಲಕ್ಷ್ಮಿಗೆ ಸಮನ್ಸ್ ಜಾರಿಯಾಗಿದೆ. 

ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಮೈಸೂರಿನ ನರಸೀಪುರ ನ್ಯಾಯಾಲಯದಿಂದ ಸಮನ್ಸ್ ಜಾರಿ ಮಾಡಲಾಗಿದೆ. ಇದಕ್ಕೆ ಕಾರಣ ದರ್ಶನ್ ಅವರ ಫಾರಂ ಹೌಸ್‌ನಲ್ಲಿ ವಿದೇಶಿ ಪ್ರಭೇದದ 'ಬಾರ್ ಹೆಡೆಡ್ ಗೂಸ್' ಸಾಕಿದ್ದು, ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಪರಾಧವಾಗಿದೆ.

ಮೈಸೂರಿನ ಕೆಂಪಯ್ಯನ ಹುಂಡಿಯಲ್ಲಿರುವ ದರ್ಶನ್ ಅವರ ತೋಟದ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದಾಗ ಈ ವಿದೇಶಿ ಬಾತುಕೋಳಿಗಳು ಪತ್ತೆಯಾಗಿದ್ದವು. 'ಬಾರ್ ಹೆಡೆಡ್ ಗೂಸ್' ಮಧ್ಯ ಏಷ್ಯಾದ ವಲಸೆ ಹಕ್ಕಿಯಾಗಿದ್ದು, ಇವುಗಳನ್ನು ಸಾಕುವುದು ಕಾನೂನುಬಾಹಿರ. ಈ ಪ್ರಕರಣದ ವಿಚಾರಣೆಯು ಮೈಸೂರು ಜಿಲ್ಲೆಯ ಟಿ. ನರಸೀಪುರ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ನ್ಯಾಯಾಲಯವು ದರ್ಶನ್ ಮತ್ತು ವಿಜಯಲಕ್ಷ್ಮಿ ಅವರಿಗೆ ಜುಲೈ 4 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.

ದರ್ಶನ್ ಅವರ ಫಾರಂ ಹೌಸ್‌ನಲ್ಲಿ ಹಸು, ಎತ್ತು, ಕುದುರೆ, ಗಿಳಿಗಳು, ಬಾತುಕೋಳಿ, ಕುರಿ, ಕೋಳಿ ಸೇರಿದಂತೆ ಹಲವು ಪ್ರಾಣಿ-ಪಕ್ಷಿಗಳನ್ನು ಸಾಕಿದ್ದಾರೆ. ಈ ಹಿಂದೆ ಯೂಟ್ಯೂಬರ್ ಒಬ್ಬರು ದರ್ಶನ್ ಅವರ ಫಾರಂ ಹೌಸ್‌ನ ವೀಡಿಯೊ ಮಾಡಿದ್ದರು. ಈ ವೀಡಿಯೊ ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ನಿಯಮಬಾಹಿರವಾಗಿ ಇರಿಸಿಕೊಂಡಿದ್ದ ಪಕ್ಷಿಗಳನ್ನು ವಶಪಡಿಸಿಕೊಂಡಿದ್ದರು.

Tags:    

Similar News