ಕೊಲೆ ಪ್ರಕರಣ: ದರ್ಶನ್‌, ಪವಿತ್ರಾಗೌಡ ಜೈಲಿನಿಂದ ಬಿಡುಗಡೆ; ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿಗೆ ಪೊಲೀಸರ ಚಿಂತನೆ

ದರ್ಶನ್‌ ಜಾಮೀನು ಮತ್ತು ಶ್ಯೂರಿಟಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಮುಗಿಸಿ ಅವರು ಮತ್ತೆ ಬಿಜಿಎಸ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ದರ್ಶನ್‌ ಶಸ್ತ್ರ ಚಿಕಿತ್ಸೆ ಇನ್ನೂ ನಡೆದಿಲ್ಲ. ಈ ಕಾರಣಕ್ಕಾಗಿ ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದು, ಡಿಸೆಂಬರ್​ 18 ಅಥವಾ 19ರಂದು ಅವರು ಡಿಸ್ಚಾರ್ಜ್​ ಆಗಿ ಮನೆಗೆ ಮರಳುವ ಸಾಧ್ಯತೆ ಇದೆ.

Update: 2024-12-17 11:15 GMT
ದರ್ಶನ್‌ ಹಾಗೂ ಪವಿತ್ರಾ ಗೌಡ ಅವರು ಜೈಲಿನಿಂದ ಹೊರಕ್ಕೆ ಬಂದಿದ್ದಾರೆ.
Click the Play button to listen to article

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಮತ್ತು ದರ್ಶನ್‌ ಗೆಳತಿ ಪವಿತ್ರಾಗೌಡ ಅವರಿಗೆ ಜಾಮೀನು ಮಂಜುರಾಗಿದ್ದು, ದರ್ಶನ್‌  ಜಾಮೀನು ಪ್ರಕ್ರಿಯೆ ಮುಗಿಸಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲೇ ಮರುದಾಖಲಾಗಿ ಚಿಕಿತ್ಸೆ ಮುಂದುವರಿಸಿದರೆ, ಪವಿತ್ರಾಗೌಡ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಕೊಲೆ ಆರೋಪಿ ದರ್ಶನ್‌, ಪವಿತ್ರಾಗೌಡ ಸೇರಿದಂತೆ ಏಳು ಮಂದಿಗೆ ನ್ಯಾಯಾಲಯ ಜಾಮೀನು ನೀಡಿರುವುದನ್ನು ವಿರೋಧಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಬಿ. ದಯಾನಂದ್‌ ತಿಳಿಸಿದ್ದಾರೆ.  ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ನಗುನಗುತ್ತಾ ಬಂದ ಪವಿತ್ರಾ

ನಟಿ ಪವಿತ್ರಾ ಗೌಡ ಅವರು ಎ1 ಆರೋಪಿಯಾಗಿದ್ದರು. ಅವರಿಗೂ ಜಾಮೀನು ಮಂಜೂರಾಗಿದ್ದು, ಜಾಮೀನು ಸಿಕ್ಕ ಮೂರು ದಿನಗಳ ಬಳಿಕ ಅವರು ಮಂಗಳವಾರ ಜೈಲಿನಿಂದ ನಗುನಗುತ್ತಲೇ ಹೊರಗೆ ಬಂದಿದ್ದಾರೆ. ಜೈಲಿನಿಂದ ಹೊರಬರುತ್ತಿದ್ದಂತೆಯೇ ಜೈಲು ಹೊರಭಾಗದಲ್ಲಿರುವ ವಜ್ರಮುನೇಶ್ವರ ದೇವಸ್ಥಾನದಲ್ಲಿ ಪ್ರವಿತ್ರಾ ಕುಟುಂಬ ಪೂಜೆ ನಡೆಸಿದ್ದು, ಪವಿತ್ರಾ ತಾಯಿ ದರ್ಶನ್ ಹೆಸರಲ್ಲಿ ಅರ್ಚನೆ ಮಾಡಿಸಿದ್ದಾರೆ ಎನ್ನಲಾಗಿದೆ. ದೇವರಿಗೆ ನಿಂಬೆಹಣ್ಣಿನ ಹಾರ ಹಾಕಿ ಪೂಜೆ ಮಾಡಿದ್ದಾರೆ.

ಬಳಿಕ ಅಲ್ಲಿಂದ ನೇರವಾಗಿ ಮನೆ ದೇವರು, ತಲಘಟ್ಟಪುರದ ವಜ್ರಮುನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಅರ್ಚಕರು ಪವಿತ್ರಾ ಗೌಡಗೆ ತೀರ್ಥ ಸ್ನಾನ ಮಾಡಿಸಿ, ಶುದ್ಧೀಕರಣ ಮಾಡಿದ್ದಾರೆ. ದೇವಸ್ಥಾನದಲ್ಲಿ ವಿಶೇಷ ಪೂಜೆ ಕೂಡ ಸಲ್ಲಿಸಲಾಗಿದೆ. ಪವಿತ್ರಾ ಗೌಡ ತಾಯಿ ಭಾಗ್ಯ ಮಗಳ ಬಿಡುಗಡೆ ಹರಕೆ ಹೊತ್ತಿದ್ದರು. ಹಾಗಾಗಿಯೇ ಇಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. 

