ನಮ್ಮ ಮೆಟ್ರೋ | ಯುವಕನ ಕಿಡಿಗೇಡಿತನ: 10 ನಿಮಿಷ ಮೆಟ್ರೋ ಸೇವೆ ಸ್ಥಗಿತ

Update: 2024-09-12 12:49 GMT

ಯುವಕನೊಬ್ಬ ಮೋಜಿಗಾಗಿ ತುರ್ತು ಟ್ರಿಪ್ ಸಿಸ್ಟಮ್ ಗುಂಡಿಯನ್ನು ಒತ್ತಿದ್ದರಿಂದ, ನೇರಳೆ ಮಾರ್ಗದ ಮೆಟ್ರೋ ಸೇವೆಗಳು 10 ನಿಮಿಷ ಕಾಲ ಸ್ಥಗಿತಗೊಂಡಿದ್ದವು.

ಎಂ.ಜಿ. ರೋಡ್ ನಿಲ್ದಾಣದಲ್ಲಿ ಹೇಮಂತ್ ಕುಮಾರ್(21) ಎಂಬಾತ ಈ ಕೃತ್ಯ ಎಸಗಿದ್ದು, ಆತನಿಗೆ ಮೆಟ್ರೋ ಅಧಿಕಾರಿಗಳು 5,000 ರೂ. ದಂಡ ವಿಧಿಸಿದರು. ಆತನ ಬಳಿ ಹಣವಿದ್ದರಿಂದ, ಪೋಷಕರು ಕಬ್ಬನ್ ಪಾರ್ಕ್ ಠಾಣೆಗೆ ಆಗಮಿಸಿ ಹಣ ಪಾವತಿಸಿದ್ದಾರೆ.

ಕಿಡಿಗೇಡಿತನ

ಎಂ.ಜಿ. ರೋಡ್ ನಿಲ್ದಾಣದಲ್ಲಿ ಕುಮಾರ್, ಗುಂಡಿಯನ್ನು ಒತ್ತಿದ್ದು ರೈಲು ಸಂಚಾರ ಸ್ಥಗಿತಗೊಂಡಿತು. ಆನಂತರ ರೈಲು ಸೇವೆ ಆರಂಭಗೊಂಡಿದ್ದು, ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಇಳಿದಿದ್ದಾನೆ.ಮೆಟ್ರೋ ಸಿಬ್ಬಂದಿ ಸಿಸಿ ಟಿವಿ ಮೂಲಕ ಆತನನ್ನು ಗುರುತಿಸಿದ್ದು, ಪೋಷಕರು ಬರುವವರೆಗೂ ಹಿಡಿದಿಟ್ಟುಕೊಂಡಿದ್ದರು. ಮೋಜಿಗಾಗಿ ಗುಂಡಿಯನ್ನು ಒತ್ತಿದೆ. ದಂಡ ಕಟ್ಟಲು ತನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಾನೆ. 

ʻತುರ್ತು ಪರಿಸ್ಥಿತಿಯಲ್ಲಿ ಮಾತ್ರ ತುರ್ತು ಟ್ರಿಪ್ ವ್ಯವಸ್ಥೆ ಬಳಸಬೇಕು. ಏಕೆಂದರೆ, ಇದರಿಂದ ಹಳಿಗಳಿಗೆ ವಿದ್ಯುತ್ ಪೂರೈಕೆ ನಿಂತು, ರೈಲುಗಳ ಚಲನೆಗೆ ಅಡ್ಡಿಯುಂಟಾಗುತ್ತದೆ,ʼ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ಹೇಳಿದರು.

Tags:    

Similar News