Loksabha Election 2024 | ರಾಜ್ಯದಲ್ಲಿ ರಂಗೇರಿದ ಚುನಾವಣೆ: ಮೊದಲ ಹಂತದ ಕಣದಲ್ಲಿ ಎಲ್ಲೆಡೆ ನೇರ ಹಣಾಹಣಿ

Update: 2024-04-12 06:32 GMT

ದೇಶಾದ್ಯಂತ ಒಟ್ಟು ಏಳು ಹಂತದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಏ.19ರಂದು ಮೊದಲ ಹಂತದ ಚುನಾವಣೆ ಆರಂಭವಾಗಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಇನ್ನು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.26ರಂದು ನಡೆಯಲಿದೆ. ರಾಜ್ಯದ ದಕ್ಷಿಣ ಭಾಗದ ಹಳೇ ಮೈಸೂರು ಮತ್ತು ಕರಾವಳಿ ಭಾಗದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಬಹುತೇಕ ಎಲ್ಲಾ ಕಡೆ ಕಾಂಗ್ರೆಸ್‌ ವರ್ಸಸ್‌ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಕಾಂಗ್ರೆಸ್‌ ಎಲ್ಲಾ 14 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ತವರು ಜಿಲ್ಲೆಗಳಾದ ರಾಮನಗರ ಮತ್ತು ಮೈಸೂರು ಈ ಮೊದಲ ಹಂತದ ಚುನಾವಣೆಯಲ್ಲೇ ಮತದಾನ ಮಾಡಲಿವೆ.

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಯ ಎನ್‌ಡಿಎ ಒಕ್ಕೂಟ ಕೂಡ ಎಲ್ಲಾ 14 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆ ಪೈಕಿ ಮೂರು ಕಡೆ ಜೆಡಿಎಸ್‌ ಕಣಕ್ಕಿಳಿದಿದ್ದರೆ, ಉಳಿದ 11 ಕ್ಷೇತ್ರಗಳಲ್ಲಿ ಕೇಸರಿ ಪಡೆಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್‌ ವರಿಷ್ಠ ಎಚ್‌ ಡಿ ದೇವೇಗೌಡ, ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ತವರು ಜಿಲ್ಲೆಗಳು ಮತ್ತು ಪ್ರಭಾವಿ ಕ್ಷೇತ್ರಗಳು ಕೂಡ ಈ ಹಂತದಲ್ಲೇ ಚುನಾವಣೆ ಎದುರಿಸುತ್ತಿವೆ. ಹಾಗೇ ಬಿಜೆಪಿಯ ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ಮತ್ತಿತರ ನಾಯಕರ ಪ್ರಭಾವವಿರುವ ಪ್ರದೇಶಗಳಲ್ಲೂ ಕೂಡ ಈ ಮೊದಲ ಹಂತದಲ್ಲೇ ಚುನಾವಣೆ ನಡೆಯಲಿದೆ. 

ಕಳೆದ ಲೋಕಸಭಾ ಚುನಾವಣೆಯಲ್ಲಿ ಈ 14 ಕ್ಷೇತ್ರಗಳ ಪೈಕಿ ಹಾಸನ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಕ್ರಮವಾಗಿ ಜೆಡಿಎಸ್‌ನ ಪ್ರಜ್ವಲ್‌ ರೇವಣ್ಣ ಹಾಗೂ ಕಾಂಗ್ರೆಸ್‌ನ ಡಿ ಕೆ ಸುರೇಶ್‌ ಜಯಗಳಿದ್ದರು. ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಸುಮಲತಾ ಅಂಬರೀಶ್‌ ಅವರು ಜಯ ಗಳಿಸಿದ್ದರು. ಉಳಿದ 11 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿತ್ತು.

ಈ ಬಾರಿ ಈ ಕ್ಷೇತ್ರಗಳಲ್ಲಿ ಯಾವ್ಯಾವ ಪಕ್ಷದಿಂದ ಯಾರು-ಯಾರು ಸ್ಪರ್ಧೆ ಮಾಡುತ್ತಿದ್ದಾರೆ ಎನ್ನುವ ವಿವರ ಇಲ್ಲಿದೆ...‌

ಕ್ಷೇತ್ರಗಳು‌ಎನ್‌ಡಿಎ (ಬಿಜೆಪಿ-ಜೆಡಿಎಸ್)ಕಾಂಗ್ರೆಸ್

1. ಉಡುಪಿ-ಚಿಕ್ಕಮಗಳೂರು 

ಕೋಟ ಶ್ರೀನಿವಾಸ್ ಪೂಜಾರಿ 

ಜಯಪ್ರಕಾಶ್ ಹೆಗ್ಡೆ

2. ಹಾಸನ 

ಪ್ರಜ್ವಲ್ ರೇವಣ್ಣ (ಜೆಡಿಎಸ್)

ಶ್ರೇಯಸ್ ಪಟೇಲ್

3. ದಕ್ಷಿಣ ಕನ್ನಡ

ಕ್ಯಾ. ಬ್ರಿಜೇಶ್ ಚೌಟಾ 

ಆರ್.ಪದ್ಮರಾಜ್

4. ಚಿತ್ರದುರ್ಗ (SC)

ಗೋವಿಂದ ಕಾರಜೋಳ 

ಬಿ.ಎನ್ ಚಂದ್ರಪ್ಪ

‌5. ತುಮಕೂರು

ವಿ ಸೋಮಣ್ಣ

ಎಸ್.ಪಿ. ಮುದ್ದಹನುಮೇಗೌಡ

6. ಮಂಡ್ಯ

ಎಚ್.ಡಿ ಕುಮಾರಸ್ವಾಮಿ (ಜೆಡಿಎಸ್)

ಸ್ಟಾರ್ ಚಂದ್ರು

7. ಮೈಸೂರು

ಯದುವೀರ್ ಒಡೆಯರ್ 

ಎಂ. ಲಕ್ಷ್ಮಣ್

8. ಚಾಮರಾಜನಗರ (SC)

ಎಸ್. ಬಾಲರಾಜ್

ಸುನೀಲ್ ಬೋಸ್

9. ಬೆಂಗಳೂರು ಗ್ರಾಮಾಂತರ

ಡಾ ಸಿ.ಎನ್ ಮಂಜುನಾಥ್ 

ಡಿ.ಕೆ ಸುರೇಶ್


10. ಬೆಂಗಳೂರು ಉತ್ತರ 

ಶೋಭಾ ಕರಂದ್ಲಾಜೆ 

ಎಂ.ವಿ.ರಾಜೀವ್ ಗೌಡ

11. ಬೆಂಗಳೂರು ಕೇಂದ್ರ

ಪಿ.ಸಿ ಮೋಹನ್ 

ಮನ್ಸೂರ್ ಅಲಿಖಾನ್

12. ಬೆಂಗಳೂರು ದಕ್ಷಿಣ

ತೇಜಸ್ವಿ ಸೂರ್ಯ 

ಸೌಮ್ಯಾ ರೆಡ್ಡಿ

13. ಚಿಕ್ಕಬಳ್ಳಾಪುರ

ಡಾ.ಕೆ ಸುಧಾಕರ್ 

ರಕ್ಷಾ ರಾಮಯ್ಯ

14. ಕೋಲಾರ (SC) 

ಮಲ್ಲೇಶ್ ಬಾಬು (ಜೆಡಿಸ)

ಕೆ.ವಿ ಗೌತಮ್


Tags:    

Similar News