ದರ್ಶನ್ ಬಂಧನ ಬೆನ್ನಲ್ಲೇ ಹಾಸ್ಯನಟ ಚಿಕ್ಕಣ್ಣಗೆ ನೋಟಿಸ್….
ಖ್ಯಾತ ಹಾಸ್ಯ ಕಲಾವಿದ ಚಿಕ್ಕಣ್ಣನಿಗೆ ಕಾಮಾಕ್ಷಿಪಾಳ್ಯ ಪೊಲೀಸರು ನೋಟಿಸ್ ನೀಡಿದ್ದಾರೆ.;
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟ ದರ್ಶನ್ ಮತ್ತು ಗ್ಯಾಗ್ ಅನ್ನು ಬಂಧಿಸಿದ್ದು, ಈ ಕೇಸ್‌ಗೆ ಸಂಬಂಧಿಸಿದಂತೆ ಇದೀಗ ಹಾಸ್ಯನಟ ಚಿಕ್ಕಣ್ಣನಿಗೂ ಇದೀಗ ಈ ಪ್ರಕರಣದಲ್ಲಿ ಖ್ಯಾತ ಹಾಸ್ಯ ಕಲಾವಿದ ಚಿಕ್ಕಣ್ಣನಿಗೆ ಕಾಮಾಕ್ಷಿಪಾಳ್ಯ ಪೊಲೀಸರು ನೋಟಿಸ್ ನೀಡಿದ್ದಾರೆ.
ನಟ ದರ್ಶನ್ ಶೆಡ್ಗೆ ಹೋಗುವ ಮೊದಲು ಖಾಸಗಿ ರೆಸ್ಟೋರೆಂಟ್ನಲ್ಲಿ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ, ನಿರ್ಮಾಪಕರು ಭಾಗಿಯಾಗಿದ್ದರು. ಪಾರ್ಟಿಯಿಂದ ಎದ್ದು ನಟ ದರ್ಶನ್ ಮನೆಗೆ ಹೊಗಬೇಕಿತ್ತು. ಆದರೆ ಅವರು ತೆರಳಿದ್ದು ಪಟ್ಟಣಗೆರೆ ಶೆಡ್ಗೆ. ಪಾರ್ಟಿ ಮುಗಿಸಿ ಬಂದು ಹಲ್ಲೆಗೈದು ರೇಣುಕಾಸ್ವಾಮಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಇದೀಗ ಕಾಮಾಕ್ಷಿಪಾಳ್ಯ ಪೊಲೀಸರು ಚಿಕ್ಕಣ್ಣನಿಗೆ ಮಾತ್ರವಲ್ಲದೇ ಪಾರ್ಟಿಯಲ್ಲಿ ಇದ್ದ ಎಲ್ಲರಿಗೂ ನೋಟಿಸ್ ನೀಡಿದ್ದಾರೆ.
ದರ್ಶನ್‌ನ ಮತ್ತೊಬ್ಬ ಸಹಚರ ಸೆರೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ನ ಮತ್ತೊಬ್ಬ ಸಹಚರ ಧನರಾಜ್ ಅಲಿಯಾಸ್ ರಾಜ ಎಂಬಾತನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಟ್ಟಣಗೆರೆಯ ಶೆಡ್‌ನಲ್ಲಿ ಅಂದು ರೇಣುಕಾಸ್ವಾಮಿ ಮೇಲೆ ನಡೆದ ಹಲ್ಲೆ ವೇಳೆ ಈ ಧನರಾಜ್ ಸಹ ದರ್ಶನ್ ಜತೆಗೆ ಇದ್ದ. ಈತನೂ ಸಹ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ. ರೇಣುಕಾಸ್ವಾಮಿ ಮೃತಪಟ್ಟ ಹಿನ್ನೆಲೆಯಲ್ಲಿ ಆತ ತಲೆಮರೆಸಿಕೊಂಡಿದ್ದ. ಈ ಧನರಾಜ್ ನಟ ದರ್ಶನ್‌ನ ಸಹಚರನಾಗಿದ್ದು, ಪವಿತ್ರಾ ಗೌಡ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.