Loksabha Election 2024 | ಹಿರಿಯ ನಾಗರಿಕರು, ವಿಕಲಚೇತನ ಮತದಾರರಿಗೆ ಉಚಿತ ರ‍್ಯಾಪಿಡೋ ಸೇವೆ

ಕರ್ನಾಟಕದಾದ್ಯಂತ ವಿಕಲಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಬೈಕ್ ಟ್ಯಾಕ್ಸಿ, ಆಟೋ ಮತ್ತು ಕ್ಯಾಬ್ ಸೇವೆ ನೀಡುವುದಾಗಿ ಘೋಷಿಸಿದೆ.;

Update: 2024-04-25 08:22 GMT
ರ‍್ಯಾಪಿಡೋ ವತಿಯಿಂದ ಮತದಾರರಿಗೆ ಉಚಿತ ಪ್ರಯಾಣ
Click the Play button to listen to article

ರಾಜ್ಯದಲ್ಲಿ ನಾಳೆ (ಏ.26) ಮೊದಲನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಏ.26 ಶುಕ್ರವಾರ ನಡೆಯಲಿದ್ದು, ಈ ಹಿನ್ನಲೆಯಲ್ಲಿ ರೈಡಿಂಗ್‌ ಸರ್ವೀಸ್‌ ಸಂಸ್ಥೆಯಾಗಿರುವ ರ‍್ಯಾಪಿಡೋ (Rapido) ತನ್ನ "ಸವಾರಿ ಜಿಮ್ಮೇದಾರಕಿʼʼ ಎಂಬ ಅಭಿಯಾನದಡಿ ಕರ್ನಾಟಕದಾದ್ಯಂತ ವಿಕಲಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಬೈಕ್ ಟ್ಯಾಕ್ಸಿ, ಆಟೋ ಮತ್ತು ಕ್ಯಾಬ್ ಸೇವೆ ನೀಡುವುದಾಗಿ ಘೋಷಿಸಿದೆ.

ಬೆಂಗಳೂರು, ಮೈಸೂರು ಮತ್ತು ಮಂಗಳೂರಿನ ನಿವಾಸಿಗಳು ಏ.26 ರಂದು ಮತದಾನ ಕೇಂದ್ರಗಳಿಗೆ ಹೋಗಲು ಉಚಿತ ಸಾರಿಗೆಯನ್ನು ಪಡೆಯಲು ರಾಪಿಡೋ ಆಯಪ್‌ನಲ್ಲಿ 'VOTENOW' ಕೋಡ್ ಅನ್ನು ಬಳಸಿಕೊಂಡು ಈ ಪ್ರಯೋಜನವನ್ನು ಪಡೆಯಬಹುದು ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

"ಭಾರತೀಯ ಚುನಾವಣಾ ಆಯೋಗ (ಇಸಿಐ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದೊಂದಿಗೆ 2024 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಬೆಂಗಳೂರಿನಲ್ಲಿರುವ ವಿಕಲಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಆಟೋ ಮತ್ತು ಕ್ಯಾಬ್ ಸವಾರಿಗಳನ್ನು ವಿಸ್ತರಿಸುವ ಮೂಲಕ ರಾಪಿಡೊ ನಾಗರಿಕರಿಗೆ ಸಹಾಯ ನೀಡಲು ಮುಂದಾಗಿದೆ. ಈ ಐತಿಹಾಸಿಕ ಪ್ರಯತ್ನದ ಭಾಗವಾಗಿ 2024 ರ ಏ. 26 ರಂದು ಬೆಂಗಳೂರಿನಲ್ಲಿ ಮತದಾರರಿಗೆ ಉಚಿತ ಪ್ರಯಾಣವನ್ನು ಒದಗಿಸುವುದಾಗಿʼʼ ರಾಪಿಡೋ ಪ್ರತಿಜ್ಞೆ ಮಾಡಿದೆ.

“ಈ ಉಚಿತ ಸವಾರಿಗಳನ್ನು ನೀಡುವ ಮೂಲಕ ನಾವು ಪ್ರಜಾಪ್ರಭುತ್ವವನ್ನು ಸುಗಮಗೊಳಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ನಮ್ಮ Rapido ಕ್ಯಾಪ್ಟನ್‌ಗಳು ಚಾಲಕರಿಗಿಂತ ಹೆಚ್ಚು. ಅವರು ನಾಗರಿಕ ಸೇವೆಯ ರಾಯಭಾರಿಗಳಾಗಿ, ಹೆಚ್ಚಿನ ಮತದಾನವನ್ನು ಖಾತರಿಗೊಳಿಸುತ್ತಾರೆ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಹೆಚ್ಚು ಪ್ರಾತಿನಿಧಿಕ ಚುನಾವಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತಾರೆ" ಎಂದು ಕಂಪೆನಿಯು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

Tags:    

Similar News