ಧರ್ಮಸ್ಥಳ ಪ್ರಕರಣ; ಮೃತದೇಹ ಪತ್ತೆಗೆ SITಯಿಂದ ಅಗೆತ ಕಾರ್ಯ... ... Dharmasthala Mass Burial Allegation|ನೇತ್ರಾವತಿ ಸ್ನಾನಘಟ್ಟ ಪ್ರದೇಶದಲ್ಲಿ ಶವಗಳಿಗೆ ಹುಡುಕುತ್ತಿರುವ ಎಸ್‌ಐಟಿ

ಧರ್ಮಸ್ಥಳ ಪ್ರಕರಣ; ಮೃತದೇಹ ಪತ್ತೆಗೆ SITಯಿಂದ ಅಗೆತ ಕಾರ್ಯ ಆರಂಭ

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹಳೆಯ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ, ವಿಶೇಷ ತನಿಖಾ ದಳವು (SIT) ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಹೂಳಲಾಗಿರುವ ಮೃತದೇಹಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ, ಸಾಕ್ಷಿದಾರರು ತೋರಿಸಿದ ಜಾಗದಲ್ಲಿ ಅಗೆತದ ಕಾರ್ಯವನ್ನು SIT ಆರಂಭಿಸಿದೆ.

ಈ ಪ್ರಕರಣವು ದೀರ್ಘಕಾಲದಿಂದ ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದ್ದು, ಹಲವಾರು ಅನುಮಾನಗಳನ್ನು ಹುಟ್ಟುಹಾಕಿತ್ತು. ಇದೀಗ SIT ನೇತೃತ್ವದಲ್ಲಿ ಮೃತದೇಹಗಳನ್ನು ಪತ್ತೆಹಚ್ಚುವ ನಿರ್ಧಾರವು ಪ್ರಕರಣದ ಸತ್ಯಾಂಶವನ್ನು ಹೊರತರಲು ಮಹತ್ವದ ಹೆಜ್ಜೆಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Update: 2025-07-29 10:17 GMT

Linked news