ಕಾಲ್ತುಳಿತ ಪ್ರಕರಣ | ಕಬ್ಬನ್‌ಪಾರ್ಕ್‌ಗೆ ಹಾನಿ; ಹೈಕೋರ್ಟ್‌ ಮೆಟ್ಟಿಲೇರಿದ ವಾಕರ್ಸ್‌ ಅಸೋಸಿಯೇಷನ್‌

ಆರ್‌ಸಿಬಿ ಆಟಗಾರರನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಕಬ್ಬನ್ ಪಾರ್ಕ್‌ ಮರಗಳ ಮೇಲೆ ಹತ್ತಿದ್ದರು. ಈ ವೇಳೆ ಅಭಿಮಾನಿಗಳ ಕಾಲ್ತುತುಳಿತದಿಂದ ಸಾಕಷ್ಟು ಸಸಿಗಳು ಹಾಳಾಗಿವೆ. ಇದರಿಂದ ಕೋಟ್ಯಂತರ ರೂ.ನಷ್ಟವಾಗಿದೆ ಎಂದು ಕಬ್ಬನ್ ಪಾರ್ಕ್ ಅಸೋಸಿಯೇಷನ್ ಆರೋಪಿಸಿದೆ.;

Update: 2025-08-10 11:05 GMT

ಕರ್ನಾಟಕ ಹೈಕೋರ್ಟ್‌

ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಕೆಎಸ್‌ಸಿಎ, ಆರ್‌ಸಿಬಿ ವಿರುದ್ಧ ಕಬ್ಬನ್‌ಪಾರ್ಕ್‌ ವಾಕರ್ಸ್ ಅಸೋಸಿಯೇಷನ್‌ ಹೈಕೋರ್ಟ್‌ ಮೆಟ್ಟಿಲೇರಿದೆ. 

ಆರ್‌ಸಿಬಿ ಆಟಗಾರರನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಕಬ್ಬನ್ ಪಾರ್ಕ್‌ ಮರಗಳ ಮೇಲೆ ಹತ್ತಿದ್ದರು. ಈ ವೇಳೆ ಅಭಿಮಾನಿಗಳ ಕಾಲ್ತುತುಳಿತದಿಂದ ಸಾಕಷ್ಟು ಸಸಿಗಳು ಹಾಳಾಗಿವೆ. ಇದರಿಂದ ಕೋಟ್ಯಂತರ ರೂ.ನಷ್ಟವಾಗಿದೆ ಎಂದು ಕಬ್ಬನ್ ಪಾರ್ಕ್ ಅಸೋಸಿಯೇಷನ್ ಆರೋಪಿಸಿದೆ.

ಕಬ್ಬನ್ ಪಾರ್ಕ್‌ನಲ್ಲಿದ್ದ ಸಸಿಗಳು, ಮರಗಳು ಹಾಗೂ ಉದ್ಯಾನವನಕ್ಕೆ ಹಾನಿಯಾಗಿದೆ. ಹಾಗೇ ವಿಧಾನಸೌಧದ ಮುಂಭಾಗದ ಗಾರ್ಡನ್‌ ಹಾಳಾಗಿದೆ.  ತೋಟಗಾರಿಕೆ ಇಲಾಖೆ ವತಿಯಿಂದ ಕಬ್ಬನ್ ಪಾರ್ಕ್‌ನಲ್ಲಿ ಕೋಟ್ಯಂತರ ರೂ.ವೆಚ್ಚದಲ್ಲಿ ಲಾನ್‌ ಅಭಿವೃದ್ಧಿಪಡಿಸಿತ್ತು. ಕಾಲ್ತುಳಿತದಿಂದ ಉದ್ಯಾನ ಕೂಡ ಹಾನಿಯಾಗಿದೆ. ಕಬ್ಬನ್ ಪಾರ್ಕ್‌ಗೆ ಹಾನಿಯಾದರೆ ನೀವೇ ಹೊಣೆಗಾರರು ಎಂದು ಆರ್‌ಸಿಬಿ ಮತ್ತು ಕೆಎಸ್‌ಸಿಎಗೆ ಮೊದಲೇ ಷರತ್ತು ಹಾಕಲಾಗಿತ್ತು.

ಈಗ ಕಾಲ್ತುತುಳಿತದಲ್ಲಿ ಪಾರ್ಕ್‌ಗೆ ಹಾನಿಯಾಗಿದ್ದು, ಈ ನಷ್ಟವನ್ನು ಆರ್‌ಸಿಬಿ ಹಾಗೂ ಕೆಎಸ್‌ಸಿಎ ಭರಿಸಿಕೊಡಬೇಕು ಎಂದು ಕಬ್ಬನ್ ಪಾರ್ಕ್ ಅಸೋಸಿಯೇಷನ್ ಹೈಕೋರ್ಟ್‌ ಪಿಐಎಲ್ ನಲ್ಲಿ ಒತ್ತಾಯಿಸಿದೆ. 

ಒಟ್ಟಿನಲ್ಲಿ ಈಗಾಗಲೇ ಕಾಲ್ತುತುಳಿತ ಪ್ರಕರಣದಿಂದ ಕಂಗಾಲಾಗಿರುವ ಆರ್‌ಸಿಬಿ ಹಾಗೂ ಕೆಎಸ್‌ಸಿಎಗೆ ಕಬ್ಬನ್ ಪಾರ್ಕ್ ಅಸೋಸಿಯೇಷನ್ ಶಾಕ್ ನೀಡಿದೆ. 

ಐಪಿಎಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಪ್ರಕರಣದ ತನಿಖೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ನೇತೃತ್ವದ ತನಿಖಾ ತಂಡ ಸರ್ಕಾರಕ್ಕೆ ತನಿಖಾ ಸಲ್ಲಿಸಿತ್ತು.

Tags:    

Similar News