'ಲೈಂಗಿಕ ದೌರ್ಜನ್ಯ ತಡೆ ಸಮಿತಿ' ರಚಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಕರ್ನಾಟಕ ಫಿಲಂ ಚೇಂಬರ್ ಲೈಂಗಿಕ ದೌರ್ಜನ್ಯ ತಡೆ ಸಮಿತಿಯನ್ನು (ಆಂತರಿಕ ದೂರು ಸಮಿತಿ) ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ (POSH Act) ಮಾರ್ಗದರ್ಶನದಂತೆ ರಚಿಸಿದ್ದು ಚಲನಚಿತ್ರ ನಿರ್ದೇಶಕಿ, ನಿರ್ಮಾಪಕಿ ಕವಿತಾ ಲಂಕೇಶ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ.

Update: 2024-12-02 14:26 GMT
ಕರ್ನಾಟಕ ವಾಣಿಜ್ಯ ಮಂಡಳಿ
Click the Play button to listen to article

ಕೇರಳ ಸಿನಿಮಾ ಕ್ಷೇತ್ರದಲ್ಲಿ ನಟಿಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ಬಹಿರಂಗಪಡಿಸಿದ ಹೇಮಾ ಸಮಿತಿ ವರದಿ ಬೆನ್ನಲ್ಲೇ  ಕನ್ನಡ ಚಿತ್ರರಂಗದಲ್ಲೂ  ಕಲಾವಿದೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ತಡೆಗಟ್ಟಲು ಸಮಿತಿಯೊಂದನ್ನು ರಚಿಸಬೇಕು ಎನ್ನುವ ಕೂಗು ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ 'ಲೈಂಗಿಕ ದೌರ್ಜನ್ಯ ತಡೆ ಸಮಿತಿ'ಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ರಚಿಸಿದೆ. ಈ ಸಮಿತಿಯಲ್ಲಿ ಹನ್ನೊಂದು ಜನರಿದ್ದು, ಚಲನಚಿತ್ರ ನಿರ್ದೇಶಕಿ, ನಿರ್ಮಾಪಕಿ ಕವಿತಾ ಲಂಕೇಶ್ ಅವರು ಈ ಅಧ್ಯಕ್ಷರಾಗಿದ್ದಾರೆ. 

ಕರ್ನಾಟಕ ಫಿಲಂ ಚೇಂಬರ್ ಲೈಂಗಿಕ ದೌರ್ಜನ್ಯ ತಡೆ ಸಮಿತಿಯನ್ನು (ಆಂತರಿಕ ದೂರು ಸಮಿತಿ) ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ (POSH Act) ಮಾರ್ಗದರ್ಶನದಂತೆ ರಚಿಸಿದೆ.

ಸಮಿತಿಯನ್ನು ಆಯಾ ಅವಧಿಯ ಚುನಾಯಿತ ಕೆಎಫ್‌ಸಿಸಿ ಅಧ್ಯಕ್ಷರು (ಕಾಯಂ ಸದಸ್ಯರು), ಚಲನಚಿತ್ರ ಕಲಾವಿದೆ, ನಿರ್ಮಾಪಕಿ ಪ್ರಮೀಳಾ ಜೋಷಾಯ್. ಮಹಿಳಾ ಹಕ್ಕು ಹೋರಾಟಗಾರ್ತಿ ವಿಮಲಾ ಕೆ ಎಸ್. ವಕೀಲರು ಮತ್ತು ಹೋರಾಟಗಾರ್ತಿ ರಾಜಲಕ್ಷ್ಮೀ ಅಂಕಲಗಿ, ಲಿಂಗತ್ಯ, ಅಲ್ಪಸಂಖ್ಯಾತರ ಪರ ಹೋರಾಟಗಾರರು ಮಲ್ಲು ಕುಂಬಾರ್, ನಟಿ ಶೃತಿ ಹರಿಹರನ್, ನಿರ್ಮಾಪಕ ಮತ್ತು ಸಿನಿಮಾ ವಿತರಕ ಎನ್ ಎಂ ಸುರೇಶ್, ಪತ್ರಕರ್ತರು ಮುರಳೀಧರ ಖಜಾನೆ, ಸ್ತ್ರೀವಾದಿ ಮತ್ತು ರಂಗಕರ್ಮಿ ಶಶಿಕಾಂತ್ ಯದನಹಳ್ಳಿ ಹಾಗು ಚಲನಚಿತ್ರ ನಿರ್ಮಾಪಕ ಸಾ ರಾ ಗೋವಿಂದು ಸಮಿತಿ ಸದಸ್ಯರಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿನ ಮಹಿಳಾ ಕಲಾವಿದೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನ ನಡೆಸಲು ಕೇರಳ ಮಾದರಿಯಲ್ಲೇ ಸಮಿತಿ ರಚನೆಗೆ ಆಗ್ರಹಿಸಿ ಫಿಲ್ಡ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ನಿಯೋಗ ಸಿಎಂಗೆ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸಮಿ ರಚಿಸಲಾಗಿದೆ. 

Tags:    

Similar News