ನಿಫಾ ವೈರಸ್ | ಬೆಂಗಳೂರಿನಲ್ಲಿದ್ದ ಕೇರಳ ವ್ಯಕ್ತಿ ನಿಫಾ ವೈರಸ್ ಸೋಂಕಿಗೆ ಬಲಿ
ಬೆಂಗಳೂರಿನಲ್ಲಿ ವಾಸವಿದ್ದ ಮಲಪ್ಪುರಂ ಮೂಲದ ವ್ಯಕ್ತಿ ಇತ್ತೀಚೆಗೆ ನಿಫಾ ವೈರಸ್ ಸೋಂಕು ತಗುಲಿ ಸಾವನ್ನಪ್ಪಿದ್ದಾರೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ (ಸೆ.15) ಹೇಳಿದ್ದಾರೆ.;
ಮಲಪ್ಪುರಂನಲ್ಲಿ ಇತ್ತೀಚೆಗೆ ಸಾವನ್ನಪ್ಪಿದ ವ್ಯಕ್ತಿಗೆ ನಿಫಾ ವೈರಸ್ ಸೋಂಕು ತಗುಲಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ (ಸೆ.15) ಹೇಳಿದ್ದಾರೆ. ಆ ವ್ಯಕ್ತಿ ಬೆಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿದ್ದರು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದ್ದು, ಕರ್ನಾಟಕದಲ್ಲಿ ಕೂಡ ಪ್ರಕರಣದ ಕುರಿತು ಆರೋಗ್ಯ ಇಲಾಖೆ ಕಣ್ಗಾವಲು ವಹಿಸಿದೆ.
ಇದಕ್ಕೂ ಮುನ್ನ, ಶನಿವಾರದಂದು ಜಿಲ್ಲೆಯ ಆರೋಗ್ಯ ಅಧಿಕಾರಿಯೊಬ್ಬರು ಮಾದರಿಯನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ದೃಢಪಡಿಸಿದರು. ಆದರೆ ಫಲಿತಾಂಶಗಳು ಇನ್ನೂ ಲಭ್ಯವಿಲ್ಲ ಎಂದು ಹೇಳಿದರು. ರೋಗಿಯು ಸೆ.9 ರಂದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ದೃಢಪಡಿಸಿದರು. ನಂತರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ನಿಫಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಮಲಪ್ಪುರಂನ ಬಾಲಕ ಜುಲೈ 21 ರಂದು ಸಾವನ್ನಪ್ಪಿದ್ದ. ಇದು ರಾಜ್ಯದಲ್ಲಿ ಈ ವರ್ಷ ಮೊದಲ ನಿಫಾ ಸೋಂಕು ದೃಢಪಟ್ಟ ಪ್ರಕರಣವಾಗಿದೆ.
2018, 2021 ಮತ್ತು 2023 ರಲ್ಲಿ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಮತ್ತು 2019 ರಲ್ಲಿ ಎರ್ನಾಕುಲಂ ಜಿಲ್ಲೆಯಲ್ಲಿ ನಿಫಾ ಪ್ರಕರಣಗಳು ವರದಿಯಾಗಿದ್ದೆವು. ಮತ್ತು ಕೋಝಿಕ್ಕೋಡ್, ವಯನಾಡ್, ಇಡುಕ್ಕಿ, ಮಲಪ್ಪುರಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಬಾವಲಿಗಳಲ್ಲಿ ನಿಫಾ ವೈರಸ್ ಪ್ರತಿಕಾಯಗಳು ದೃಢಪಟ್ಟಿದ್ದವು.
ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ 24 ವರ್ಷ ವಿದ್ಯಾರ್ಥಿ ನಿಫಾಗೆ (Nipah Virus) ಸಾವನ್ನಪ್ಪಿರುವಂತಹ ಘಟನೆ ಕೇರಳದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ಮಲಪ್ಪುರಂ ಮೂಲದವರು ಎಂದು ತಿಳಿದುಬಂದಿದೆ. ವಿದ್ಯಾರ್ಥಿಗೆ ಅಕ್ಯೂಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್ (ಎಆರ್‌ಡಿಎಸ್) ಕಾಣಿಸಿಕೊಂಡಿದ್ದು, ವಿದ್ಯಾರ್ಥಿಯ ರಕ್ತ ಹಾಗೂ ಸಿರಂ ಸ್ಯಾಂಪಲ್ನಲ್ಲಿ ನಿಫಾ ಪಾಸಿಟಿವ್ ಕಂಡುಬಂದಿದೆ. ಹೀಗಾಗಿ ಸೆಪ್ಟೆಂಬರ್ 8 ರಂದು ಕೇರಳದಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿದ್ದ ವಿದ್ಯಾರ್ಥಿ
ಮೃತ ವ್ಯಕ್ತಿ ಬೆಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಸೆಪ್ಟೆಂಬರ್ 5ರಂದು ವಿದ್ಯಾರ್ಥಿಗೆ ಜ್ವರ ಬಂದಿದ್ದರಿಂದ ಬೆಂಗಳೂರಿನ ಕ್ಲಿನಿಕ್ನಲ್ಲಿ ಚಿಕಿತ್ಸೆ ನೀಡಲಾಗಿದೆ. ಸೆಪ್ಟೆಂಬರ್ 6ರಂದು ವಾಂತಿ ಆಗಿದ್ದು, ಸೆಪ್ಟೆಂಬರ್ 7ರಂದು ಆರೋಗ್ಯ ಗಂಭೀರವಾಗಿದೆ. ಹೀಗಾಗಿ ತಕ್ಷಣ ಬೆಂಗಳೂರಿನ ಎಂಇಎಸ್ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿ ಮೃತಪಟ್ಟಿದ್ದಾರೆ.
ಅತ್ತ ವಿದ್ಯಾರ್ಥಿ ನಿಫಾಗೆ ಸಾವನ್ನಪ್ಪುತ್ತಿದ್ದಂತೆ ಕೇರಳ ರಾಜ್ಯದಲ್ಲಿ ಹೈ ಟೆನ್ಷನ್ ಶುರುವಾಗಿದೆ. ಹೀಗಾಗಿ ಕೇಂದ್ರ ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಇಂದು ಮಹತ್ವದ ಸಭೆ ಮಾಡಲಾಗಿದೆ. ರಾಜ್ಯದಲ್ಲಿ ನಿಫಾಗೆ ಮೃತಪಟ್ಟ ವಿದ್ಯಾರ್ಥಿ ಸಂಪರ್ಕಕ್ಕೆ ಬಂದವರ ಬಗ್ಗೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ.