ರಾಜಭವನ ಇನ್ನು ಮುಂದೆ ‘ಲೋಕಭವನ’; ಹೆಸರು ಬದಲಾವಣೆ ಮಾಡಿ ಕೇಂದ್ರ ಗೃಹ ಇಲಾಖೆ ಆದೇಶ

ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್‌. ಪ್ರಭುಶಂಕರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಧಿಕೃತ ಪತ್ರ ಬರೆದು, ಹೆಸರು ಬದಲಾವಣೆಯ ಆದೇಶವನ್ನು ತಕ್ಷಣದಿಂದ ಜಾರಿಗೆ ತರಲು ಸೂಚಿಸಿದ್ದಾರೆ.

Update: 2025-12-03 08:13 GMT

ಕೇಂದ್ರ ಗೃಹ ಸಚಿವಾಲಯದ ತೀರ್ಮಾನದಂತೆ ದೇಶದಾದ್ಯಂತ ಇರುವ ರಾಜಭವನಗಳ ಹೆಸರನ್ನು ಅಧಿಕೃತವಾಗಿ ‘ಲೋಕಭವನ’ ಎಂದು ಮರುನಾಮಕರಣ ಮಾಡಲಾಗಿದೆ.

ಕೇಂದ್ರದ ಆದೇಶವನ್ನು ರಾಜ್ಯಗಳಿಗೆ ತಲುಪಿಸಿದ್ದು, ರಾಜ್ಯಪಾಲರ ಕಚೇರಿಗಳು ಇನ್ನು ಮುಂದೆ ‘ಲೋಕಭವನ’ ಹೆಸರಿನಲ್ಲಿ ಕಾರ್ಯನಿರ್ವಹಿಸಲಿವೆ. ಕೇಂದ್ರ ಗೃಹ ಇಲಾಖೆಯ ಆದೇಶದನ್ವಯ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್‌. ಪ್ರಭುಶಂಕರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಧಿಕೃತ ಪತ್ರ ಬರೆದು, ಹೆಸರು ಬದಲಾವಣೆಯ ಆದೇಶವನ್ನು ತಕ್ಷಣದಿಂದ ಜಾರಿಗೆ ತರಲು ಸೂಚಿಸಿದ್ದಾರೆ.

ಮುಂದಿನ ದಿನಗಳಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳು, ಸರ್ಕಾರಿ ಆದೇಶಗಳು, ಅಧಿಕೃತ ಪತ್ರ ವ್ಯವಹಾರಗಳು, ವೆಬ್ಸೈಟ್ಗಳು ಹಾಗೂ ಫಲಕಗಳಲ್ಲಿ ‘ರಾಜಭವನ’ ಬದಲು ‘ಲೋಕಭವನ’ ಎಂಬ ಹೆಸರು ಬಳಸಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ.

ರಾಜಭವನ ಎಂಬ ಹೆಸರು ದೀರ್ಘಕಾಲದಿಂದ ರಾಜ್ಯಪಾಲರ ಅಧಿಕೃತ ನಿವಾಸ ಮತ್ತು ಕಚೇರಿಯನ್ನು ಸೂಚಿಸುತ್ತಿದ್ದರೂ ಕೇಂದ್ರ ಗೃಹ ಇಲಾಖೆಯ ಹೊಸ ನಿರ್ಧಾರದಿಂದಾಗಿ ಈಗ ಆಡಳಿತಾತ್ಮಕ ದಾಖಲೆಗಳಿಂದ ಹಿಡಿದು ಸಾರ್ವಜನಿಕ ಹೆಸರಿನ ಫಲಕಗಳವರೆಗೂ ಎಲ್ಲವೂ ಬದಲಾಗಲಿವೆ.


ರಾಜಭವನಗಳ ಹೆಸರು ಬದಲಾವಣೆ ನಿರ್ಧಾರದ ಹಿನ್ನೆಲೆ ಹಾಗೂ ಕಾರಣಗಳ ಬಗ್ಗೆ ಕೇಂದ್ರದಿಂದ ಹೆಚ್ಚಿನ ವಿವರಣೆ ಲಭ್ಯವಾಗಿಲ್ಲ. ಆದರೆ, ಹೊಸ ಹೆಸರಿನ ಜಾರಿಯೊಂದಿಗೆ ರಾಜ್ಯಪಾಲರ ಕಚೇರಿ ದಾಖಲಾತಿಗಳ ನವೀಕರಣ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Tags:    

Similar News