ತುಮಕೂರು ವಿ.ವಿ. ಡಾಕ್ಟರೇಟ್‌ ಸ್ವೀಕರಿಸಲು ನಿರಾಕರಿಸಿದ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಟನೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ತುಮಕೂರು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಲು ನಿರ್ಣಯ ಮಾಡಿತ್ತು. ಸುದೀಪ್​ ಅವರು ಈ ಗೌರವವನ್ನು ನಿರಾಕರಣೆ ಮಾಡಿದ್ದಾರೆ.

Update: 2024-08-09 12:07 GMT
ನಟ ಸುದೀಪ್‌
Click the Play button to listen to article

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಟನೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ತುಮಕೂರು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಲು ನಿರ್ಣಯ ಮಾಡಿತ್ತು. ಸುದೀಪ್​ ಅವರು ಈ ಗೌರವವನ್ನು ನಿರಾಕರಣೆ ಮಾಡಿದ್ದಾರೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ ವೆಂಕಟೇಶ್ವರಲು ತಿಳಿಸಿದ್ದಾರೆ.

ಸುದೀಪ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಈ ಬಗ್ಗೆ ವಿವಿಯ ಸಿಂಡಿಕೇಟ್​ ಸಭೆಯಲ್ಲಿ ಚರ್ಚೆ ಮಾಡಿ ಗೌರವ ಡಾಕ್ಟರೇಟ್ ಪದವಿ ನೀಡಲು ನಿರ್ಧಾರ ಮಾಡಲಾಗಿತ್ತು. ಈ ಬಗ್ಗೆ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡಲಾಗಿತ್ತು. ಸಂಪರ್ಕದ ಬಳಿಕ ಡಾಕ್ಟರೇಟ್ ಪದವಿ ಪಡೆಯುವ ಕುರಿತು ತಿಳಿಸಲು 2 ದಿನ ಕಾಲಾವಕಾಶ ಕೇಳಿದ್ದರು. ಕೊನೆಗೆ ಸುದೀಪ್ ಅವರು ವಿಶ್ವವಿದ್ಯಾಲಯದ ನಿರ್ಧಾರಕ್ಕೆ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ. ಸಮಾಜದಲ್ಲಿ ನನಗಿಂತ ಹೆಚ್ಚು ಸೇವೆ ಮಾಡಿದ ಅನೇಕ ಹಿರಿಯರು ಇದ್ದಾರೆ. ಅಂತರವರನ್ನು ಗುರುತಿಸಿ ಡಾಕ್ಟರೇಟ್ ಗೌರವ ನೀಡಬೇಕು ಎಂದು ಹೇಳಿದ್ದಾರೆ.

ಸ್ಯಾಂಡಲ್​ವುಡ್​ನ ಖ್ಯಾತ, ಹಿರಿಯ ನಿರ್ದೇಶಕರ ಮೂಲಕವೂ ಸುದೀಪ್ ಅವರನ್ನು ಸಂಪರ್ಕಿಸಿ ಡಾಕ್ಟರೇಟ್ ಪದವಿ ಪಡೆಯುವಂತೆ ತಿಳಿಸಲಾಗಿತ್ತು. ಆದರೆ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಅಭಿನಯ, ಸಮಾಜ, ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಸುದೀಪ್​ ಅವರಿಗೆ ಡಾಕ್ಟರ್ ಪದವಿ ನೀಡಲು ನಿರ್ಧಾರ ಮಾಡಲಾಗಿತ್ತು ಎಂದು ಕುಲಪತಿ ತಿಳಿಸಿದ್ದಾರೆ.

Tags:    

Similar News