ಭೂಕುಸಿತದಿಂದ ಬೆಂಗಳೂರು-ಮಂಗಳೂರು ರೈಲು ಸಂಚಾರ ಸ್ಥಗಿತ, 12 ರೈಲು ರದ್ದು
ಶುಕ್ರವಾರ ಬಾಳ್ಳುಪೇಟೆ ಮತ್ತು ಸಕಲೇಶಪುರ ನಿಲ್ದಾಣಗಳ ನಡುವೆ ಭೂಕುಸಿತ ಉಂಟಾಗಿದ್ದು, ಎರಡು ರೈಲುಗಳ ಮೇಲೆ ಪರಿಣಾಮ ಬೀರಿದ್ದು, ಮುಂದಿನ ದಿನಗಳಲ್ಲಿ 12 ಸೇವೆಗಳನ್ನು ರದ್ದುಗೊಳಿಸಲಾಗಿದೆ.;
ಸಕಲೇಶಪುರ ತಾಲ್ಲೂಕಿನ ಆಚಂಗಿ-ದೊಡ್ಡಸಾಗರ ಬಳಿ ರೈಲ್ವೆ ಹಳಿ ಮೇಲೆ ಭೂಕುಸಿತ ಉಂಟಾಗಿ ಬೆಂಗಳೂರು-ಮಂಗಳೂರು ನಡುವಿನ ರೈಲುಗಳ ಸಂಚಾರ ಸ್ಥಗಿತವಾಗಿದೆ. ಶನಿವಾರ ಮುಂಜಾನೆ ಸಕಲೇಶಪುರ ಹಾಗೂ ಬಾಳ್ಳುಪೇಟೆ ರೈಲು ಮಾರ್ಗ ಮಧ್ಯೆ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಶುಕ್ರವಾರ ರಾತ್ರಿ ಹೊರಟಿದ್ದ ಈ ಎರಡು ರೈಲುಗಳು ಹಾಸನ ಹಾಗೂ ಆಲೂರು ನಿಲ್ದಾಣದಲ್ಲಿ ಸ್ಥಗಿತವಾಗಿದೆ.
ಬೆಂಗಳೂರು-ಕಣ್ಣೂರು, ಬೆಂಗಳೂರು-ಮುರುಡೇಶ್ವರ ಮತ್ತು ಹಾಸನ-ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರೈಲು ಸಂಚಾರವೂ ಬಂದ್ ಮಾಡಲಾಗಿದೆ. ಆಲೂರು-ಹಾಸನ ಮಾರ್ಗದ ರೈಲು ಸಂಚಾರವೂ ಸ್ಥಗಿತಗೊಂಡಿದೆ. ಸಕಲೇಶಪುರ, ಯಡಕುಮಾರಿ, ಶಿರಿಬಾಗಿಲು, ಆಲೂರು ಸೇರಿ ಒಟ್ಟು ಆರು ಕಡೆ ರೈಲು ಸಂಚಾರ ನಿಂತಿತ್ತು. ದಿಢೀರ್ ರೈಲುಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರ ಪರದಾಡಿದರು. ಅಡಚಣೆಗೆಗಾಗಿ ನೈರುತ್ಯ ರೈಲ್ವೆ (SWR) ಅಧಿಕಾರಿಗಳು ಪ್ರಯಾಣಿಕರ ಗಮ್ಯಸ್ಥಾನಗಳನ್ನು ತಲುಪಲು ಪ್ರಯಾಣಿಕರಿಗೆ ಬಸ್ ಸೇವೆಗಳನ್ನು ವ್ಯವಸ್ಥೆ ಮಾಡಿದ್ದಾರೆ.
12 ರೈಲು ಸೇವೆಗಳು ರದ್ದು
ರೈಲ್ವೆ ಹಳಿ ಮೇಲೆ ಭೂಕುಸಿತ ಸಂಭವಿಸಿದ ಹಿನ್ನಲೆ ಆಗಸ್ಟ್ 17, 18 ಮತ್ತು 19 ರಂದು ನಿಗದಿಯಾಗಿದ್ದ 12 ರೈಲು ಸೇವೆಗಳನ್ನು ರದ್ದುಗೊಳಿಸುವುದಾಗಿ ನೈಋತ್ಯ ರೈಲ್ವೆ ( South Western Railway) ಘೋಷಿಸಿದೆ. 16585, 16586, 16595, 16596, 16511, 16512, 166537, 16511, 16512, 1665347, 07378, 16575, ಮತ್ತು 16576 ಈ ರೈಲುಗಳ ಸಂಚಾರವನ್ನು ರದ್ಧುಗೊಳಿಸಿಲಾಗಿದೆ.
ಆಗಸ್ಟ್ 10 ರಂದು ಇದೇ ಸ್ಥಳದಲ್ಲಿ ಭೂಕುಸಿತ ಉಂಟಾಗಿತ್ತು. ಇದೀಗ ರೈಲು ಹಳಿಗಳ ಮೇಲೆ ಮತ್ತೆ ಭೂಕುತ ಉಂಟಾಗಿರುವ ಹಿನ್ನಲೆಯಲ್ಲಿ ಈ ಮಣ್ಣನ್ನು ತೆರವುಗೊಳಿಸಲು ಕನಿಷ್ಠ 48 ಗಂಟೆಗಳು ತೆಗೆದುಕೊಳ್ಳುತ್ತದೆ ಎಂದು ಅವರು ಪ್ರಕಟಣೆಯಿಂದ ಉಲ್ಲೇಖಿಸಿದ್ದಾರೆ.
ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಇತ್ತೀಚಿನ ವಾರಗಳಲ್ಲಿ ಹಲವಾರು ಭೂಕುಸಿತಗಳು ಉಂಟಾಗಿದ್ದವು. ಇದರಿಂದಾಗಿ ವಾಹನ ಮತ್ತು ಸರಕುಗಳ ಸಂಚಾರಕ್ಕೆ ದೊಡ್ಡ ಅಡಚಣೆಯಾಗಿದೆ. ಜುಲೈ 26 ರಂದು ಸಕಲೇಶಪುರ ಮತ್ತು ಸುಬ್ರಹ್ಮಣ್ಯ ನಡುವೆ ಭೂಕುಸಿತದಿಂದ ಉಂಟಾಗಿತ್ತು. ಆಗಸ್ಟ್ 10 ರಂದು ಸಕಲೇಶಪುರ ಮತ್ತು ಆಲೂರು ಬಳಿ ಈ ಹಿಂದೆ ಭೂಕುಸಿತ ಸಂಭವಿಸಿದೆ.
ಕರ್ನಾಟಕ ಕರಾವಳಿಯಲ್ಲಿ ಭಾರೀ ಮಳೆ ಮತ್ತಷ್ಟು ಬಿಗಡಾಯಿಸಿದೆ. ಹಾಸನ ಜಿಲ್ಲೆಯ ಸಕಲೇಶಪುರದ ಹಾರ್ಲೆ ಎಸ್ಟೇಟ್ ಬಳಿ ಜುಲೈ 29 ರ ರಾತ್ರಿ ಸಂಭವಿಸಿದ ಭಾರೀ ಭೂಕುಸಿತದಿಂದಾಗಿ ಸ್ಥಳೀಯ ರಸ್ತೆಗಳು ತೀವ್ರ ಹದಗಟ್ಟಿದ್ದು ಹತ್ತಿರದ ಹಳ್ಳಿಗಳ ಮೇಲೆ ಪರಿಣಾಮ ಬೀರಿತು.