Bigg Boss Kannada | ನಕಲಿ ಸರ್ಟಿಫಿಕೇಟ್ ನೀಡಿ ಪದವಿ: ಜಗದೀಶ್ ಕುಮಾರ್ ವಕೀಲಿಕೆ ಪರವಾನಗಿ ರದ್ದು
2023 ಮಾರ್ಚ್ 23 ರಂದು ಬಾರ್ ಬಾರ್ ಕೌನ್ಸಿಲ್ ಅಸೋಸಿಯೇಷನ್ ದಾಖಲಾತಿ ಕಮಿಟಿಯ ಆದೇಶ ಹಾಗೂ 2024 ಏಪ್ರಿಲ್ 5 ರಂದು ಸಭೆಯ ಅನುಮೋದನೆ ಮೇರೆಗೆ ಕೆ.ಎನ್. ಜಗದೀಶ್ ಕುಮಾರ್ ಅವರ ವಕೀಲಿಕೆ ಪರವಾನಗಿ ರದ್ದುಗೊಳಿಸಿದೆ.;
ಬಿಗ್ ಬಾಸ್ ಸ್ಪರ್ಧಿಯಾಗಿರುವ ವಕೀಲ ಕೆ.ಎನ್.ಜಗದೀಶ್ ಕುಮಾರ್ ಅವರ ವಕೀಲಿಕೆ ಪರವಾನಗಿಯನ್ನು ಅಮಾನತು ಮಾಡಿ ದೆಹಲಿಯ ಬಾರ್ ಕೌನ್ಸಿಲ್ ಅಸೋಸಿಯೇಷನ್ ಅಧಿಸೂಚನೆ ಹೊರಡಿಸಿದೆ.
2023 ಮಾರ್ಚ್ 23 ರಂದು ಅಸೋಸಿಯೇಷನ್ ನ ದಾಖಲಾತಿ ಕಮಿಟಿಯ ಆದೇಶ ಹಾಗೂ 2024 ಏಪ್ರಿಲ್ 5 ರಂದು ನಡೆದ ಸಭೆಯ ಅನುಮೋದನೆ ಮೇರೆಗೆ ಕೆ.ಎನ್. ಜಗದೀಶ್ ಕುಮಾರ್ ಅವರ ವಕೀಲಿಕೆ ಪರವಾನಗಿ ರದ್ದುಗೊಳಿಸಿದೆ.
ಪಿಯುಸಿ ನಕಲಿ ಅಂಕಪಟ್ಟಿ ನೀಡಿ ಪದವಿ ಹಾಗೂ ಕಾನೂನು ಪದವಿ (ಎಲ್ಎಲ್ಬಿ) ಪಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ವಕೀಲಿಕೆ ಸನ್ನದು ರದ್ದು ಮಾಡಿದೆ. ಪಿಯುಸಿಯ ನಕಲಿ ಅಂಕ ಪಟ್ಟಿ ಆಧಾರದ ಮೇಲೆ ಪಡೆದ ಪದವಿ ಹಾಗೂ ಎಲ್ಎಲ್‌ಬಿ ಪದವಿ ಕೂಡ ಅಮಾನ್ಯ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ಬಾರ್ ಕೌನ್ಸಿಲ್ ಅಸೋಸಿಯೇಷನ್ ಮೂಲಕ ಪರವಾನಗಿ ಪಡೆಯದೇ ದೆಹಲಿಗೆ ಹೋಗಿ ನಕಲಿ ಅಂಕಪಟ್ಟಿ ಸಲ್ಲಿಸಿ ವಕೀಲ ವೃತ್ತಿಯ ಪರವಾನಗಿ ಪಡೆದಿದ್ದಾರೆ ಎಂದು ಆರೋಪಿಸಿ ಹಿಮಾಂಶು ಭಾಟಿ ಎಂಬುವರು ಅಲ್ಲಿನ ಬಾರ್ ಕೌನ್ಸಿಲ್ ಅಸೋಸಿಯೇಷನ್ ಗೆ ದೂರು ನೀಡಿದ್ದರು.
ಸುಮಾರು 40 ವರ್ಷ ವಯಸ್ಸಿನ ಕೆ.ಎನ್. ಜಗದೀಶ್ ಕುಮಾರ್ ಅವರು ಕಳೆದ 10 ವರ್ಷಗಳಿಂದ ವಕೀಲ ವೃತ್ತಿ ಮಾಡಿಕೊಂಡು ರಾಜಕಾರಣಿಗಳ ವಿರುದ್ಧ ಅನೇಕ ಅರೋಪಗಳನ್ನು ಮಾಡಿದ್ದರು.. ರಮೇಶ್ ಜಾರಕಿಹೊಳಿ ಪ್ರಕರಣ, ದರ್ಶನ್ ಹಾಗೂ ಮುನಿರತ್ನ ಪ್ರಕರಣಗಳಲ್ಲಿ ಕೂಡಾ ಅವರು ಅನೇಕ ರೀತಿಯ ಹೇಳಿಕೆಗಳನ್ನು ನೀಡಿದ್ದರು. ಈಗ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿದ್ದು, ಅಲ್ಲಿಯೂ ಕೂಡ ನನ್ನನ್ನು ಎದುರುಹಾಕಿಕೊಂಡರೆ ಬಿಗ್ ಬಾಸ್ ಸ್ಪರ್ಧೆ ನಡೆಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ..