Suspended | ಠಾಣೆಯಲ್ಲೇ ಇಸ್ಪೀಟ್‌ ಆಟ; ಐವರು ಪೊಲೀಸ್‌ ಸಿಬ್ಬಂದಿ ಅಮಾನತು

ಕಲಬುರಗಿಯ ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದ ವೇಳೆ ಇಸ್ಪೀಟ್ ಆಡಿದ್ದ ಐವರು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.;

Update: 2025-03-19 07:06 GMT
ಎಸ್ಪಿ ಅಡ್ಡೂರು ಶ್ರೀನಿವಾಸಲು

ಇಸ್ಪೀಟ್, ಬೆಟ್ಟಿಂಗ್ ದಂಧೆಕೋರರ ಹೆಡೆಮುರಿ ಕಟ್ಟಬೇಕಾಗಿದ್ದ ಪೊಲೀಸರೇ ಠಾಣೆಯಲ್ಲಿಇಸ್ಪೀಟ್ ಆಡಿದ ಪರಿಣಾಮ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.

ಕಲಬುರಗಿಯ ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದ ವೇಳೆ ಇಸ್ಪೀಟ್ ಆಡಿದ್ದ ಐವರು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ವಾಡಿ ಪೊಲೀಸ್ ಠಾಣೆಯ ಎಎಸ್ಐ ಮಹಿಮೂದ್ ಮಿಯಾ, ಹೆಡ್ ಕಾನ್ಸ್‌ಸ್ಟೆಬಲ್‌ ನಾಗರಾಜ್, ಸಾಯಿಬಣ್ಣ, ಇಮಾಮ್, ಕಾನ್ಸ್‌ಸ್ಟೆಬಲ್‌ ನಾಗಭೂಷಣ್ ಅಮಾನತುಗೊಂಡ ಪೊಲೀಸರು.

ಪೊಲೀಸ್ ಠಾಣೆಯಲ್ಲಿ ಸಮವಸ್ತ್ರ ಧರಿಸಿ ಇಸ್ಪೀಟ್ ಆಡುತ್ತಿದ್ದ ಪೊಲೀಸರು ವಿಡಿಯೋ ಬುಧವಾರ(ಮಾ.19) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪೊಲೀಸರ ಕರ್ತವ್ಯ ಲೋಪದಿಂದ ಇಲಾಖೆ ತಲೆ ತಗ್ಗಿಸುವಂತಾಗಿತ್ತು.

ಪೊಲೀಸ್‌ ಸಿಬ್ಬಂದಿಯ ದುರ್ವರ್ತನೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಐವರನ್ನು ಅಮಾನತು ಮಾಡಿದ್ದು, ಈ ಸಂಬಂಧ ಸ್ಪಷ್ಟೀಕರಣ ನೀಡುವಂತೆ ವಾಡಿ ಪಿಎಸ್‌ಐ ತಿರುಮಲೇಶ್‌ ಅವರಿಗೂ ನೋಟಿಸ್‌ ನೀಡಿದ್ದಾರೆ. ವಾಡಿ ಪೊಲೀಸರು ಪದೇ ಪದೇ ಠಾಣೆಯಲ್ಲಿ ಇಸ್ಪೀಟ್ ಆಡುತ್ತಿದ್ದರು ಎಂದು ತಿಳಿದುಬಂದಿದೆ.

Tags:    

Similar News