ಪವಿತ್ರಾ ಗೌಡ ಅವರು ವಜ್ರಮುನೇಶ್ವರ ದೇವಾಲಯದಲ್ಲಿ ಕುಟುಂಬದ ಹೆಸರಲ್ಲಿ ಅರ್ಚನೆ ಮಾಡಿಸಿದರು. 

 ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಒಟ್ಟು ೭ ಜನರಿಗೆ ಜಾಮೀನು ಮಂಜೂರು ಮಾಡಲಾಗಿದ್ದು,5 ಜನರನ್ನು ಬಿಟ್ಟು ದರ್ಶನ್‌, ಪವಿತ್ರಾ ಗೌಡ ಹಾಗೂ ಇನ್ನಿತರು ಹೊರಗೆ ಬಂದಿದ್ದಾರೆ. 5 ಜನರಿಗೆ ಶ್ಯೂರಿಟಿ ಸಿಗದಿರುವುದರಿಂದ ಬಿಡುಗಡೆ ಆಗಿಲ್ಲ ಎಂದು ತಿಳಿದುಬಂದಿದೆ. 

ಸೋಮವಾರವೇ ದರ್ಶನ್‌ ನ್ಯಾಯಾಲಯ ಪ್ರಕ್ರಿಯೆ ಮುಗಿಸಿದ್ದು,  ಅವರು ಕೆಂಗೇರಿಯಿಂದ  ನೇರವಾಗಿ ಸೆಷನ್ಸ್ ಕೋರ್ಟ್​ಗೆ ತೆರಳಿ  ಜಡ್ಜ್ ಮುಂದೆ ಹಾಜರಾಗಿ ಸಹಿ ಮಾಡಿದರು. ಜಾಮೀನು ಮತ್ತು ಶ್ಯೂರಿಟಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಮುಗಿಸಿ ಅವರು ಮತ್ತೆ ಬಿಜಿಎಸ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ದರ್ಶನ್‌ ಶಸ್ತ್ರ ಚಿಕಿತ್ಸೆ ಇನ್ನೂ ನಡೆದಿಲ್ಲ. ಈ ಕಾರಣಕ್ಕಾಗಿ ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದು, ಡಿಸೆಂಬರ್​ 18 ಅಥವಾ 19ರಂದು ಅವರು ಡಿಸ್ಚಾರ್ಜ್​ ಆಗಿ ಮನೆಗೆ ಮರಳುವ ಸಾಧ್ಯತೆ ಇದೆ.

ನಟ ದರ್ಶನ್‌ಗೆ 57ನೇ ಸಿಸಿಎಚ್‌ ಕೋರ್ಟ್‌ನಲ್ಲಿ 1 ಲಕ್ಷ ರೂಪಾಯಿ ಬಾಂಡ್ ಹಾಗೂ  ಶ್ಯೂರಿಟಿಗಳನ್ನು ದರ್ಶನ್‌​ ಸಹೋದರ ದಿನಕರ್ ಹಾಗೂ ನಟ ಧನ್ವೀರ್ ನೀಡಿದ್ದಾರೆ. ಪವಿತ್ರಾ ಗೌಡಗೆ   ಒಬ್ಬ ಮಹಿಳೆ ಹಾಗೂ ತಲಘಟ್ಟಪುರ ಮೂಲದ ಮನೀಶ್ ಎಂಬುವವರು ಶ್ಯೂರಿಟಿ ನೀಡಿದ್ದಾರೆ  ಎಂದು ತಿಳಿದುಬಂದಿದೆ. 

ಐದು ಜನರಿಗೆ ಸಿಗದ ಬಿಡುಗಡೆ ಭಾಗ್ಯ 

ಎ3 ಆರೋಪಿ ಪವನ್  ಪವಿತ್ರಾ ಗೌಡ ಮನೆಯಲ್ಲಿ ಕೆಲಸ ಮಾಡುತ್ತಿದ್ದವರು. ರೇಣುಕಾಸ್ವಾಮಿ ತಮಗೆ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದುದರ ಬಗ್ಗೆ ಪವಿತ್ರಾ ಗೌಡ ಅವರು ಪವನ್ ಬಳಿ ಮೊದಲೇ ಹೇಳಿದ್ದು, ರೇಣುಕಾಸ್ವಾಮಿಯವರ ಜೊತೆಗೆ ಪವಿತ್ರಾ ಗೌಡರ ಹೆಸರಿನಲ್ಲಿ ಚಾಟ್ ಮಾಡಿದ್ದಾರೆಂದು ಹೇಳಲಾಗಿದೆ. ಇವರೇ ರೇಣುಕಾಸ್ವಾಮಿಯವರ ಜೊತೆಗೆ ಪವಿತ್ರಾ ಗೌಡರ ಹೆಸರಿನಲ್ಲಿ ಚಾಟ್ ಮಾಡಿದ್ದಾರೆಂದು ಹೇಳಲಾಗಿದೆ. ಇವರು ಜಾಮೀನು ಅರ್ಜಿಯನ್ನೇ ಸಲ್ಲಿಸಿಲ್ಲ. ಹಾಗಾಗಿ, ಇವರ ಜಾಮೀನು ವಿಚಾರಣೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

