ಮುಡಾ ಪಾದಯಾತ್ರೆ | ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಕಿವಿಮಾತು

ಯಾರೇ ಕಿಡಿಗೇಡಿಗಳು ನೋವು ಕೊಟ್ಟರು ಅದಕ್ಕೆ ರಿಯಾಕ್ಟ್ ಮಾಡಬೇಡಿ, ಮಂಡ್ಯ ಜಿಲ್ಲೆಯ ಕಾರ್ಯಕರ್ತರು ಸ್ವಾಭಿಮಾನಿಗಳು ಇದ್ದಾರೆ. ಸ್ವಾಭಿಮಾನಕ್ಕೆ ಧಕ್ಕೆ ಆಗಬಾರದು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

Update: 2024-08-08 13:43 GMT
ನಿಖಿಲ್‌ ಕುಮಾರಸ್ವಾಮಿ
Click the Play button to listen to article

ಯಾರೇ ಕಿಡಿಗೇಡಿಗಳು ಬಂದು ಏನೇ ಚೇಷ್ಟೆ ಮಾಡಿದರೂ ಕಾರ್ಯಕರ್ತರು ತಾಳ್ಮೆ ಕಳೆದುಕೊಳ್ಳಬಾರದು. ನಮ್ಮ ಉದ್ದೇಶ ಪಾದಯಾತ್ರೆ, ನಮ್ಮ ಹೋರಾಟ ಮೂಡಾ, ವಾಲ್ಮೀಕಿ ಹಗರಣಗಳ ವಿರುದ್ಧ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.

ಮುಡಾ ಹಗರಣ ವಿರುದ್ಧ ಬಿಜೆಪಿ- ಜೆಡಿಎಸ್‌ ಜಂಟಿ ಪಾದಯಾತ್ರೆ ವೇಳೆ ಬುಧವಾರ ಬಿಜೆಪಿ ಮುಖಂಡ ಪ್ರೀತಂ ಗೌಡ ಬೆಂಬಲಿಗರು ಜೆಡಿಎಸ್‌ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ ಘಟನೆ ನಡೆದಿತ್ತು. ಆ ಹಿನ್ನೆಲೆಯಲ್ಲಿ ಮಾಧ್ಯಮಗಳ ಮೂಲಕ ಕಾರ್ಯಕರ್ತರಿಗೆ ಮನವಿ ಮಾಡಿದ ನಿಖಿಲ್‌ ಕುಮಾರಸ್ವಾಮಿ, ನಿನ್ನೆಯ ದಿನ ಮಂಡ್ಯದಲ್ಲಿ ನಡೆದ ಘಟನೆಗೆ ಬೇಸರ ವ್ಯಕ್ತಪಡಿಸಿದರು.

"ನಿನ್ನೆ ನಡೆದ ಘಟನೆಯ ಬಗ್ಗೆ ನಮ್ಮ ನಾಯಕರು ಮತ್ತು ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಒಂದು ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಮಾಜಿ ಪ್ರಧಾನಿಗಳಾದ ದೇವೇಗೌಡರ ಸಂಬಂಧ ತುಂಬಾ ಅತ್ಯುತ್ತಮವಾಗಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಕಾರಣಕ್ಕೂ ಬೇರೆ ಬೇರೆ ರೀತಿಯ ಘಟನೆಗಳಿಗೆ ಅವಕಾಶ ಕೊಡಬಾರದು, ಕಾರ್ಯಕರ್ತರು ತಾಳ್ಮೆಯಿಂದ ಸಮಾಧಾನಕರವಾಗಿ ವರ್ತನೆ ಮಾಡಬೇಕು" ಎಂದು ಹೇಳಿದರು.

"ಯಾರೇ ಕಿಡಿಗೇಡಿಗಳು ನೋವು ಕೊಟ್ಟರೂ ಅದಕ್ಕೆ ರಿಯಾಕ್ಟ್ ಮಾಡಬೇಡಿ, ಮಂಡ್ಯ ಜಿಲ್ಲೆಯ ಕಾರ್ಯಕರ್ತರು ಸ್ವಾಭಿಮಾನಿಗಳು ಇದ್ದಾರೆ. ಸ್ವಾಭಿಮಾನಕ್ಕೆ ಧಕ್ಕೆ ಆಗಬಾರದು" ಎಂದು ನಿಖಿಲ್ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು. 

"ಕೋ ಆರ್ಡಿನೇಷನ್ ಕಮಿಟಿಯ ಎರಡು ಪಕ್ಷದ ಸದಸ್ಯರು ಈ ಘಟನೆಯ ಬಗ್ಗೆ ಕೇಂದ್ರಕ್ಕೆ ಮಾಹಿತಿ ಕೊಟ್ಟಿದ್ದಾರೆ. ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ಕಾದುನೋಡೊಣ" ಎಂದು ತಿಳಿಸಿದರು.

Tags:    

Similar News