ಭಾರತ ಮತ್ತು ಪಾಕಿಸ್ತಾನದ ನಡುವೆ ಉಲ್ಬಣಗೊಂಡಿದ್ದ ಮಿಲಿಟರಿ ಸಂಘರ್ಷಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಿದೆ. ಶನಿವಾರ ಸಂಜೆ (ಮೇ 10) ಎರಡೂ ದೇಶಗಳು ಯುದ್ಧವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂಬುದಾಗಿ ವರದಿಯಾಗಿದೆ. ಭಾರತದ ವಿದೇಶ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಈ ಕುರಿತು ಹೇಳಿದ್ದಾರೆ. ಸಂಘರ್ಷ ವಿರಾಮ ಮೇ 12ರ ಮಧ್ಯಾಹ್ನ 12 ಗಂಟೆಯಿಂದ ಜಾರಿಗೆ ಬರಲಿದೆ. ಅಲ್ಲಿಯವರೆಗೆ ಯಾವುದೇ ಸೈನಿಕ ಕಾರ್ಯಾಚರಣೆಗಳು ನಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಭಾರತದ ಘೋಷಣೆಗೂ ಕೆಲವೇ ನಿಮಿಷಗಳ ಮೊದಲು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 'ಟ್ರುಥ್' ಸಾಮಾಜಿಕ ಜಾಲತಾಣದಲ್ಲಿ, ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ದೀರ್ಘ ಚರ್ಚೆಗಳ ನಂತರ ಭಾರತ ಮತ್ತು ಪಾಕಿಸ್ತಾನ "ಪೂರ್ಣ ಮತ್ತು ತಕ್ಷಣದ ಯುದ್ಧವಿರಾಮ"ಕ್ಕೆ ಒಪ್ಪಿರುವುದಾಗಿ ಹೇಳಿಕೊಂಡಿದ್ದರು. ಈ ವೇಳೆ ಅವರು, ಎರಡೂ ದೇಶಗಳ 'ಯೋಚನೆಗಳನ್ನು' ಅಭಿನಂದಿಸಿದ್ದಾರೆ. ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಮತ್ತು ಉಪಾಧ್ಯಕ್ಷ ಜೆ.ಡಿ. ವಾನ್ಸ್ ಅವರು ಕಳೆದ 48 ಗಂಟೆಗಳಲ್ಲಿ ಉಭಯ ದೇಶಗಳ ಉನ್ನತ ನಾಯಕರೊಂದಿಗೆ (ಪ್ರಧಾನಮಂತ್ರಿಗಳು, ವಿದೇಶಾಂಗ ಸಚಿವರು, ಸೇನಾ ಮುಖ್ಯಸ್ಥ, ರಾಷ್ಟ್ರೀಯ ಭದ್ರತಾ ಸಲಹೆಗಾರರು) ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಯುದ್ಧವಿರಾಮ ಜಾರಿಯಾದ ಬಳಿಕ ಎರಡೂ ದೇಶಗಳ ಪ್ರತಿನಿಧಿಗಳು ಚರ್ಚೆಗಳನ್ನು ನಡೆಸಲಿದ್ದಾರೆ. ಈ ಚರ್ಚೆಗಳಲ್ಲಿ ಸೇನಾ ವಾಪಸಾತಿ, ಎರಡೂ ಕಡೆಯ ಷರತ್ತುಗಳು, ಇಂಡಸ್ ವಾಟರ್ ಟ್ರೀಟಿ (IWT) ಸೇರಿದಂತೆ ವಿವಿಧ ಒಪ್ಪಂದಗಳಿಗೆ ಸಂಬಂಧಿಸಿದಂತೆ ಮೇ7ರ ಮೊದಲಿನ ಸ್ಥಿತಿಗೆ ಮರಳಲಿದೆ.ಕದನ ವಿರಾಮದ ಬಗ್ಗೆ ದ ಫೆಡರಲ್ ನಡೆಸಿದ ವಿಶ್ಲೇಷಣೆಗೆ ಈ ಲಿಂಕ್ ಕ್ಲಿಕ್ ಮಾಡಿಪಾಕಿಸ್ತಾನ ಹೇಳಿಕೆಭಾರತದ ಕ್ಷಿಪಣಿ ಹಾಗೂ ಡ್ರೋಣ್ ಗಳು ತನ್ನ ಮೂರು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.ಪಾಕಿಸ್ತಾನದ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಅವರು ಶನಿವಾರ (ಮೇ 10) ಬೆಳಗಿನ ಜಾವ 4 ಗಂಟೆಗೆ ಇಸ್ಲಾಮಾಬಾದ್ನಲ್ಲಿ ಕರೆದ ತುರ್ತು ಮಾಧ್ಯಮಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ್ದಾರೆ.