ಬಿಬಿಎಂಪಿ ವ್ಯಾಪ್ತಿಯಲ್ಲಿ 2.19 ಲಕ್ಷ ಗಣೇಶ ವಿಗ್ರಹಗಳ ವಿಸರ್ಜನೆ

ಬಿಬಿಎಂಪಿ ವತಿಯಿಂದ ಗಣೇಶ ವಿಸರ್ಜನೆಗಾಗಿ 41 ಕೆರೆಗಳು ಮತ್ತು 489 ತಾತ್ಕಾಲಿಕ ಟ್ಯಾಂಕರ್‌ಗಳನ್ನು ಸಿದ್ಧಪಡಿಸಲಾಗಿತ್ತು.;

Update: 2025-08-29 07:45 GMT

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಕೆರೆಗಳು ಮತ್ತು ತಾತ್ಕಾಲಿಕ ಟ್ಯಾಂಕರ್‌ಗಳಲ್ಲಿ 2.19 ಲಕ್ಷಕ್ಕೂ ಹೆಚ್ಚು ಗಣೇಶ ವಿಗ್ರಹಗಳನ್ನು ವಿಸರ್ಜಿಸಲಾಗಿದೆ. ಬಿಬಿಎಂಪಿ ಈ ವಿಸರ್ಜನೆಗಾಗಿ 41 ಕೆರೆಗಳು ಮತ್ತು 489 ತಾತ್ಕಾಲಿಕ ಟ್ಯಾಂಕರ್‌ಗಳನ್ನು ಸಿದ್ಧಪಡಿಸಿತ್ತು.

ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು ಮಾತನಾಡಿ, ʻʻಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ವಿಗ್ರಹಗಳನ್ನು ವಿಸರ್ಜಿಸದಂತೆ ಮನವಿ ಮಾಡಿಕೊಂಡಿದ್ದರೂ ಜನರು ಅವುಗಳನ್ನು ತಂದಿದ್ದಾರೆ. ಇದು ಸೂಕ್ಷ್ಮ ವಿಷಯವಾದ್ದರಿಂದ ನಾವು ಅವುಗಳನ್ನು ಸಂಪೂರ್ಣ ತಡೆಯಲು ಸಾಧ್ಯವಿಲ್ಲ. ಆದರೆ ಅವುಗಳ ವಿವರಣೆಯನ್ನು ಪಡೆಯುತ್ತೇವೆ" ಎಂದು ಅವರು ಹೇಳಿದರು.

ಮದ್ಯ ಮಾರಾಟ ನಿಷೇಧ 

ಸಾಮೂಹಿಕ ಮೂರ್ತಿ ವಿಸರ್ಜನೆ ಮತ್ತು ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸುವ ಸಲುವಾಗಿ ಬೆಂಗಳೂರು ನಗರದಾದ್ಯಂತ ಅನೇಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಆದೇಶ ಹೊರಡಿಸಿದ್ದರು. 

Tags:    

Similar News