Mysore MUDA Case | ಲೋಕಾಯುಕ್ತ ಸರ್ಕಾರದ ಕೈಗೊಂಬೆ: ಎಚ್. ವಿಶ್ವನಾಥ್

ಇಡೀ ದೇಶದಲ್ಲೇ ಇಂತಹ ದೊಡ್ಡ ಹಗರಣವಾಗಿಲ್ಲ. ಮೈಸೂರಿನವರೇ ಸಿಎಂ ಆಗಿರುವಾಗ, ಇಲ್ಲೇ ಹಗರಣವಾಗಿದೆ ಎಂದು ವಿಶ್ವನಾಥ್‌ ಹೇಳಿದ್ದಾರೆ;

Update: 2025-01-28 05:50 GMT
ಎಚ್ ವಿಶ್ವನಾಥ್

ಲೋಕಾಯುಕ್ತ ಸರ್ಕಾರದ ಕೈಗೊಂಬೆ. ಲೋಕಾಯುಕ್ತರಿಗೆ ಪೋಸ್ಟಿಂಗ್ ಕೊಡೋದು ಸರ್ಕಾರ. ಸರ್ಕಾರದ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ ಎಂದು ವಿಧಾನಪರಿಷತ್ತು ಸದಸ್ಯ ಎಚ್. ವಿಶ್ವನಾಥ್ ತಿಳಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲೇ ಇಂತಹ ದೊಡ್ಡ ಹಗರಣವಾಗಿಲ್ಲ. ಮೈಸೂರಿನವರೇ ಸಿಎಂ ಆಗಿರುವಾಗ, ಇಲ್ಲೇ ಹಗರಣವಾಗಿದೆ. ಲೋಕಾಯುಕ್ತರು ಯಾವುದನ್ನೂ ಸರಿಯಾಗಿ ಪರಾಮರ್ಶೆ ಮಾಡಿಲ್ಲ. ಸಿಎಂ ಪ್ರೆಸ್ ಮೀಟ್ ಮಾಡುವಾಗ ಹಿಂದಿನಿಂದ ಸಚಿವ ಭೈರತಿ ಸುರೇಶ್ 62 ಕೋಟಿ ಸರ್‌ ಎಂದು ಹೇಳುತ್ತಾರೆ. ಇದನ್ನೇಕೆ ಲೋಕಾಯುಕ್ತ ಗಂಭೀರವಾಗಿ ತೆಗೆದುಕೊಂಡಿಲ್ಲ? ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಾಗಿ ಕೆಲಸ ಮಾಡಬೇಕು. ಯಾವುದೋ ಶಾಸಕರ ಅಧಿಕಾರಿಗಳಾಗಬಾರದು ಎಂದರು.

ಜನಾರ್ಧನ ರೆಡ್ಡಿ- ಶ್ರೀರಾಮುಲು ನಡುವೆ ವೈಮನಸ್ಸು ಕುರಿತು ಪ್ರತಿಕ್ರಿಯಿಸಿದ ಎಚ್. ವಿಶ್ವನಾಥ್ ಅವರು, ಜನಾರ್ಧನ ರೆಡ್ಡಿ ಗೆದ್ದಿದ್ದೇ ಶ್ರೀರಾಮುಲುವಿನಿಂದ, ದುಡ್ಡನ್ನು ಅವರಪ್ಪನ ಮನೆಯಿಂದ ತಂದಿದ್ದಾ? ಗಣಿ ದುಡ್ಡಲ್ಲಿ ರೆಡ್ಡಿ ಗೆದ್ದಿದ್ದಾನೆ. ಶ್ರೀರಾಮುಲು ವಾಲ್ಮೀಕಿ ಸಮುದಾಯದ ಒಬ್ಬ ನಾಯಕ. ಆತನ ಬಗ್ಗೆ ರೆಡ್ಡಿ ಹೀಗೆಲ್ಲಾ ಮಾತನಾಡಬಾರದು. ವಾಲ್ಮೀಕಿ, ದಲಿತ, ಹಿಂದುಳಿದ ವರ್ಗಗಳಿಂದ ರೆಡ್ಡಿ ಗೆದ್ದಿರೋದು. ರಾಮುಲು ಬಗ್ಗೆ ಲಘುವಾಗಿ ಮಾತನಾಡಬಾರದು ಎಂದರು. 

ಡಮ್ಮಿ ಹೋಮ್‌ ಮಿನಿಸ್ಟರ್‌

ರಾಜ್ಯದಲ್ಲಿ ದರೋಡೆ ಪ್ರಕರಣ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್. ವಿಶ್ವನಾಥ್, ಡಾ. ಪರಮೇಶ್ವರ್‌ ಒಬ್ಬ ಡಮ್ಮಿ ಹೋಮ್ ಮಿನಿಸ್ಟರ್‌. ಅವರು ಸಬ್ ಇನ್ಸ್ ಪೆಕ್ಟರ್ ವರ್ಗಾವಣೆಗಳಿಗಷ್ಟೇ ಸೀಮಿತವಾಗಿದ್ದಾರೆ. ಗೃಹ ಇಲಾಖೆಯ ಎಲ್ಲಾ ಅಧಿಕಾರ ಸಿಎಂ ಬಳಿಯೇ ಇದೆ. ರಾಜ್ಯದ ಬೆಳವಣಿಗೆ ನೋಡಿದರೆ ಹೋಮ್ ಮಿನಿಸ್ಟರ್‌ ಡಮ್ಮಿ ಆಗಿದ್ದಾರೆ ಎಂದು ಟೀಕಿಸಿದರು. 

Tags:    

Similar News