ಕರ್ನಾಟಕಕ್ಕೆ ನಿಫಾ ಭೀತಿ | 41 ಸಂಪರ್ಕಿತರ ಪೈಕಿ ಒಬ್ಬರಿಗೆ ನಿಫಾ ಲಕ್ಷಣ ಪತ್ತೆ

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವಕ ಇತ್ತೀಚೆಗೆ ಕೇರಳದಲ್ಲಿ ನಿಫಾಗೆ ಬಲಿಯಾಗಿದ್ದು, ಕರ್ನಾಟಕದಲ್ಲೂ ನಿಫಾ ಭೀತಿ ಶುರುವಾಗಿದೆ. ಆತನ ಅಂತ್ಯಸಂಸ್ಕಾರಕ್ಕೆ ತೆರಳಿದ್ದ 41 ಸಂಪರ್ಕಿತರು ಪತ್ತೆ ಆಗಿದ್ದು, 41 ಜನರಿಗೂ ಕಡ್ಡಾಯ ಕ್ವಾರಂಟೈನ್ ಹಾಗೂ ಐಸೋಲೇಷನ್​ಗೆ ಆರೋಗ್ಯ ಇಲಾಖೆ ಒಳಪಡಿಸಿದೆ.

Update: 2024-09-20 10:38 GMT
ನಿಫಾ ವೈರಸ್‌
Click the Play button to listen to article

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವಕನೊಬ್ಬ ಇತ್ತೀಚೆಗೆ ಕೇರಳದಲ್ಲಿ ನಿಫಾಗೆ ಬಲಿಯಾಗಿದ್ದು, ಕರ್ನಾಟಕದಲ್ಲಿ ಕೂಡ ನಿಫಾ ಭೀತಿ ಶುರುವಾಗಿದೆ. ಆತನ ಅಂತ್ಯಸಂಸ್ಕಾರಕ್ಕೆ ತೆರಳಿದ್ದ 41 ಸಂಪರ್ಕಿತರನ್ನು ಪತ್ತೆ ಮಾಡಲಾಗಿದ್ದು, ಆರೋಗ್ಯ ಇಲಾಖೆ 41 ಜನರನ್ನೂ ಕಡ್ಡಾಯ ಕ್ವಾರಂಟೈನ್ ಹಾಗೂ ಐಸೋಲೇಷನ್​ಗೆ ಒಳಪಡಿಸಿದೆ.

ಎಲ್ಲಾ ಸಂಪರ್ಕಿತರ ಮೇಲೆ ಆರೋಗ್ಯಾಧಿಕಾರಿಗಳು ನಿಗಾ ವಹಿಸಿದ್ದು, 41 ಸಂಪರ್ಕಿತರ ಪೈಕಿ ಒಬ್ಬರಲ್ಲಿ ನಿಫಾ ಗುಣಲಕ್ಷಣಗಳು ಕಂಡುಬಂದಿವೆ. ಗುಣಲಕ್ಷಣಗಳಿರುವ ವ್ಯಕ್ತಿಯ ರಕ್ತ ಮತ್ತು ಸೀರಂ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು, ಸದ್ಯ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ. ಸದ್ಯ ರಾಜ್ಯದಲ್ಲಿ ಯಾವ ನಿಫಾ ಕೇಸ್ ಕೂಡ ದಾಖಲಾಗಿಲ್ಲ.

ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ 23 ವರ್ಷದ ಯುವಕ, ಕೇರಳದಲ್ಲಿ ಶಂಕಿತ ನಿಫಾಗೆ ಬಲಿಯಾಗಿದ್ದ. ಕೇರಳದ ಮಲಪುರಂ ಮೂಲದ ವಿದ್ಯಾರ್ಥಿ ಕಾಲಿಗೆ ಪೆಟ್ಟಾಗಿತ್ತು. ಹೀಗಾಗಿ ಆತ ಆಗಸ್ಟ್ 25 ರಂದು ತನ್ನೂರಿಗೆ ತೆರಳಿದ್ದ. ಸೆ.5 ರಂದು ಯುವಕನಿಗೆ ಜ್ವರ ಕಾಣಿಸಿಕೊಂಡಿತ್ತು. ಹತ್ತಿರದ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದರೂ ಗುಣವಾಗಿರಲ್ಲ. ಸೆ.6 ರಂದು ಯುವಕನಿಗೆ ವಿಪರೀತ ವಾಂತಿ ಶುರುವಾಗಿತ್ತು. ಆರೋಗ್ಯ ಬಿಗಡಾಯಿಸಿದ ಕಾರಣ ಸೆ.7 ರಂದು ಆತನನ್ನು ಕೇರಳದ NES ಪ್ರೈವೇಟ್ ಮೆಡಿಕಲ್ ಕಾಲೇಜಿನ ಐಸಿಯುಗೆ ದಾಖಲಿಸಲಾಗಿತ್ತು. ‌

ಅಕ್ಯೂಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್​ ನಿಂದ ಬಳಲುತ್ತಿದ್ದ ಯುವಕ ಸೆ. 8 ರಂದು ಕೊನೆಯುಸಿರೆಳೆದಿದ್ದ. ಮೃತ ಯುವಕನ ಬ್ಲಡ್ ಹಾಗೂ ಸೀರಂ ಸ್ಯಾಂಪಲ್‌ನಲ್ಲಿ ನಿಫಾ ಪಾಸಿಟಿವ್ ಬಂದಿತ್ತು. ಅತ್ತ ವಿದ್ಯಾರ್ಥಿ ಸಾವನ್ನಪ್ಪಿದ್ದಂತೆ ಇತ್ತ ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಮಹತ್ವದ ಸಭೆ ಮಾಡಲಾಗಿತ್ತು. ಕರ್ನಾಟಕದಲ್ಲಿ ನಿಫಾ ಕುರಿತು ಕಟ್ಟೆಚ್ಚರ ವಹಿಸಲು ಸೂಚಿಸಿಲಾಗಿತ್ತು.

Tags:    

Similar News