Dharmasthala Mass Burial Allegation|ನೇತ್ರಾವತಿ ಸ್ನಾನಘಟ್ಟ ಪ್ರದೇಶದಲ್ಲಿ ಶವಗಳಿಗೆ ಹುಡುಕುತ್ತಿರುವ ಎಸ್‌ಐಟಿ
ಪೌರಕಾರ್ಮಿಕರೊಬ್ಬರು ನ್ಯಾಯಾಲಯಕ್ಕೆ ನೀಡಿದ ಮಾಹಿತಿಯಂತೆ ನೂರಾರು ಶವಗಳನ್ನು ಹೂತಿಟ್ಟ ಬಗ್ಗೆ ತನಿಖೆಗೆ ಸರ್ಕಾರ ರಚಿಸಿರುವ ಎಸ್‌ಐಟಿ ಧರ್ಮಸ್ಥಳ ಸ್ನಾನಘಟ್ಟ ಪ್ರದೇಶದಲ್ಲಿ ಅದಿಕೃತವಾಗಿ ಶೋಧನೆ ಆರಂಭಿಸಿದೆ.
ಆದರೆ, ವಿಪರೀತ ಮಳೆಯಿಂದಾಗಿ ನೀರಿನ ಒರತೆಯಿಂದಾಗಿ ಶೋಧನೆ ಕಾರ್ಯಕ್ಕೆ ಅಡ್ಡಿಯಾಗಿದೆ. ಅಸ್ಥಿಪಂಜರವೊಂದು ಸಿಕ್ಕಿದೆ ಎಂಬ ಊಹಾಪೋಹವೂ ಕೇಳಿಬಂದಿದೆ. ಆದರೆ ಎಸ್‌ಐಟಿ ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ.
ಧರ್ಮಸ್ಥಳ ಪ್ರಕರಣ; ಮೃತದೇಹ ಪತ್ತೆಗೆ SITಯಿಂದ ಅಗೆತ ಕಾರ್ಯ ಆರಂಭ
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹಳೆಯ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ, ವಿಶೇಷ ತನಿಖಾ ದಳವು (SIT) ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಹೂಳಲಾಗಿರುವ ಮೃತದೇಹಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ, ಸಾಕ್ಷಿದಾರರು ತೋರಿಸಿದ ಜಾಗದಲ್ಲಿ ಅಗೆತದ ಕಾರ್ಯವನ್ನು SIT ಆರಂಭಿಸಿದೆ.
ಈ ಪ್ರಕರಣವು ದೀರ್ಘಕಾಲದಿಂದ ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದ್ದು, ಹಲವಾರು ಅನುಮಾನಗಳನ್ನು ಹುಟ್ಟುಹಾಕಿತ್ತು. ಇದೀಗ SIT ನೇತೃತ್ವದಲ್ಲಿ ಮೃತದೇಹಗಳನ್ನು ಪತ್ತೆಹಚ್ಚುವ ನಿರ್ಧಾರವು ಪ್ರಕರಣದ ಸತ್ಯಾಂಶವನ್ನು ಹೊರತರಲು ಮಹತ್ವದ ಹೆಜ್ಜೆಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.