ಕರ್ನೂಲ್ ಬಸ್ ದುರಂತ: ರಶ್ಮಿಕಾ ಮಂದಣ್ಣ, ವಿಷ್ಣು ಮಂಚು ಸಂತಾಪ

ಕರ್ನೂಲ್ ಬಸ್ ಘಟನೆಯ ಬಗ್ಗೆ ಅನೇಕ ಗಣ್ಯರು, ಅದರಲ್ಲೂ ಸಿನಿಮಾ ತಾರೆಯರು ತಮ್ಮ ದುಃಖ ಮತ್ತು ಸಂತಾಪವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ.

Update: 2025-10-25 06:41 GMT

ರಶ್ಮಿಕಾ ಮಂದಣ್ಣ 

Click the Play button to listen to article

ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ನಡೆದ ಭೀಕರ ಬಸ್ ಅಗ್ನಿ ದುರಂತವು ದೇಶಾದ್ಯಂತ ಆಘಾತವನ್ನುಂಟು ಮಾಡಿದೆ. ಹಲವಾರು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡ ಈ ಘಟನೆಯು ಎಲ್ಲೆಡೆ ದುಃಖ ಮತ್ತು ಕಳವಳವನ್ನುಂಟು ಮಾಡಿದೆ. ಈ ಹೃದಯವಿದ್ರಾವಕ ಘಟನೆಯ ಬಗ್ಗೆ ಅನೇಕ ಗಣ್ಯರು, ಅದರಲ್ಲೂ ಸಿನಿಮಾ ತಾರೆಯರು ತಮ್ಮ ದುಃಖ ಮತ್ತು ಸಂತಾಪವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ.

 ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ. "ಕರ್ನೂಲ್‌ನಿಂದ ಬಂದಿರುವ ಈ ಸುದ್ದಿ ನನ್ನ ಹೃದಯವನ್ನು ಭಾರವಾಗಿಸಿದೆ. ಆ ಉರಿಯುವ ಬಸ್‌ನೊಳಗೆ ಪ್ರಯಾಣಿಕರು ಅನುಭವಿಸಿರಬಹುದಾದ ಯಾತನೆಯನ್ನು ಊಹಿಸಿಕೊಳ್ಳುವುದು ಕೂಡ ಅಸಾಧ್ಯ. ಇಡೀ ಕುಟುಂಬ, ಪುಟ್ಟ ಮಕ್ಕಳೂ ಸೇರಿದಂತೆ ಇಷ್ಟೊಂದು ಜನರು ಕೆಲವೇ ನಿಮಿಷಗಳಲ್ಲಿ ಪ್ರಾಣ ಕಳೆದುಕೊಂಡಿರುವುದು ನಿಜಕ್ಕೂ ತೀವ್ರ ನೋವಿನ ಸಂಗತಿ" ಎಂದು ಅವರು ಬರೆದುಕೊಂಡಿದ್ದಾರೆ.ಈ ದುರಂತದಿಂದ ತೊಂದರೆಗೀಡಾದ ಪ್ರತಿ ಕುಟುಂಬಕ್ಕೆ ನನ್ನ ಪ್ರಾರ್ಥನೆಗಳು ಇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ. 

ವಿಷ್ಣು ಮಂಚು ಸಂತಾಪ

'ಕಣ್ಣಪ್ಪ' ಚಿತ್ರದ ನಟ ವಿಷ್ಣು ಮಂಚು ಅವರು ಕೂಡ ಎಕ್ಸ್ ಮೂಲಕ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. "ಹೈದರಾಬಾದ್-ಬೆಂಗಳೂರು ಹೆದ್ದಾರಿಯಲ್ಲಿ ನಡೆದ ಈ ದುರಂತ ಬಸ್ ಅಪಘಾತದಿಂದ ತೀವ್ರ ಆಘಾತವಾಗಿದೆ. ಇಷ್ಟೊಂದು ಅಮಾಯಕ ಜೀವಗಳು ಇಂತಹ ಭಯಾನಕ ರೀತಿಯಲ್ಲಿ ಸಾವನ್ನಪ್ಪಿರುವುದು ವಿಚಲನಗೊಳಿಸಿದೆ. ಸಂತ್ರಸ್ತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾಯಗೊಂಡವರಿಗೆ ಶೀಘ್ರ ಚೇತರಿಕೆಗಾಗಿ ಮತ್ತು ದುಃಖದಲ್ಲಿರುವವರಿಗೆ ಧೈರ್ಯಕ್ಕಾಗಿ ಪ್ರಾರ್ಥಿಸುತ್ತೇನೆ," ಎಂದು ಅವರು ಬರೆದಿದ್ದಾರೆ.

Tags:    

Similar News