ನಂದಿನಿ ಬೂತ್‌ಗಳಲ್ಲಿ ಬೇರೆ ಉತ್ಪನ್ನಗಳ ಮಾರಾಟಕ್ಕೆ ಕೆಎಂಎಫ್‌ ಬ್ರೇಕ್

ಹಾಲಿನ ಬೂತ್‌ಗಳಲ್ಲಿ ನಂದಿನಿ ಹೊರತುಪಡಿಸಿ ಬೇರೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಾಲೀಕರಿಗೆ ಕೆಎಂಎಫ್ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ.

Update: 2025-12-03 04:31 GMT

ಎಐ ಚಿತ್ರ 

Click the Play button to listen to article

ನಂದಿನಿ ಬೂತ್‌ಗಳಲ್ಲಿ ಇತರ ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಲು ಕೆಎಂಎಫ್ ಮಹತ್ವದ ನಿರ್ಧಾರ ಕೈಗೊಂಡಿದೆ.

ಹಾಲಿನ ಬೂತ್‌ಗಳಲ್ಲಿ ನಂದಿನಿ ಹೊರತುಪಡಿಸಿ ಬೇರೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಾಲೀಕರಿಗೆ ಕೆಎಂಎಫ್ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ. 

ಈ ಕುರಿತು ಮಾತನಾಡಿರುವ ಕೆಎಂಎಫ್ ವ್ಯವಸ್ಥಾಪಕ‌ ನಿರ್ದೇಶಕ ಶಿವಸ್ವಾಮಿ ಅವರು, ಒಂದು ವೇಳೆ ಆದೇಶ ಮೀರಿ ಇತರ ಉತ್ಪನ್ನಗಳ ಮಾರಾಟ ಮಾಡುವುದು ತಿಳಿದುಬಂದಲ್ಲಿ, ಅಂತಹ ಬೂತ್‌ಗಳ ಮಾಲೀಕರ ಲೈಸೆನ್ಸ್ ರದ್ದು ಮಾಡುವುದಾಗಿ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ನಂದಿನಿ ಬೂತ್‌ಗೆ ಅನುಮತಿ ಪಡೆದ ಕೆಲ ಮಾಲೀಕರು, ನಂದಿನಿ ಉತ್ಪನ್ನಗಳ ಜೊತೆಗೆ ಇತರ ಬ್ರ್ಯಾಂಡ್‌ಗಳ ತಿನಿಸು, ತಿಂಡಿ ಹಾಗೂ ನೀರಿನ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದರು. ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ನೋಟಿಸ್ ನೀಡಲಾಗುವುದು. ನೋಟಿಸ್‌ ನಿರ್ಲಕ್ಷಿಸಿದಲ್ಲಿ ಲೈಸೆನ್ಸ್ ರದ್ದು ಮಾಡಲು ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ.

ರಾಜ್ಯದ ಹೆಮ್ಮೆಯ ನಂದಿನಿ ಬ್ರ್ಯಾಂಡ್‌ನ ಹಾಲು, ಮೊಸರು, ಮತ್ತು ತುಪ್ಪದಂತಹ ಉತ್ಪನ್ನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿವೆ.

ತಿರುಪತಿ ಲಡ್ಡು ತಯಾರಿಕೆಯಲ್ಲಿಯೂ ನಂದಿನಿ ತುಪ್ಪವನ್ನೇ ಬಳಕೆ ಮಾಡಲಾಗುತ್ತದೆ. ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ 'ನಂದಿನಿ' ತುಪ್ಪ ಈಗ  ಸೌದಿ ಅರೇಬಿಯಾ, ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ರಫ್ತು ಆಗುತ್ತಿದೆ. 

Tags:    

Similar News