ನೇಹಾ ಹತ್ಯೆ ಪ್ರಕರಣ | ಹುಬ್ಬಳ್ಳಿಯಲ್ಲಿ ಅಂಜುಮನ್ ಇಸ್ಲಾಂ ಬಂದ್, ಪ್ರತಿಭಟನೆ
By : The Federal
Update: 2024-04-22 08:51 GMT
ಹುಬ್ಬಳ್ಳಿಯ ಪ್ರತಿಷ್ಠಿತ ಬಿವಿಬಿ ಕಾಲೇಜಿನ ಆವರಣದಲ್ಲಿ ನಡೆದ ನೇಹಾ ಹಿರೇಮಠ ಭೀಕರ ಹತ್ಯೆ ಖಂಡಿಸಿ, ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿ ಧಾರವಾಡದ ಅಂಜುಮನ್ ಇಸ್ಲಾಂ ಸಂಸ್ಥೆ ಕರೆ ನೀಡಿದ್ದ ಹುಬ್ಬಳ್ಳಿ-ಧಾರವಾಡ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆಯಿಂದಲೇ ನಗರದ ಬಿಆರ್‌ಟಿಎಸ್ ನಿಲ್ದಾಣ ಪ್ರದೇಶ ಸುತ್ತ, ನಗರದ ವಿವಿಧೆಡೆಗಳಲ್ಲಿ ಬಹುತೇಕ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿ, ಮಳಿಗೆಗಳನ್ನು ಬಂದ್ ಮಾಡಿದ್ದಾರೆ. ಅಂಗಡಿಯ ಬಾಗಿಲಿಗೆ ನೇಹಾ ಹಿರೇಮಠ ಭಾವಚಿತ್ರ ಹಾಕಿ ನೇಹಾ ಹಿರೇಮಠಗೆ ನ್ಯಾಯ ಸಿಗಲಿ ಎಂದು ಒತ್ತಾಯಿಸಿದ್ದಾರೆ. ಮುಸ್ಲಿಮ್ ಸಮಾಜದ ಅಂಗಡಿಗಳು ಇಂದು ಮಧ್ಯಾಹ್ನ 3 ಘಂಟೆಯವರೆಗೆ ಬಂದ ಆಗಲಿವೆ.
ಅಂಜುಮನ್ ಸಂಸ್ಥೆಯವರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಂಜುಮನ್ ಸಂಸ್ಥೆ ಆವರಣದಿಂದ ಮೆರವಣಿಗೆ ಹೊರಟಿತು. ಪ್ರತಿಭಟನಾಕಾರರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೆರವಣಿಗೆಯಲ್ಲಿ ಸಾಗಿದರು.