ಎ4 ಆರೋಪಿ ರಾಘವೇಂದ್ರ ಚಿತ್ರದುರ್ಗ ಜಿಲ್ಲಾ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿದ್ದು, ಚಿತ್ರದುರ್ಗದಲ್ಲಿದ್ದ ರೇಣುಕಾಸ್ವಾಮಿಯನ್ನು ಮನವೊಲಿಸಿ ಬೆಂಗಳೂರಿಗೆ ಕರೆತಂದಿರುವ ಆರೋಪ ಇದೆ. ಇವರು ಸಹ ಜಾಮೀನು ಸಲ್ಲಿಸಿಲ್ಲ.

ಎ 5 ಆರೋಪಿ ನಂದೀಶ್ ರೇಣುಕಾಸ್ವಾಮಿಯನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್ ಕರೆತಂದಿದ್ದಾಗ, ರೇಣುಕಾಸ್ವಾಮಿಯನ್ನು ಹೆಚ್ಚು ಹೊಡೆದಿದ್ದರು ಎಂಬ ಆರೋಪವಿದೆ.

ಎ 9 ಆರೋಪಿ ಧನರಾಜ್‌ ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿಯವರಿಗೆ ಕರೆಂಟ್ ಶಾಕ್ ಕೂಡ ಕೊಟ್ಟಿದ್ದು ಈತನೇ ಎಂಬುದು ಇವರ ಮೇಲಿನ ಆರೋಪ. ಇವರೂ ಸಹ ಜಾಮೀನಿಗೆ ಅರ್ಜಿ ಹಾಕಿಲ್ಲ ಎಂದು ಹೇಳಲಾಗಿದೆ.

ಎ 10 ಆರೋಪಿ ವಿನಯ್‌ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನ ಮಾಲೀಕ. ರೇಣುಕಾಸ್ವಾಮಿಯನ್ನು ಬಂಧಿಸಿಟ್ಟಿದ್ದ ಪಟ್ಟಣಗೆರೆ ಶೆಡ್ ಗೆ ಹೋಗುವಾಗ ದರ್ಶನ್ ಅವರು ಇದೇ ಸ್ಟೋನಿ ಬ್ರೂಕ್ ಹೋಟೆಲ್ ಗೆ ಹೋಗಿ ಅಲ್ಲಿಂದ ವಿನಯ್ ಜೊತೆಗೆ ಶೆಡ್ ಗೆ ತೆರಳಿದ್ದರೆಂಬ ಆರೋಪವಿದೆ.  ಇವರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅದಿನ್ನೂ ವಿಚಾರಣೆ ಹಂತದಲ್ಲಿದೆ.

ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ವ್ಯಕ್ತಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂಬ ಕಾರಣಕ್ಕಾಗಿ  ಜೂನ್ 7ರಂದು ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ದರ್ಶನ್‌ ಮತ್ತು ಗ್ಯಾಂಗ್‌ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದ ಆರೋಪವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ನಟಿ ಪವಿತ್ರಾ ಗೌಡ ಸೇರಿದಂತೆ ಹದಿನೇಳು ಮಂದಿಯನ್ನು ಬಂಧಿಸಲಾಗಿತ್ತು. ಇದೀಗ 6 ತಿಂಗಳಿಂದ ಪರಪ್ಪನ ಅಗ್ರಹಾರದಲ್ಲಿದ್ದ ಪವಿತ್ರಾ ಜೈಲಿನಿಂದ ಹೊರಗೆ ಬಂದಿದ್ದಾರೆ. 

ಬೆನ್ನು ನೋವು ಹಿನ್ನೆಲೆ ನಟ ದರ್ಶನ್‌ ಅವರಿಗೆ ಬಳ್ಳಾರಿ ಜೈಲಿನಿಂದ ಹೈಕೋರ್ಟ್‌ ನೀಡಿದ್ದ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೆಚ್ಚಿನ ಚಿಕಿತ್ಸೆಗೆ ಬಿಜಿಎಸ್‌ ಆಸ್ಪತ್ರೆ ಸೇರಿದ್ದರು.  ದರ್ಶನ್‌ಗೂ ಜಾಮೀನು ಮಂಜೂರು ಆಗಿದ್ದು, ಜಾಮೀನು ಪ್ರಕ್ರಿಯೆಯನ್ನು ಮುಗಿಸಿಕೊಂಡು ದರ್ಶನ್‌ ಮತ್ತೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

Tags:    

Similar News