ಅತಿಥಿ ಉಪನ್ಯಾಸಕರ ಕೆಲಸದ ಅವಧಿ ಹೆಚ್ಚಿಸಿ ಆದೇಶ

ಸರ್ಕಾರಿ ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳು ಮತ್ತು ಜೂನಿಯರ್ ಪಾಲಿಟೆಕ್ನಿಕ್ ಕಾಲೇಜುಗಳ ಅತಿಥಿ ಉಪನ್ಯಾಸಕರ ಕೆಲಸದ ಸಮಯವನ್ನು ಹೆಚ್ಚಿಸಿ ಕರ್ನಾಟರ ಸರ್ಕಾರ ಆದೇಶ ಹೊರಡಿಸಿದೆ.

Update: 2024-08-13 10:31 GMT
ಅತಿಥಿ ಉಪನ್ಯಾಸಕರ ಕೆಲಸದ ಸಮಯವನ್ನು ಹೆಚ್ಚಿಸಿ ಕರ್ನಾಟರ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರಿ ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳು ಮತ್ತು ಜೂನಿಯರ್ ಪಾಲಿಟೆಕ್ನಿಕ್ ಕಾಲೇಜುಗಳ ಅತಿಥಿ ಉಪನ್ಯಾಸಕರ ಕೆಲಸದ ಅವಧಿಯನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈವರೆಗೆ 8 ಗಂಟೆ ಇದ್ದ ಕೆಲಸದ ಅವಧಿಯನ್ನು ಇದೀಗ 9 ಗಂಟೆಗೆ ಏರಿಕೆ ಮಾಡಲಾಗಿದೆ.

ಈ ಕುರಿತು ತಾಂತ್ರಿಕ ಶಿಕ್ಷಣ ಇಲಾಖೆ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ. ಮಾಸಿಕ ಗೌರವಧನ ನಿಗದಿ ಪಡಿಸಲಾಗಿದ್ದು, ತಕ್ಷಣವೇ ಜಾರಿಗೆ ಬರಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ. ವಾರದಲ್ಲಿ 8 ಗಂಟೆಯಿದ್ದ ಕೆಲಸದ ಅವಧಿಯನ್ನು 9ಗಂಟೆಗೆ ಏರಿಸಲಾಗಿದೆ. ಇದರಿಂದ ಸರ್ಕಾರಿ ಕಾಲೇಜುಗಳಿಗೆ 15 ಗಂಟೆ, ಪಾಲಿಟೆಕ್ನಿಕ್‌ಗಳಿಗೆ 17 ಗಂಟೆ ಮತ್ತು ತಾಂತ್ರಿಕ ಶಾಲೆಗಳಿಗೆ 14 ಗಂಟೆಗಳವರೆಗೆ ಗರಿಷ್ಠ ಸಮಯ ನಿಗದಿ ಮಾಡಲಾಗಿದೆ.

ಇದರೊಂದಿಗೆ ಇಲಾಖೆಯು ಕೆಲವು ಷರತ್ತುಗಳನ್ನು ಹಾಕಿದೆ. 2024-25ನೇ ಶೈಕ್ಷಣಿಕ ವರ್ಷಕ್ಕೆ 1,894 ಅತಿಥಿ ಉಪನ್ಯಾಸಕರನ್ನು ಮಾತ್ರ ನೇಮಕ ಮಾಡಿಕೊಳ್ಳಲಿದೆ. ಇದರಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ 294, ಪಾಲಿಟೆಕ್ನಿಕ್ ಮತ್ತು ಕಿರಿಯ ತಾಂತ್ರಿಕ ಶಾಲೆಗಳಿಗೆ 1,600 ಉಪ್ಯಾಸಕರ ನೇಮಕ ಮಾಡಲಿದೆ. ಅತಿಥಿ ಉಪನ್ಯಾಸಕರ ಗರಿಷ್ಠ ಕೆಲಸದ ಅವಧಿಯನ್ನು ಕಡ್ಡಾಯವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Tags:    

Similar News