Assembly session | ಅಧಿಕಾರಿಗಳ ನಿರ್ಲಕ್ಷ್ಯ, ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬ

ಬಡವರು, ಅನಾರೋಗ್ಯಕ್ಕೊಳಗಾದವರು, ಹೊಟ್ಟೆಪಾಡಿಗಾಗಿ ನಗರಕ್ಕೆ ಬಂದವರು ಊರಿಗೆ ತೆರಳಿ ಕಾರ್ಡ್ ಪಡೆಯಲು ಅನೇಕ ದಿನ ಓಡಾಡಬೇಕಾಗುತ್ತಿದೆ ಎಂದು ಗೋಪಾಲಯ್ಯ ಆಕ್ರೋಶ ವ್ಯಕ್ತಪಡಿಸಿದರು.;

Update: 2025-08-14 08:48 GMT

ವಿಧಾನ ಸೌಧ

ಪಡಿತರ ಕಾರ್ಡ್ ವಿತರಣೆಯಲ್ಲಿ ವ್ಯತ್ಯಾಸ ಉಂಟಾಗುತ್ತಿದ್ದು, ಅನಾರೋಗ್ಯಕ್ಕೊಳಗಾದವರಿಗೆ ಕಾರ್ಡ್ ನೀಡುವುದಿಲ್ಲ, ಅಧಿಕಾರಿಗಳು ಫೋನ್ ಕರೆಗಳಿಗೆ ಸ್ಪಂದಿಸುತ್ತಿಲ್ಲ ಹಾಗಾದರೆ ಸಮಸ್ಯೆಯನ್ನು ಸರ್ಕಾರಕ್ಕೆ ಹೇಗೆ ತಲುಪಿಸುವುದು ಹೇಗೆ ಎಂದು ಶಾಸಕ ಭರತ್ ಶೆಟ್ಟಿ ಸರ್ಕಾರವನ್ನು ಪ್ರಶ್ನಿಸಿದರು.

ಅವರು ಗುರುವಾರ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಪಡಿತರ ಕಾರ್ಡ್ ವಿತರಣೆಯಲ್ಲಿ ನಡೆಯುತ್ತಿರುವ ಅನಿಯಮಿತತೆ  ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

ಶಾಸಕ ಗೋಪಾಲಯ್ಯ ಸಹ ಭರತ್ ಶೆಟ್ಟಿಗೆ ಬೆಂಬಲ ವ್ಯಕ್ತಪಡಿಸಿದ್ದು, ʻʻನಾನು ಹಿಂದೆ ಆಹಾರ ಸಚಿವನಾಗಿದ್ದೆ. ಇಂತಹ ಸ್ಪಂದನೆ ಕೊರತೆಯಿರುವ ಅಧಿಕಾರಿಗಳನ್ನು ಯಾಕೆ ಇಟ್ಟುಕೊಳ್ಳುತ್ತಿದ್ದೀರಿ?" ಎಂದು ಅವರು ಸಚಿವ ಕೆ.ಹೆಚ್. ಮುನಿಯಪ್ಪರನ್ನು ಪ್ರಶ್ನಿಸಿದರು.

ಬಡವರು, ಅನಾರೋಗ್ಯಕ್ಕೊಳಗಾದವರು, ಹೊಟ್ಟೆಪಾಡಿಗಾಗಿ ನಗರಕ್ಕೆ ಬಂದವರು ಊರಿಗೆ ತೆರಳಿ ಕಾರ್ಡ್ ಪಡೆಯಲು ಅನೇಕ ದಿನ ಓಡಾಡಬೇಕಾಗುತ್ತಿದೆ ಎಂದು ಗೋಪಾಲಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ, ``ನಿಮ್ಮ ಮಾತು ಸರಿಯೇ. ಇದಕ್ಕಾಗಿ ಶೀಘ್ರದಲ್ಲೇ ಪೋರ್ಟಲ್ ನಿರ್ಮಿಸುತ್ತೇವೆ. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ವಿತರಣೆಗೆ ನಿಗದಿತ ಸಮಯ ನಿಗದಿ ಮಾಡುತ್ತೇವೆ. ಈ ಕೆಲಸವನ್ನು ಮೊದಲ ಆದ್ಯತೆಯಲ್ಲಿ ಕೈಗೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು. 

Tags:    

Similar News