ರಾವಲ್ಪಿಂಡಿಯ ಚಕ್ಲಾಲಾದ ನೂರ್ ಖಾನ್, ಚಕ್ವಾಲ್ ನ ಮುರಿದ್ ಹಾಗೂ ಜಾಂಗ್ ಜಿಲ್ಲೆಯ ಶೋರ್ಕೋಟ್ ಬಳಿ ಇರುವ ರಫೀಕಿ ವಾಯುನೆಲೆಗಳ ಮೇಲೆ ಭಾರತದ ಕ್ಷಿಪಣಿ ಹಾಗೂ ಡ್ರೋಣ್ ಗಳು ದಾಳಿ ನಡೆಸಿವೆ. ಭಾರತದ ದಾಳಿಯನ್ನು ಸಮರ್ಥವಾಗಿ ವಿಫಲಗೊಳಿಸಲಾಗಿದೆ. ವಾಯುನೆಲೆಗಳು ಸುರಕ್ಷಿತವಾಗಿವೆ ಎಂದು ಹೇಳಿದ್ದಾರೆ.ಭಾರತದ ಕೆಟ್ಟ ಕೃತ್ಯ: ಪಾಕ್ ಆರೋಪಭಾರತವು ತನ್ನ ಜೆಟ್ಗಳ ಮೂಲಕ ಕ್ಷಿಪಣಿಗಳನ್ನು ಹಾರಿಸಿರುವುದು ಕೆಟ್ಟ ಕೃತ್ಯ. ಭಾರತದ ಈ ದಾಳಿಯನ್ನು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯಿಂದ ತಡೆಹಿಡಿಯಲಾಗಿದೆ. ಭಾರತದ ಈ ಕೃತ್ಯ ಮಾರಕ ಯುದ್ಧಕ್ಕೆ ತಳ್ಳುವಂತಿದೆ. ಭಾರತದ ಈ ಆಕ್ರಮಣಕ್ಕೆ ಪಾಕಿಸ್ತಾನ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಹೇಳಿದರು.ಭಾರತದದೊಂದಿಗಿನ ಸಂಘರ್ಷದ ಕುರಿತು ಪ್ರಶ್ನೆಗಳಿಗೆ ಚೌಧರಿ ಅವರು ಯಾವುದೇ ಉತ್ತರ ನೀಡದೇ ಮಾಧ್ಯಮಗೋಷ್ಠಿ ಮುಕ್ತಾಯಗೊಳಿಸಿ ಹೊರ ನಡೆದರು.ವಾಯುಪ್ರದೇಶ ಸ್ಥಗಿತಎಲ್ಲಾ ರೀತಿಯ ವಿಮಾನ ಪ್ರಯಾಣಗಳಿಗೆ ತನ್ನ ವಾಯುಪ್ರದೇಶವನ್ನು ಪಾಕಿಸ್ತಾನ ಸ್ಥಗಿತಗೊಳಿಸಿದೆ. ಈ ಕುರಿತು ಪಾಕಿಸ್ತಾನ ಏರ್ಪೋರ್ಟ್ ಅಥಾರಿಟಿ (ಪಿಎಎ) ಅಧಿಸೂಚನೆ ಹೊರಡಿಸಿದ್ದು, ವಾಯುಪ್ರದೇಶವನ್ನು ಶನಿವಾರ (ಮೇ 10) ಮುಂಜಾನೆ 3.15 ರಿಂದ ಮಧ್ಯಾಹ್ನ 12 ರವರೆಗೆ ಮುಚ್ಚಲಾಗಿದೆ ಎಂದು ತಿಳಿಸಿದೆ. ಮಧ್ಯಾಹ್ನ 12 ರ ಬಳಿಕ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು ಪಿಎಎ ಹೇಳಿದೆ.ಏಪ್ರಿಲ್ 22 ರ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತದ ಸೇನಾ ಪಡೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) 9 ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿತ್ತು. ಇದಾದ ಬಳಿಕ ಪಾಕಿಸ್ತಾನವು ಭಾರತದ ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ಮಧ್ಯೆ ಉದ್ವಿಗ್ನತೆ ಹೆಚ್ಚಾಗಿದೆ.ಮುಂದುವರಿದ ಡ್ರೋಣ್ ದಾಳಿಜಮ್ಮು ಕಾಶ್ಮೀರದಿಂದ ಗುಜರಾತ್ವರೆಗಿನ ಭಾರತದ 26 ಸ್ಥಳಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸತತ ಎರಡನೇ ದಿನವಾದ ಶುಕ್ರವಾರ ರಾತ್ರಿ ಕೂಡ ಡ್ರೋಣ್ ದಾಳಿ ನಡೆಸಿತು. ವಿಮಾನ ನಿಲ್ದಾಣ ಮತ್ತು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ದಾಳಿಯನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆ ವಿಫಲಗೊಳಿಸಿತು ಎಂದು ರಕ್ಷಣಾ ಸಚಿವಾಲಯ ಹೇಳಿದೆ.